Latest Updates
-
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ!
ಸೂರ್ಯ-ಮಂಗಳನ ಸಂಚಾರದಿಂದ ನವಪಂಚಮ ಯೋಗ..! ಈ ರಾಶಿಯರಿಗೆ ರಾಜಯೋಗ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಗ್ರಹಗಳ ಸ್ಥಾನವು ಬದಲಾವಣೆಯು ಹಲವು ಯೋಗಗಳಿಗೆ ಶುಭ ಲಾಭಗಳಿಗೆ ಕಾರಣವಾಗಲಿದೆ. ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದು ನೋಡಬಹುದು. ಹೀಗಾಗಿ ಯಾವುದೇ ಸಮಯದಲ್ಲಿ ಗ್ರಹಗತಿಗಳ ಬದಲಾವಣೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿರುತ್ತದೆ. ಅದರಲ್ಲೂ ಕೆಲವೊಂದು ಯೋಗಗಳ ಅಪರೂಪಕ್ಕೆ ಸಂಭವಿಸುತ್ತವೆ.
ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿ ಬದಲಾಯಿಸುತ್ತವೆ. ಈಗ ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯನು ಕುಂಭ ರಾಶಿಯಲ್ಲಿದ್ದಾನೆ. ಹೀಗಿರುವಾಗ ಕುಂಭ ರಾಶಿಯಲ್ಲಿ ಮತ್ತೊಂದು ಗ್ರಹದ ಸಂಯೋಗವಾಗುತ್ತಿದೆ. ಆದ್ರೆ ಮಾರ್ಚ್ 8ರ ಬಳಿಕ ಸೂರ್ಯ ಹಾಗೂ ಮಂಗಳ ಗ್ರಹವು 120 ಡಿಗ್ರಿ ಅಂತರದಲ್ಲಿರಲಿದ್ದಾರೆ. ಇದು ನವಪಂಚಮ ಯೋಗಕ್ಕೆ ಕಾರಣವಾಗುತ್ತಿದೆ.

ಸೂರ್ಯ ಮತ್ತು ಮಂಗಳನ ಈ ಸಂಚಾರವು ಎಲ್ಲಾ ರಾಶಿ ಚಿಹ್ನೆಗಳಲ್ಲಿ ಒಂದು ರೀತಿಯ ಧನಾತ್ಮಕ ಅಥವಾ ಋಣಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ. ಹಾಗಾದ್ರೆ ಈ ನವಪಂಚಮ ಯೋಗವು ಯಾರಿಗೆ ಲಾಭದಾಯಕವಾಗಲಿದೆ ಅನ್ನೋದನ್ನು ನೋಡೋಣ. ಹಾಗೆ ಯಾವ ರೀತಿ ಅನುಕೂಲ ಸೃಷ್ಟಿಸಲಿದೆ ಎಂಬುದನ್ನು ಕೂಡ ಈ ಮೂಲಕ ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ನವಪಂಚ ರಾಜಯೋಗವು ಅದ್ಭುತವಾದ ಲಾಭ ಸೃಷ್ಟಿಸುತ್ತದೆ. ಅವರ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ ಮತ್ತು ಅವರು ಎಲ್ಲಾ ರೀತಿಯ ಐಷಾರಾಮಿ ಸುಖಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಮಂಗಳ ಗ್ರಹದ ಸಂಚಾರವು ವಿವಿಧ ವ್ಯವಹಾರಗಳ ಮೂಲಕ ದೊಡ್ಡ ಮೊತ್ತ ಗಳಿಸಲು ಅವಕಾಶ ನೀಡಲಿದೆ. ಹಾಗೆ ನಿಮ್ಮ ದೈನಂದಿನ ಕೆಲಸಗಳು ಅಡೆತಡೆಯಿಲ್ಲದೆ ನೆರವೇರಲಿವೆ. ಇದು ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ. ನಿಮ್ಮ ಕುಟುಂಬದಲ್ಲಿ ನಿಮ್ಮಿಂದ ಸಂತೋಷ ಇರಲಿದೆ. ನಿಮ್ಮ ಅದಾಯದಲ್ಲಿ ಹೆಚ್ಚಳ ನೋಡಬಹುದು. ಹಾಗೆ ನಿಮಗೆ ಕಾಡುತ್ತಿದ್ದ ಬಹುಕಾಲದ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
ಕುಂಭ ರಾಶಿ
ನವಪಂಚಮ ರಾಜಯೋಗವು ಕುಂಭ ರಾಶಿಯವರಿಗೆ ಅಪಾರ ಲಾಭಗಳ ತರಲಿದೆ. ನಿಮಿಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಹಾಗೆ ಉಳಿತಾಯ, ಹೂಡಿಕೆಯಲ್ಲಿ ಲಾಭ ಗಳಿಸಬಹುದು. ನಿಮ್ಮ ಉದ್ಯೋಗ ಬದಲಾವಣೆಯ ಕನಸು ಈ ಸಮಯದಲ್ಲಿ ಈಡೇರಬಹುದು, ಇದಕ್ಕಾಗಿ ನೀವು ಶ್ರಮ ಹಾಗೂ ಪ್ರಯತ್ನ ಅಗತ್ಯವಾಗಿ ಹಾಕಬೇಕಾಗುತ್ತದೆ. ಸಮಯಕ್ಕೆ ತಕ್ಕಂತೆ ಬದಲಾಗುವುದು ಬಹಳ ಮುಖ್ಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಆನಂದ ಇರಲಿದೆ. ಹಾಗೆ ಮನೆಗಾಗಿ ಹಣ ಖರ್ಚು ಮಾಡಬೇಕಾಗಿ ಬರಬಹುದು. ದೂರ ಪ್ರಯಾಣ ಮಾಡಬೇಕಾಗಬಹುದು. ಈ ಸಮಯದಲ್ಲಿ ಹೊಸದಾಗಿ ಸಾಲ ಮಾಡಲು ಮುಂದಾಗಬೇಡಿ. ಹಾಗೆ ಅನಗತ್ಯ ಖರ್ಚುಗಳಿಂದ ದೂರವೇ ಉಳಿಯುವುದು ಬಹಳ ಉತ್ತಮ
ಮೀನ ರಾಶಿ
ಸೂರ್ಯ ಮತ್ತು ಮಂಗಳನಿಂದ ರೂಪುಗೊಂಡಿರುವ ನವಪಂಚಮ ರಾಜಯೋಗವು ಮೀನ ರಾಶಿಯವರಿಗೆ ಅನಿರೀಕ್ಷಿತ ಲಾಭಗಳ ನೀಡಬಹುದು. ನಿಮ್ಮ ಅದೃಷ್ಟದಿಂದಾಗಿ ನೀವು ವಿವಿಧ ಕ್ಷೇತ್ರಗಳಲ್ಲಿ ಲಾಭ ಪಡೆಯಬಹುದು. ನಿಮ್ಮ ಉದ್ಯೋಗವನ್ನು ಬದಲಾಯಿಸಲು ಇದು ಒಳ್ಳೆಯ ಸಮಯ ಮತ್ತು ನೀವು ವಿವಿಧ ಒಪ್ಪಂದಗಳಿಂದ ದೊಡ್ಡ ಮೊತ್ತ ಗಳಿಸಲಿದ್ದೀರಿ. ಪಾಲುದಾರಿಗೆ ವ್ಯವಹಾರದಲ್ಲಿ ನೀವು ತೊಡಗಿದ್ದರೆ ಅತ್ಯುತ್ತಮ ಲಾಭ ನೋಡಬಹುದು. ಉದ್ಯಮಿಗಳು, ವ್ಯವಹಾರ ಕ್ಷೇತ್ರ, ರಿಯಲ್ ಎಸ್ಟೇಟ್, ದಿನಗೂಲಿ ನೌಕರರು, ಅಂಗಡಿ, ಹಣ್ಣು ವ್ಯಾಪಾರಿಗಳಿಗೆ ಅತ್ಯಧಿಕ ಲಾಭ ಆಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications