Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ನವೆಂಬರ್ 2025ರ ಅದೃಷ್ಟದ ರಾಶಿಗಳು: ಈ ರಾಶಿಯವರಿಗೆ ಅನುಕೂಲ, ಆರ್ಥಿಕ ಲಾಭ!
ಅಕ್ಟೋಬರ್ ತಿಂಗಳು ಅಂತ್ಯವಾಗುತ್ತಿದೆ ಹಾಗೆ ಹೊಸ ತಿಂಗಳು ನವೆಂಬರ್ ಆಗಮನದ ಹತ್ತಿರದಲ್ಲಿದ್ದೇವೆ. ನವೆಂಬರ್‌ನಲ್ಲಿ ಹಲವು ಗ್ರಹಗಳ ಸಂಚಾರ ನೋಡಬಹುದು. ಅಕ್ಟೋಬರ್ ಅಂತ್ಯದಿಂದ ಹಿಡಿದು ನವೆಂಬರ್ ಅಂತ್ಯದವರೆಗೆ ಹತ್ತು ಹಲವು ಗ್ರಹಗಳು ತಮ್ಮ ರಾಶಿ ಹಾಗೂ ನಕ್ಷತ್ರ ಬದಲಾಯಿಸಲಿವೆ. ಇದು ಉಳಿದ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.
ನವೆಂಬರ್‌ನಲ್ಲಿ ಮಂಗಳ, ಶುಕ್ರ, ಬುಧ, ಸೂರ್ಯ, ಗುರು ಸೇರಿ ಹಲವು ಗ್ರಹಗಳಲ್ಲಿನ ಬದಲಾವಣೆಯ ತಿಂಗಳು ಇದಾಗಿದೆ. ಎಲ್ಲಾ ಗ್ರಹಗಳು ತಮ್ಮ ರಾಶಿ ಹಾಗೆ ನಕ್ಷತ್ರಗಳ ಬದಲಾಯಿಸುತ್ತಿವೆ. ನವೆಂಬರ್ 1ರಿಂದಲೇ ಈ ರೀತಿಯ ಗ್ರಹ ಸ್ಥಾನ ಬದಲಾವಣೆಗಳ ನೋಡಲಿದ್ದೇವೆ. ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳು ಹಲವು ರಾಶಿ ಜನರಿಗೆ ಗಮನಾರ್ಹ ಬದಲಾವಣೆಗಳನ್ನು ತರಬಹುದು.

ನವೆಂಬರ್‌ನಲ್ಲಿ ಹಲವು ರಾಶಿಗಳಿಗೆ ಉತ್ತಮ ಲಾಭವಿದೆ. ಹಲವರಲ್ಲಿ ಶುಭದಾಯಕ ಆರ್ಥಿಕ ಲಾಭ ತರುವ ದಿನಗಳಿವೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಈ ನವೆಂಬರ್ ಶುಭದಾಯಕ ಯಾರಿಗೆಲ್ಲಾ ಸಂತೋಷಭರಿತವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳಲ್ಲಿ ಕರ್ಕ ರಾಶಿಯ ಜನರಿಗೆ ಹಲವು ದಿನಗಳಿಂದ ಇದ್ದ ದೊಡ್ಡ ಸಮಸ್ಯೆಗಳು ಬಗೆಹರಿಯಲಿದೆ. ಅದ್ರಲ್ಲೂ ನಿಮಗೆ ಸಿಗಬೇಕಿದ್ದ ಗೌರವ ಮತ್ತೆ ಸಿಗಲಿದೆ. ನೀವು ಕಳೆದುಕೊಂಡಿದ್ದ ಹಣ ಮರಳಿ ಸಂಪಾದಿಸುವ ಸಮಯವಿದು. ನವೆಂಬರ್‌ನಲ್ಲಿ ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಶುಭವಾಗುತ್ತಿದೆ. ನಿಮ್ಮ ದೊಡ್ಡ ಕೆಲಸಗಳಲ್ಲಿ ಯಶಸ್ಸು ಪಡೆಯುವ ಸಮಯ. ಹಲವು ಸಮಯದ ಕೆಲಸಗಳು ಹಣಕಾಸು ಅಡ್ಡಿಯಿಂದ ಅರ್ಧಕ್ಕೆ ನಿಂತಿದ್ದರೆ ನವೆಂಬರ್‌ನಲ್ಲಿ ಪೂರ್ಣ ಮಾಡುವಿರಿ. ದಾಂಪತ್ಯದಲ್ಲಿ ಸುಖ ಪಡೆಯುವ ದಿನಗಳಿವೆ. ಆರೋಗ್ಯ ಕೂಡ ಸುಧಾರಣೆ ನೋಡುವಿರಿ.
ಸಿಂಹ ರಾಶಿ
ಜ್ಯೋತಿಷ್ಯದ ಪ್ರಕಾರ ಸಿಂಹ ರಾಶಿ ಜನರು ಈ ನವೆಂಬರ್ ತಿಂಗಳಲ್ಲಿ ಆತ್ಮವಿಶ್ವಾಸದಿಂದ ಬದುಕಲಿದ್ದಾರೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಲಾಭವಿದೆ. ಇಷ್ಟು ದಿನದಿಂದ ಕಾಡಿದ್ದ ಸಾಲದ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಬಹುದು. ಈ ತಿಂಗಳಲ್ಲಿ ನಿಮ್ಮ ದೊಡ್ಡ ಬಯಕೆಯನ್ನು ಈಡೇರಿಸಿಕೊಳ್ಳುವ ಸಮಯವಿದು. ಪ್ರೀತಿ, ದಾಂಪತ್ಯದ ವಿಚಾರದಲ್ಲಿ ನಿಮ್ಮ ಅನುಕೂಲಕರ ದಿನಗಳನ್ನು ಎದುರು ನೋಡಬಹುದು. ಆಪ್ತರಿಂದಾಗಿ ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ.
ಧನು ರಾಶಿ
ಜ್ಯೋತಿಷ್ಯದ ಪ್ರಕಾರ ಧನು ರಾಶಿ ಜನರು ನವೆಂಬರ್ ತಿಂಗಳಲ್ಲಿ ವಿಶೇಷ ಫಲಿತಾಂಶಗಳ ಪಡೆಯಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗಲಿದೆ. ನೀವು ಬಯಸಿದಂತೆ ಹಣಕಾಸು, ಆಸ್ತಿ, ಕುಟುಂಬದ ವಿಚಾರದಲ್ಲಿ ಶುಭವಿದೆ. ವ್ಯಾಪಾರ, ವ್ಯವಹಾರ ಸಂಬಂಧವಾಗಿ ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಉದ್ಯೋಗ ಬದಲಿಸುವ ಹಾಗೆ ಉದ್ಯೋಗವಕಾಶಕ್ಕಾಗಿ ಎದುರು ನೋಡುತ್ತಿದ್ದವರಿಗೆ ಅನೇಕ ರೀತಿಯ ಶುಭ ಸಮಾಚಾರ ನೋಡಬಹುದು. ಈ ಸಮಯದಲ್ಲಿ ನಿಮ್ಮ ಅನೇಕ ಒತ್ತಡಗಳು ನಿವಾರಣೆಯಾಗಲಿದೆ.
ಕನ್ಯಾ ರಾಶಿ
ಈ ತಿಂಗಳು ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುತ್ತದೆ. ನಿಮ್ಮ ಅದೃಷ್ಟ ಪ್ರವಾಸವು ಆರ್ಥಿಕವಾಗಿ ಪ್ರಯೋಜನಕಾರಿ ಸಂಬಂಧವನ್ನು ಸೃಷ್ಟಿಸುತ್ತದೆ. ತಿಂಗಳ ಕೊನೆಯಲ್ಲಿ ಶುಕ್ರ ಮತ್ತೆ ಪ್ರಯಾಣಿಸುತ್ತಾನೆ ಇದರಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ನಿಮ್ಮ ವಾಹನ ಖರೀದಿಯ ಸಂಬಂಧವಾಗಿ ಹಣ ಒಗ್ಗೂಡಿಸುತ್ತಿದ್ದರೆ ಲಾಭದಾಯಕವಾಗಲಿದೆ. ನಿಮ್ಮ ನಿರ್ಧಾರಗಳಲ್ಲಿ ಉತ್ತಮ ಫಲಿತಾಂಶ ಬರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











