Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಸರ್ವ ಪಿತೃ ಅಮವಾಸ್ಯೆಯಂದೇ ಸೂರ್ಯಗ್ರಹಣ: ಈ 3 ರಾಶಿಯವರ ಅದೃಷ್ಟ ಬದಲಾಗಲಿದೆ
ಸರ್ವ ಪಿತೃ ಅಮವಾಸ್ಯೆ ಹಾಗೂ ಸೂರ್ಯಗ್ರಹಣ ಎರಡೂ ಒಂದೇ ದಿನ ಸಂಭವಿಸಲಿದೆ. ಈ ಎರಡೂ ವೈದಿಕ ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾದ ಘಟನೆಯಾಗಿದೆ. ಈ ಬಾರಿ ಗ್ರಹಣವು ಪಿತೃಪಕ್ಷದಂದೇ ಸಂಭವಿಸುವುದಾದರೂ ಈ ಗ್ರಹಣ ಪಿತೃಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
ಏಕೆಂದರೆ ಗ್ರಹಣವು ರಾತ್ರಿ ಸಂಭವಿಸಲಿದೆ. ಆದ್ದರಿಂದ ಶ್ರಾದ್ಧಕಾರ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸೂರ್ಯಗ್ರಹಣ ಭಾರತೀಯ ಕಾಲಮಾನ ರಾತ್ರಿ 08:34ರಿಂದ ಪ್ರಾರಂಭವಾಗಿ ಮಧ್ಯರಾತ್ರಿ 02:25ರವರೆಗೆ ಇರಲಿದೆ.

ಈ ಬಾರಿಯ ಸೂರ್ಯಗ್ರಹಣವನ್ನು ಬೆಂಕಿಯ ಉಂಗುರ ಎಂದು ಕರೆಯಲಾಗುವುದು. ಗ್ರಹಣವು ಉಂಗುರದ ರೀತಿಯಲ್ಲಿ ಕಂಡು ಬರುವುದು. ಈ ಗ್ರಹಣದ ಸೂತಕ ಭಾರತದ ಮೇಲಿಲ್ಲ, ಆದರೆ ಇದರ ಪ್ರಭಾವ 12 ರಾಶಿಗಳ ಮೇಲೆ ಬೀರಲಿದೆ. ಅದರಲ್ಲೂ ಈ ಗ್ರಹಣವು ಕೆಲವೊಂದು ರಾಶಿಯವರಿಗೆ ಒಳ್ಳೆಯದು ಮಾಡಲಿದೆ. ಆ ರಾಶಿಗಳು ಯಾವುವು ಎಂದು ನೋಡುವುದಾದರೆ
ಮಿಥುನ ರಾಶಿ
ಪಿತೃಪಕ್ಷದಂದು ಸೂರ್ಯಗ್ರಹಣ ಉಂಟಾಗುವುದರಿಂದ ಮಿಥುನ ರಾಶಿಯವರು ವಿಶೇಷ ಆಶೀರ್ವಾದ ಪಡೆಯುತ್ತೀರಿ. ಮಿಥುನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ನಿಮಗೆ ಪೂರ್ವಜರ ಆಶೀರ್ವಾದ ಸಿಗಲಿದೆ. ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ, ಇದರಿಂದ ವೃತ್ತಿ ಜೀವನದಲ್ಲಿ ಮತ್ತಷ್ಟು ಪ್ರಗತಿ ಹೊಂದುತ್ತೀರಿ.
ಸಿಂಹ ರಾಶಿ
ಪಿತೃಪಕ್ಷದಲ್ಲಿ ಸೂರ್ಯಗ್ರಹಣ ನಿಮಗೆ ಅನೇಕ ಅನುಕೂಲಕರಗಳನ್ನು ತಂದು ಕೊಡಲಿದೆ. ನಿಮ್ಮ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ. ನೀವು ಕುಟುಂಬದ ಜೊತೆಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಅನುಕೂಲಕರವಾಗಲಿದೆ. ನಿಮ್ಮ ಮದುವೆಗೆ ಇರುವ ಸಮಸ್ಯೆಗಳು ದೂರಾಗಲಿದೆ. ವೈವಾಹಿಕ ಜೀವನದಲ್ಲಿ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ. ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಪಡೆಯುತ್ತೀರಿ. ಹೂಡಿಕೆಯಿಂದ ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು.
ತುಲಾ ರಾಶಿ
ಸರ್ವ ಪಿತೃ ಅಮವಾಸ್ಯೆಯಲ್ಲಿ ಸೂರ್ಯಗ್ರಹಣ ಬಂದಿರುವುದರಿಂದ ತುಲಾ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿರಲಿದೆ. ನೀವು ಜೀವನದಲ್ಲಿ ಅಭಿವೃದ್ಧಿಯನ್ನು ಪಡೆಯುತ್ತೀರಿ. ನಿಮ್ಮ ಐಶ್ವರ್ಯ, ಸೌಕರ್ಯ ಹೆಚ್ಚಾಗಲಿದೆ. ನಿಮ್ಮ ಆರೋಗ್ಯ ತುಂಬಾನೇ ಚೆನ್ನಾಗಿರಲಿದೆ. ನೀವು ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಅಪೂರ್ಣವಾಗಿದ್ದ ನಿಮ್ಮ ಪ್ರಮುಖ ಕೆಲಸ ಗ್ರಹಣದ ಬಳಿಕ ಪೂರ್ಣಗೊಳ್ಳಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications