Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಜುಲೈ 16ರವರೆಗೆ ಶುಕ್ರಾದಿತ್ಯ ಯೋಗ: ಈ 3 ರಾಶಿಯವರಿಗೆ ಅದೃಷ್ಟದ ಸಮಯವಿದು
ಈ ಮಾಸ ಎರಡು ಪ್ರಮುಖ ಗ್ರಹಗಳ ಸಂಯೋಗವಾಗಿದೆ , ಅದು ಕರ್ಕ ರಾಶಿಯಲ್ಲಿ ಸಂಭವಿಸಿದೆ. ಎಲ್ಲಾ ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಹಾಗೂ ಅದೃಷ್ಟದ ಗ್ರಹವಾದ ಶುಕ್ರನ ಯುತಿ ಅಥವಾ ಸಂಯೋಗ ಜುಲೈ 7ಕ್ಕೆ ಸಂಭವಿಸಿದೆ.
ಸೂರ್ಯನು ಜೂನ್ 15ರಿಂದ ಕರ್ಕ ರಾಶಿಯಲ್ಲಿಯೇ ಇದ್ದಾನೆ, ಇದೀಗ ಜುಲೈ 7ಕ್ಕೆ ಆ ರಾಶಿಗೆ ಶುಕ್ರನ ಸಂಚಾರವಾಗಿರುವುದರಿಂದ ಶುಕ್ರಾದಿತ್ಯ ಯೋಗ ಉಂಟಾಗಿದೆ. ಈ ಶುಕ್ರಾದಿತ್ಯ ಯೋಗವನ್ನು ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಈ ಯೋಗವು ಗ್ರಹಗಳ ಸ್ಥಾನದ ಅನುಸಾರ ಕೆಲವೊಂದು ರಾಶಿಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ.

ಜುಲೈ 16ಕ್ಕೆ ಸೂರ್ಯನು ಸಿಂಹ ರಾಶಿಗೆ ಸಂಚರಿಸಲಿದೆ, ಅಲ್ಲಿಯವರೆಗೆ ಈ ಶುಕ್ರಾದಿತ್ಯ ಯೋಗ ಇರಲಿದೆ, ಈ ರಾಶಿಗಳಿಗೆ ಅನುಕೂಲಕರವಾಗಿದೆ ನೋಡಿ:
ಮಿಥುನ ರಾಶಿ
ಮಿಥುನ ರಾಶಿಯ 2ನೇ ಮನೆಯಲ್ಲಿ ಈ ಶುಕ್ರಾದಿತ್ಯ ಯೋಗವು ರೂಪುಗೊಂಡಿದೆ. ಇದು ಮಿಥುನ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡಲಿದೆ. ನಿಮ್ಮ ಯಾವುದಾದರೂ ಅಪೂರ್ಣ ಕೆಲಸವಿದ್ದರೆ ಈ ಅವಧಿಯಲ್ಲಿ ಪ್ರಯತ್ನಿಸಿದರೆ ಪೂರ್ಣವಾಗಲಿದೆ. ವೃತ್ತಿ ಬದುಕಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಅವಧಿ ಅನುಕೂಲಕರವಾಗಿದೆ, ನಿಮ್ಮಲ್ಲಿ ಧೈರ್ಯವಿರುತ್ತದೆ ಜೊತೆಗೆ ಅದೃಷ್ಟದ ಬೆಂಬಲವೂ ಇರುವುದರಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸಿ ಪಡೆಯಲು ಸಾಧ್ಯವಾಗುವುದು. ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ತುಂಬಾನೇ ಉತ್ತಮವಾಗಿದೆ. ಇನ್ನು ಆರ್ಥಿಕವಾಗಿಯೂ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕನ್ಯಾರಾಶಿ
ಕನ್ಯಾ ರಾಶಿಯವರಲ್ಲಿ 11ನೇ ಮನೆಯಲ್ಲಿ ಈ ಶುಕ್ರಾದಿತ್ಯ ಯೋಗ ಉಂಟಾಗಿದೆ. ಈ ಅವಧಿ ನಿಮಗೆ ಲಾಭದಾಯಕವಾಗಿದೆ, ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಇನ್ನು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಉತ್ತಮವಾಗಿದೆ. ಈ ಸಮಯದಲ್ಲಿ ಮಾಡುವ ಆಸ್ತಿ ವ್ಯವಹಾರ ಲಾಭದಾಯಕವಾಗಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ.
ಕುಂಭ ರಾಶಿ
ಈ ಶುಕ್ರಾದಿತ್ಯ ಯೋಗವು ಕುಂಭ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಶುಕ್ರ ಮತ್ತು ಸೂರ್ಯನ ಸಂಯೋಗದಿಂದಾಗಿ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತಾರೆ. ಇದು 5ನೇ ಮನೆಯಲ್ಲಿ ರೂಪುಗೊಂಡಿರುವುದರಿಂದ ಐದನೇ ಮನೆಯಲ್ಲಿ ಶುಕ್ರಾದಿತ್ಯ ರಾಜಯೋಗವು ರೂಪುಗೊಂಡಿದೆ, ಅಲ್ಲದೆ ಶನಿಯೂ ಕೂಡ ಇದೇ ಮನೆಯಲ್ಲಿದೆ ಈ ಎಲ್ಲಾ ಗ್ರಹಗಳಿಂದಾಗಿ ನೀವು ತುಂಬಾನೇ ಅನುಕೂಲಕರ ಪ್ರಯೋಜನ ಪಡೆಯುತ್ತೀರಿ. ಉದ್ಯೋಗಿಗಳು ಲಾಭ ಗಳಿಸುತ್ತೀರಿ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
