ನವೆಂಬರ್‌ನಲ್ಲಿ ವೃಶ್ಚಿಕ ರಾಶಿಗೆ ಸೂರ್ಯ ಪರ್ಯಟನೆ: ಈ ರಾಶಿಯವರ ಹಣ, ಆಸ್ತಿ, ಉದ್ಯೋಗದಲ್ಲಿದೆ ಶುಭಕಾಲ!

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಹಾಗೆ ಸೂರ್ಯನ ಸಂಚಾರವನ್ನು ಸಹ ಇಡೀ ಸೌರಮಂಡಲದ ಕೇಂದ್ರಬಿಂದುವಾಗಿ ನೋಡಲಾಗಿದೆ. ಸೂರ್ಯನ ಸಂಚಾರದಿಂದ ಎಲ್ಲಾ ರಾಶಿಗಳು, ಎಲ್ಲಾ ಗ್ರಹಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.

ಈಗ ನವೆಂಬರ್ ತಿಂಗಳು ಕೂಡ ಬಹಳಷ್ಟು ಅಚ್ಚರಿಯ ಫಲಿತಾಂಶ ತರುವಂತಹ ಗ್ರಹಗಳ ಸಂಚಾರವನ್ನು ನೋಡಬಹುದಾಗಿದೆ. ಅದ್ರಲ್ಲೂ ಸೂರ್ಯ ಸಂಚಾರದಿಂದ ಹಲವು ಗ್ರಹಗಳು ರಾಶಿಗಳ ಮೇಲೆ ಪರಿಣಾಮ ಬೀರುವುದು ಸಹಜ. ಹಾಗೆ ನವೆಂಬರ್ 16ರಂದು ತುಲಾ ರಾಶಿಯಿಂದ ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾನೆ. ಮಧ್ಯಾಹ್ನ 1:44ರ ಮುಹೂರ್ತದಲ್ಲಿ ಸೂರ್ಯ ಸಂಚಾರ ನಡೆಯಲಿದೆ.

Sun Transits Scorpio In November People Of This Zodiac Sign Will Be Lucky In Money

ಹಾಗೆ ಆತ ಮುಂದಿನ ಒಂದು ತಿಂಗಳ ಕಾಲ ವೃಶ್ಚಿಕ ರಾಶಿಯಲ್ಲೇ ನೆಲೆಸಲಿದ್ದಾನೆ. ಈ ಸಮಯದಲ್ಲಿ ಹಲವು ರೀತಿಯ ಶುಭಕರ ಹಾಗೆ ಧನಾತ್ಮಕ ಪರಿಣಾಮಗಳ ನೋಡಬಹುದು. ಅದ್ರಲ್ಲೂ ಸೂರ್ಯನನ್ನು ಆರ್ಥಿಕ ಪ್ರಗತಿ, ವರ್ಚಸ್ಸು ವೃದ್ಧಿ, ಸಂಬಂಧ, ವ್ಯವಹಾರ ಸಂಬಂಧವಾಗಿ ಉತ್ತಮ ಗ್ರಹವೆಂದು ಪರಿಗಣಿಸಲಾಗುತ್ತದೆ. ಸದ್ಯ ಸೂರ್ಯನ ಈ ರಾಶಿ ಬದಲಾವಣೆಯಿಂದಾಗಿ ಯಾರಿಗೆಲ್ಲಾ ಶುಭದಾಯಕ ಯಾರಿಗೆ ಅದೃಷ್ಟಕರ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಶುಭವಾಗಿರುತ್ತದೆ. ನಿಮ್ಮ ವ್ಯವಹಾರದಿಂದ ನೀವು ಬಯಸಿದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಪ್ರಮುಖ ನಿರ್ಧಾರಗಳ ತೆಗೆದುಕೊಳ್ಳುವುದು ನಿಮಗೆ ಲಾಭದಾಯಕವಾಗಿ ಬದಲಾಗುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮೆಲ್ಲಾ ಅಡ್ಡಿ ಆತಂಕಗಳು ದೂರಾಗಲಿದೆ. ಕುಟುಂಬ ಸಂಬಂಧಗಳು ಗಟ್ಟಿಯಾಗುತ್ತವೆ. ಮಾನಸಿಕ ಸ್ಥಿತಿ ಕೂಡ ಸುಧಾರಿಸಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಸಮಯವಿದು. ಹೊಸ ಜನರೊಂದಿಗೆ ನೀವು ಹೊಸ ವ್ಯವಹಾರ ಆರಂಭಿಸಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಸಹೋದರರೊಂದಿಗಿದ್ದ ಮನಸ್ತಾಪಗಳು ನಿವಾರಣೆ ಆಗುವ ಸಾಧ್ಯತೆ ಹೆಚ್ಛಾಗಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಇದು ಬದಲಾವಣೆಗಳಿಂದ ತುಂಬಿದ ಸಮಯವಾಗಿರುತ್ತದೆ. ನೀವು ಹೊಸ ಆಸ್ತಿಯನ್ನು ಗಳಿಸುವಿರಿ. ಮನೆಗೆ ಹೊಸ ವಾಹನವನ್ನು ತರುವ ನಿಮ್ಮ ಆಸೆ ಈಡೇರುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರು ವೈವಾಹಿಕ ಜೀವನದ ಸುಖ ಅನುಭವಿಸಬಹುದು. ಮಕ್ಕಳೊಂದಿಗೆ, ಪ್ರೀತಿ ಪಾತ್ರರೊಂದಿಗೆ ಉತ್ತಮ ಜೀವನ ನಡೆಸುವ ಸಮಯವಿದು. ಆಸ್ತಿ ಅಥವಾ ಪೂರ್ವಜರ ವೃತ್ತಿ ಸಂಬಂಧಿತ ವಿಚಾರವಾಗಿ ಧನಾತ್ಮಕ ವಿಚಾರಗಳು ನಡೆಯಲಿವೆ. ಯಾರಿಗಾದರು ನೀಡಿದ್ದ ಹಣ ಮರಳಿ ಪಡೆಯಬಹುದು. ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವುದು ಒತ್ತಡ ತಂದರೂ ಅದರಿಂದ ಶುಭವಿದೆ. ಗೃಹಿಣಿಯರು ಸಾಲ ಪಡೆಯುವ ಉದ್ದೇಶದಿಂದ ಕೆಲಸಗಳ ಆರಂಭಿಸಿದ್ದರೆ ಅದರಲ್ಲಿ ಶುಭವಿದೆ.

ವೃಶ್ಚಿಕ ರಾಶಿ

ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ನೀವು ಆತ್ಮವಿಶ್ವಾಸದಲ್ಲಿ ಹೆಚ್ಚಳವನ್ನು ಅನುಭವಿಸುವಿರಿ. ಬಹುದಿನದ ಒಪ್ಪಂದಗಳನ್ನು ಆತ್ಮಸ್ಥೈರ್ಯದಿಂದ ಮಾಡಿ ಮುಗಿಸುವಿರಿ. ಅಭಿವೃದ್ಧಿ ಸಂಬಂಧಿತ ವಿಚಾರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಹುಡುಕಿ ಬರಲಿದೆ. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಬಹುದು. ವ್ಯವಹಾರವು ಲಾಭ ತರಲಿದೆ. ಆರ್ಥಿಕ ವಿಚಾರವಾಗಿ ನಿಮ್ಮಲ್ಲಿ ಹಣಕಾಸಿನ ಹರಿವು ನೋಡಬಹುದು. ನಿಮ್ಮ ವಾಹನ ಸಂಬಂಧಿತ ವಿಚಾರಗಳು ಶುಭ ತರಲಿವೆ. ಹಾಗೆ ಬಹಳ ಕಾಲದಿಂದ ಬ್ಯಾಂಕಿಂಗ್ ವಿಚಾರವಾಗಿ ಅಲೆದಾಡುತ್ತಿದ್ದರೆ ನವೆಂಬರ್ ತಿಂಗಳಲ್ಲಿ ಈ ಅಡೆತಡೆ ನಿವಾರಣೆಯಾಗುವುದು ನೋಡಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

Sun Transits Scorpio In November: People Of This Zodiac Sign Will Be Lucky In Money

Sun will enter Scorpio from Libra on November 16. The Sun will transit at 1:44 PM.
X
Desktop Bottom Promotion