Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
100 ವರ್ಷಗಳ ಬಳಿಕ ಸೂಪರ್‌ಮೂನ್ ದಿನ ಉಂಟಾಗಲಿದೆ ಈ ಯೋಗ: ಕಾರ್ತಿಕ ಹುಣ್ಣಿಮೆ ಬಳಿಕ 3 ರಾಶಿಗಳ ಸಂಪತ್ತು ಹೆಚ್ಚಲಿದೆ
ನವೆಂಬರ್ 15ಕ್ಕೆ ಕಾರ್ತಿಕ ಹುಣ್ಣಿಮೆ, ಅಲ್ಲದೆ ವರ್ಷದ ಕೊನೆಯ ಸೂಪರ್ ಮೂನ್ ಕೂಡ ಇದೇ ದಿನ ಕಂಡು ಬರಲಿದೆ. ಜ್ಯೋತಿಷ್ಯ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವದ್ದಾಗಿದೆ. ಸೂಪರ್ ಮೂನ್ ಎಂದರೇನು? ಜ್ಯೋತಿಷ್ಯವು ಸೂಪರ್ ಮೂನ್ ಬಳಿಕ ಕೆಲವೊಂದು ರಾಶಿಗಳಿಗೆ ತುಂಬಾನೇಅದ್ಭುತವಾಗಿರಲಿದೆ ಎಂದು ಹೇಳಿದೆ, ಈ ಎಲ್ಲದರ ಬಗ್ಗೆ ಮಾಹಿತಿ ನೋಡೋಣ:

ಮೊದಲಿಗೆ ಸೂಪರ್ ಮೂನ್ ಎಂದರೇನು?
ಸೂಪರ್‌ಮೂನ್ ದಿನದಂದು ಚಂದ್ರ ದೊಡ್ಡ ಬೃಹದಾಕಾರದಲ್ಲಿ ಗೋಚರಿಸುತ್ತಾನೆ. ಈ ದಿನ ಚಂದ್ರ ಮತ್ತಷ್ಟು ಪ್ರಕಾಶಮಾನವಾಗಿ ಗೋಚರಿಸುತ್ತಾರೆ. ಹುಣ್ಣಿಮೆಯಂದು ಚಂದ್ರನು ಭೂ ಕಕ್ಷೆಯ ಸಮೀಪ ಬರುತ್ತಾನೆ, ಹೀಗಾಗಿ ಚಂದ್ರನ ಗಾತ್ರ ಮತ್ತಷ್ಟು ದೊಡ್ಡದಾಗಿ ಗೋಚರಿಸುವುದು. ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು, ಚಂದ್ರ ದೊಡ್ಡ ಆಕಾರದಲ್ಲಿ ಗೋಚರಿಸುತ್ತಾನೆ.
ಕಾರ್ತಿಕ ಪೂರ್ಣಿಮೆಯಂದು ಸೂಪರ್ ಮೂನ್ : ಪ್ರತಿಮಾಸ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತದೆ, ಆದರೆ ಕೆಲ ಹುಣ್ಣಿಮೆ, ಕೆಲ ಅಮವಾಸ್ಯೆ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿರುತ್ತದೆ. ನವೆಂಬರ್‌ನಲ್ಲಿ ಹುಣ್ಣಿಮೆ 15ಕ್ಕೆ ಬಂದಿದೆ, ಈಗ ಕಾರ್ತಿಕ ಮಾಸ ಕೂಡ ಹೌದು, ಕಾರ್ತಿಕ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಕಾರ್ತಿಕ ಹುಣ್ಣಿಮೆ ಮಾಡುವ ನದಿ ಸ್ನಾನ, ಕಾರ್ತಿಕ ಹುಣ್ಣಿಮೆಯಂದು ಮಾಡುವ ದಾನ ಎಲ್ಲದಕ್ಕೂ ತುಂಬಾನೇ ಮಹತ್ವವಿದೆ.
ಕಾರ್ತಿಕ ಹುಣ್ಣಿಮೆಯಂದು ಉಂಟಾಗಲಿದೆ ಗಜಕೇಸರಿ ಯೋಗ
ಕಾರ್ತಿಕ ಪೂರ್ಣಿಮೆಯಂದು ರಾತ್ರಿ ಗಜಕೇಸರಿ ಯೋಗ ಉಂಟಾಗಿದೆ, ಇದೇ ದಿನ ಬುಧಾದಿತ್ಯ ರಾಜ ಯೋಗವೂ ಇದೆ, ಈ ಯೋಗ ಕಾರ್ತಿಕ ಪೂರ್ಣಿಮೆಯಂದು ಸುಮಾರು 30 ವರ್ಷಗಳ ಬಳಿಕ ಸಂಭವಿಸಲಿದೆ. ಅಲ್ಲದೆ ಇದೇ ದಿನ ವರಿಯಾನ್ ಯೋಗ ಉಂಟಾಗುತ್ತದೆ, ಈ ಯೋಗ ಸುಮಾರು 100 ವರ್ಷಗಳ ಬಳಿಕ ಈ ವಿಶೇಷ ದಿನ ಇರಲಿದೆ. ಈ ಎಲ್ಲಾ ಯೋಗ ಕೆಲ ರಾಶಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಈ ವಿಶೇಷ ಯೋಗದಿಂದಾಗಿ ಈ ರಾಶಿಗಳ ಸಂಪತ್ತು ವೃದ್ಧಿಸಲಿದೆ:
ಮೇಷ ರಾಶಿ
ಕಾರ್ತಿಕ ಹುಣ್ಣಿಮೆಯಂದು ಉಂಟಾಗುವ ಶುಭ ಯೋಗದಿಂದಾಗಿ ಮೇಷ ರಾಶಿಯವರ ಬದುಕಿನಲ್ಲಿ ಅದ್ಭುತ ಬೆಳವಣಿಗೆಯಾಗಲಿದೆ. ಶ್ರೀ ವಿಷ್ಣುವಿನ ಕೃಪೆ ನಿಮ್ಮ ಮೇಲಿರಲಿದೆ, ಇದರಿಂದಾಗಿ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಯೋಗವು ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುವಿರಿ, ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಆಸೆ ಈಡೇರಲಿದೆ. ಮನೆ ಕಟ್ಟಬೇಕು, ಆಸ್ತಿ ಖರೀದಿಸಬೇಕು, ವಾಹನ ಖರೀದಿಸಬೇಕು ಈ ಬಗೆಯ ಬಯಕೆ ಇದ್ದರೆ ಈ ಯೋಗದ ಬಲದಿಂದಾಗಿ ನೆರವೇರಲಿದೆ.
ತುಲಾ ರಾಶಿ
ಈ ಎಲ್ಲಾ ಯೋಗಗಳ ಬಲದಿಂದಾಗಿ ತುಲಾ ರಾಶಿಯವರು ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಕುಟುಂಬದಲ್ಲಿ ಪ್ರಗತಿ ಕಂಡು ಬರಲಿದೆ, ನಿಮ್ಮ ಆರ್ಥಿಕ ಸ್ಥಿತಿ ಪ್ರಗತಿಯಾಗುವುದರಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆಯನ್ನು ಪಡೆಯಲಿದೆ. ನಿಮ್ಮ ಅಂತಸ್ತು ಹೆಚ್ಚಾಗಲಿದೆ.
ಮೀನ ರಾಶಿ
ಈ ಯೋಗ ಮೀನ ರಾಶಿಯವಿರಿಗೂ ವಿಶೇಷ ಆರ್ಥಿಕ ಪ್ರಯೋಜನ ನೀಡಲಿದೆ. ಶನಿ ಸಾಡೇಸಾತಿ ಇದ್ದರೂ ಈ ಯೋಗದ ಬಲದಿಂದಾಗಿ ಹೆಚ್ಚಿನ ಆರ್ಥಿಕ ತೊಂದರೆಗಳು ಉಂಟಾಗುವುದಿಲ್ಲ. ನಿಮ್ಮ ಸಂಪತ್ತು ವೃದ್ಧಿಸಲಿದೆ, ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
