Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯನ ಷಡಾಷ್ಟಕ ಯೋಗ ಶುರು: ಈ ರಾಶಿಯವರಿಗೆ ಬ್ಯಾಡ್ ಟೈಮ್.. ಕಷ್ಟ, ಬಿಕ್ಕಟ್ಟುಗಳ ಸರಮಾಲೆ!
ಹುಷಾರ್.. ಸೂರ್ಯನ ಷಡಾಷ್ಟಕ ಯೋಗ ಆರಂಭ. ಈ ರಾಶಿಯವರಿಗೆ ನಿಜವಾದ ಪರೀಕ್ಷೆ ಶುರು! ಒಂದರ ನಂತರ ಒಂದರಂತೆ ಬಿಕ್ಕಟ್ಟು, ತಾಳ್ಮೆಯೇ ಇದಕ್ಕೆ ಮದ್ದು. ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 23ರಿಂದ ಸೂರ್ಯ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ವಿಶಿಷ್ಟ ಷಡಾಷ್ಟಕ ಯೋಗವು (Sun will form Shadashtak Yog) ಮೂರು ರಾಶಿಗಳ ಜನರ ಜೀವನದಲ್ಲಿ ಮಹತ್ವದ ಸವಾಲುಗಳನ್ನು ತರಲಿದೆ. ಈ ಗ್ರಹಗಳ ಸಂಯೋಜನೆಯು ಕೆಲವರಿಗೆ ಶುಭಕರವಾಗಿದ್ದರೆ, ಇನ್ನು ಕೆಲವರಿಗೆ ಅನಿರೀಕ್ಷಿತ ಸವಾಲುಗಳನ್ನು ಒಡ್ಡುವ ಸಾಧ್ಯತೆ ಇದೆ.
ಜ್ಯೋತಿಷ್ಯದ ಪ್ರಕಾರ, 'ಷಡಾಷ್ಟಕ ಯೋಗ' (Shadashtak Yog 2025) ಎಂದು ಕರೆಯಲ್ಪಡುವ ವಿಶೇಷ ಗ್ರಹ ಸಂಯೋಜನೆಯು ಆರಂಭವಾಗಲಿದೆ. ಈ ಅವಧಿಯಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಸೂರ್ಯನೊಂದಿಗೆ 150 ಡಿಗ್ರಿಗಳ ಕೋನೀಯ ಸಂಬಂಧವನ್ನು ರೂಪಿಸುತ್ತವೆ. ಗ್ರಹಗಳು ಒಂದರಿಂದ ಇನ್ನೊಂದಕ್ಕೆ ಆರನೇ ಅಥವಾ ಎಂಟನೇ ಸ್ಥಾನದಲ್ಲಿದ್ದಾಗ ಈ ಷಡಾಷ್ಟಕ ಯೋಗ ಉಂಟಾಗುತ್ತದೆ.

ಈ ಯೋಗವು ಅಪರೂಪದ ಜ್ಯೋತಿಷ್ಯ ಘಟನೆಯಾಗಿದೆ. ಇದು ಎಲ್ಲ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಆದರೂ, ನಿರ್ದಿಷ್ಟವಾಗಿ ಈ ಮೂರು ರಾಶಿಗಳಿಗೆ ಪ್ರತಿಕೂಲವಾಗಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಆ ಮೂರು ರಾಶಿಗಳು ಯಾವುವು, ಈ ಯೋಗದ ಪರಿಣಾಮಗಳು ಮತ್ತು ಜ್ಯೋತಿಷ್ಯದಲ್ಲಿ ನಿಮಗೆ ಲಭ್ಯವಿರುವ ಪರಿಹಾರಗಳ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.
ಮೇಷ ರಾಶಿ
ಷಡಾಷ್ಟಕ ಯೋಗದ ಅವಧಿಯಲ್ಲಿ ಮಾನಸಿಕ ಒತ್ತಡ ಮತ್ತು ಕೆಲಸದ ಸ್ಥಳದಲ್ಲಿ ಅಡೆತಡೆಗಳು ಹೆಚ್ಚಾಗಬಹುದು. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳು ಅಥವಾ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇದೆ. ಮನೆಯ ವಾತಾವರಣದಲ್ಲೂ ಭಿನ್ನಾಭಿಪ್ರಾಯಗಳು ಮೂಡಬಹುದು. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯವಿದೆ. ತೆಗೆದುಕೊಂಡ ಹಳೆಯ ನಿರ್ಧಾರಗಳ ಬಗ್ಗೆ ಅನುಮಾನಗಳು ಕಾಡಬಹುದು.
ಪರಿಹಾರಗಳೇನು?
ನೀವು ನಿಯಮಿತವಾಗಿ ಧ್ಯಾನ ಮಾಡುವುದು ಅಗತ್ಯ. ಜೊತೆಗೆ ಹನುಮಾನ್ ಚಾಲೀಸಾ ಪಠಿಸುವುದು ಪ್ರಯೋಜನಕಾರಿ. ಚಂದನ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ಕಾಟಕ ರಾಶಿ
ಷಡಾಷ್ಟಕ ಯೋಗದ ಪ್ರಭಾವದಿಂದ ಕೌಟುಂಬಿಕ ಜೀವನದಲ್ಲಿ ಅಸ್ಥಿರತೆ ಕಾಣಿಸಿಕೊಳ್ಳಬಹುದು. ಪೋಷಕರು ಅಥವಾ ಮಕ್ಕಳ ಬಗ್ಗೆ ನಿರ್ಧಾರಗಳು ಗೊಂದಲಮಯವಾಗಬಹುದು. ನೀವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಹಳೆಯ ಸಮಸ್ಯೆಗಳು ಮತ್ತೆ ಕಾಡಬಹುದು. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರಿ, ವಿಶೇಷವಾಗಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ನಕಾರಾತ್ಮಕ ಆಲೋಚನೆಗಳು ಪದೇ ಪದೇ ಕಾಡಬಹುದು.
ಪರಿಹಾರಗಳೇನು?
ನೀವು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಅಥವಾ ಗಂಗಾಜಲವನ್ನು ಸಿಂಪಡಿಸಿ. ಶಾಂತ ವಾತಾವರಣದಲ್ಲಿ ಯೋಗ ಅಥವಾ ಪ್ರಾಣಾಯಾಮ ಮಾಡುವುದು ಸೂಕ್ತ.
ವೃಶ್ಚಿಕ ರಾಶಿ
ಈ ಅವಧಿಯು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಸವಾಲಿನ ನಿರ್ಧಾರಗಳನ್ನು ತರಬಹುದು. ಮನೆ ಮತ್ತು ಕೆಲಸದ ಸ್ಥಳದಲ್ಲಿ ಹಿರಿಯರೊಂದಿಗೆ ಭಿನ್ನಾಭಿಪ್ರಾಯಗಳು ಅಥವಾ ಕೆಲಸದ ಒತ್ತಡ ಹೆಚ್ಚಾಗಬಹುದು. ಪಾಲುದಾರಿಕೆ ಅಥವಾ ವೈವಾಹಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆತ್ಮವಿಶ್ವಾಸದ ಕೊರತೆ ಮತ್ತು ಕಿರಿಕಿರಿ ಅನುಭವಿಸಬಹುದು. ನಿಮ್ಮ ಸಾಮಾಜಿಕ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಮಾತಿನ ಮೇಲೆ ಹಿಡಿತವಿರಲಿ.
ಪರಿಹಾರಗಳೇನು?
ಸೂರ್ಯನಿಗೆ ನೀರು ಅರ್ಪಿಸುವುದು ಮತ್ತು ಹಸಿರು ವಸ್ತುಗಳನ್ನು ದಾನ ಮಾಡುವುದು ಉತ್ತಮ. ಈ ಪರಿಹಾರಗಳು ಗ್ರಹಗಳ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಒಟ್ಟಾರೆಯಾಗಿ, ಷಡಾಷ್ಟಕ ಯೋಗದ (Shadashtak Yog) ಪ್ರಸ್ತುತ ಅವಧಿಯು ಮೂರು ರಾಶಿಯವರಿಗೆ ನಿಜಕ್ಕೂ ಒಂದು ಸವಾಲಿನ ಸಮಯವಾಗಲಿದೆ. ಈ ಸಂದರ್ಭವನ್ನು 'ಪರೀಕ್ಷೆಯ ಸಮಯ' ಎಂದು ಹೇಳಲಾಗಿದೆ. ಆದಾರೂ, ಈ ಸವಾಲುಗಳನ್ನು ಎದುರಿಸಲು ತಾಳ್ಮೆ ಮತ್ತು ಸಕಾರಾತ್ಮಕ ಮನಸ್ಥಿತಿ ಅತ್ಯಗತ್ಯ. ಅಲ್ಲದೆ, ಜ್ಯೋತಿಷ್ಯದಲ್ಲಿ ಸೂಚಿಸಲಾದ ಕೆಲವು ಸರಳ ಪರಿಹಾರಗಳನ್ನು ಅನುಸರಿಸುವ ಮೂಲಕ ಸಂಕಷ್ಟಗಳ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











