Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಅಕ್ಟೋಬರ್ 2ಕ್ಕೆ ವರ್ಷದ 2ನೇ ಸೂರ್ಯಗ್ರಹಣ: ಈ 4 ರಾಶಿಯವರು ಸ್ವಲ್ಪ ಜಾಗ್ರತೆ
ಚಂದ್ರಗ್ರಹಣ ಮುಗಿದ ಮೇಲೆ ವರ್ಷದ ಎರಡನೇ ಸೂರ್ಯಗ್ರಹಣ ಇದೇ ಅಕ್ಟೋಬರ್‌ನಲ್ಲಿ ನಡೆಯಲಿದೆ. ಈ ಬಾರಿ ಪಿತೃಪಕ್ಷ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಹಾಗಾಗಿ ಇದರ ಸೂತಕ ಭಾರತದಲ್ಲಿ ಇರಲ್ಲ, ಈ ಕಾರಣದಿಂದಲೇ ಭಾರತದಲ್ಲಿ ಈ ದಿನ ಪಿತೃಪಕ್ಷದ ಕಾರ್ಯಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ.

ಸೂರ್ಯಗ್ರಹಣವೆಂದರೆ ಜ್ಯೋತಿಷ್ಯದಲ್ಲಿ ಅದು ಶುಭವಲ್ಲ, ಸೂರ್ಯನಿಗೆ ಗ್ರಹಣ ಹಿಡಿಯುವ ದಿನ ಕೆಲ ನಕರಾತ್ಮಕ ಪ್ರಭಾವ ಇರುತ್ತದೆ ಎಂದು ಹೇಳಲಾಗುವುದು. ಸೂರ್ಯಗ್ರಹಣದ ಸೂತಕ ಭಾರತದ ಮೇಲೆ ಇರಲ್ಲ, ಆದರೆ ಇದರ ಪ್ರಭಾವ ರಾಶಿಗಳ ಮೇಲಿರುತ್ತದೆ, ಹಾಗಾಗಿ ಸೂರ್ಯಗ್ರಹಣದ ಸಮಯದಲ್ಲಿ ಕೆಲವೊಂದು ರಾಶಿಯವರು ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು.
ಈ ಗ್ರಹಣ ಕೆಲ ರಾಶಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರಿದೆ, ಹಾಗಾಗಿ ಗ್ರಹಣದ ದಿನ ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸಿ ಎಂದು ಹೇಳಲಾಗಿದೆ.
ಮೇಷ ರಾಶಿ: ವರ್ಷದ ಎರಡನೇ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಅನುಕೂಲಕರವಲ್ಲ. ಈ ದಿನ ನೀವು ದೂರ ಪ್ರಯಾಣವಿದ್ದರೆ ಅದನ್ನು ಮುಂದೂಡಿ, ಅಲ್ಲದೆ ವಾಹನವನ್ನು ನಿಧಾನಕ್ಕೆ, ಜಾಗ್ರತೆಯಿಂದ ಚಲಾಯಿಸಿ. ಆರ್ಥಿಕವಾಗಿ ಈ ದಿನ ಜಾಗ್ರತೆವಹಿಸಬೇಕು, ಹಣ ನಷ್ಟ ಉಂಟಾಗಬಹುದು ಹಾಗಾಗಿ ಈ ದಿನದಂದು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಾಡಲು ಹೋಗಬೇಡಿ.
ಮಿಥುನ ರಾಶಿ: ನೀವು ಯಾರನ್ನೇ ಆಗಲಿ ಕುರುಡಾಗಿ ನಂಬಬೇಡಿ. ಯಾವುದೇ ವ್ಯವಹಾರ ಮಾಡುವಾಗ ಅದರ ಡಾಕ್ಯೂಮೆಂಟ್ ಪರಿಶೀಲನೆ ಮಾಡದೆ ಮಾಡಲು ಹೋಗಬೇಡಿ. ತುಂಬಾ ನಂಬಿದ ವ್ಯಕ್ತಿಯಿಂದಲೇ ನಂಬಿಕೆ ದ್ರೋಹ ಉಂಟಾಗಬಹುದು, ಹಾಗಾಗಿ ಈ ದಿನ ಜಾಗ್ರತೆವಹಿಸಿ.
ಕರ್ಕ ರಾಶಿ: ಕರ್ಕ ರಾಶಿಯವರ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಕರ್ಕ ರಾಶಿಯವರು ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಅಲ್ಲದೆ ಕೆಲ ಸುದ್ದಿ ಮನಸ್ಸಿಗೆ ನೋವುಂಟು ಮಾಡಬಹುದು ಯಾವುದೇ ಅಹಿತಕರ ಘಟನೆ ನಡೆಯದಿರಲು ಇಷ್ಟ ದೇವರನ್ನು ಮನಸ್ಸಿನಲ್ಲಿ ಪ್ರಾರ್ಥಿಸುತ್ತಲೇ ಇರಿ.
ತುಲಾ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಒಳ್ಳೆಯದಲ್ಲ, ಜಾಗ್ರತೆವಹಿಸದಿದ್ದರೆ ಕೆಲಸ ಕಳೆದುಕೊಳ್ಳಬಹುದು. ಹಾಗಾಗಿ ನಿಮಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಹೆಚ್ಚು ಪ್ರಯತ್ನ ಹಾಕಬೇಕು.
ಪರಿಹಾರ: ಈ ದಿನ ಗಾಯತ್ರಿ ಮಂತ್ರ ಪಠಿಸಿ ಅಥವಾ ಕೇಳಿ, ಇದು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
ಸರ್ವಪಿತೃಪಕ್ಷ
ಸೂರ್ಯಗ್ರಹಣದಂದೇ ಸರ್ವ ಪಿತೃ ಪಕ್ಷ ನಡೆಯಲಿದೆ. ಪಿತೃದೋಷವಿದ್ದರೆ ಪರಿಹಾರಕ್ಕೆ ಈ ದಿನವಂತೂ ತುಂಬಾನೇ ಮುಖ್ಯವಾಗಿದೆ. ಸರ್ವ ಪಿತೃಅಮವಾಸ್ಯೆಯಂದು ಪಿತೃ ತರ್ಪಣ ಮಾಡಿದರೆ ಕುಟುಂಬದಲ್ಲಿ ತೀರಿ ಹೋಗಿ ಮೋಕ್ಷ ಸಿಗದೇ ಇರುವ ಎಲ್ಲರಿಗೂ ಮೋಕ್ಷ ಸಿಗುತ್ತದೆ. ಕೆಲವರು ಮರಣವೊಂದಿದ ತಿಥಿ ಗೊತ್ತಿರುವುದಿಲ್ಲ, ಅಂಥವರಿಗೆ ತರ್ಪಣವನ್ನು ಈ ದಿನ ನೀಡಲಾಗುವುದು.
ಸರ್ವಪಿತೃ ಪಕ್ಷ ಆಚರಣೆಯ ಮಹತ್ವ
- ಮರಣವೊಂದಿದವರಿಗೆ ಮೋಕ್ಷ ಸಿಕ್ಕಿದಾಗ ಅವರು ಸಂತೃಪ್ತರಾಗುತ್ತಾರೆ, ಅವರು ಕುಟುಂಬವನ್ನು ಹರಿಸುತ್ತಾರೆ ಇದರಿಂದ ಕುಟುಂಬಕ್ಕೆ ಒಳಿತಾಗುತ್ತದೆ
- ಕುಟುಂಬದಲ್ಲಿದ್ದ ಸಮಸ್ಯೆ ಕಡಿಮೆಯಾಗುವುದು
- ಪತಿ-ಪತ್ನಿ ನಡುವೆ ಪಿತರದೋಷವಿದ್ದರೆ ಜಗಳವಿರುತ್ತದೆ, ಅದು ದೂರಾಗುವುದು, ಇಬ್ಬರು ಅನ್ಯೂನ್ಯದಿಂದ ಬಾಳ್ವೆ ಮಾಡುವಂತಾಗುವುದು
- ಸಂತಾನ ಭಾಗ್ಯ ಅಥವಾ ಸಂತಾನಕ್ಕಿರುವ ಅರೋಗ್ಯ ಸಮಸ್ಯೆ ಇವೆಲ್ಲಾ ದೂರಾಗುವುದು
- ಹೀಗೆ ಧಾರ್ಮಿಕ ದೃಷ್ಟಿಯಿಂದ ಈ ದಿನ ತುಂಬಾ ಮುಖ್ಯವಾಗಿದೆ.
ದಾನ ಧರ್ಮ ಮಾಡಿ
ಸೂರ್ಯಗ್ರಹಣ ಹಾಗೂ ಪಿತೃಪಕ್ಷದಲ್ಲಿ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ಬಡವರಿಗೆ ದಾನ ಧರ್ಮ ಮಾಡಿದರೆ ಒಳ್ಳೆಯದು. ಇದರಿಂದ ಪುಣ್ಯಫಲ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











