Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಅಯ್ಯಪ್ಪ ಸ್ವಾಮಿ ವ್ರತ: ಶ್ರೀ ಅಯ್ಯಪ್ಪ ಮಾಲಾಧಾರಣ ಮಂತ್ರ
ಅಯ್ಯಪ್ಪ ಸ್ವಾಮಿಗೆ ಮಲೆಗೆ ಮಾಲೆ ಹಾಕಿ 41 ದಿನಗಳ ಕಠಿಣ ವ್ರತ ನಿಯಮ ಪಾಲಿಸಿ ಕರಳದ ಶಬರಿ ಮಲೆಯಲ್ಲಿರುವ ಅಯ್ಯಪ್ಪನ ದರ್ಶನ ಪಡೆದ ಬಂದರೆ ನಮ್ಮ ಪುಣ್ಯ ಫಲ ಹೆಚ್ಚಾಗುವುದು ಎಂಬುವುದು ಧಾರ್ಮಿಕ ನಂಬಿಕೆ, ನವೆಂಬರ್, ಡಿಸೆಂಬರ್, ಜನವರಿ ಮಾಸಗಳಲ್ಲಿ ಲಕ್ಷಾಂತರ ಭಕ್ತರು ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಬರುತ್ತಾರೆ. ಮಂಡಲ ಪೂಜೆ ಹಾಗೂ ಮಕರವಿಳಕ್ಕು ಸಮಯದಲ್ಲಿ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು. ಸಮಯದಲ್ಲಿ ಅಪ್ಪ ಸ್ವಾಮಿ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿಈ ತೀರ್ಥ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಅಯ್ಯಪ್ಪನ ಭಕ್ತಿಯಿಂದ ಆರಾಧಿಸಿದರೆ ಅಯ್ಯಪ್ಪಸ್ವಾಮಿ ಎಂದಿಗೂ ನಮ್ಮ ಕೈ ಬಿಡಲ್ಲ, ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತಾನೆ ಎಂಬುವುದು ಅಯ್ಯಪ್ಪ ಭಕ್ತರ ಅಚಲ ನಂಬಿಕೆ, ಪ್ರತಿಯೊಂದು ಅಯ್ಯಪ್ಪಭಕ್ತನಲ್ಲಿ ಈ ನಂಬಿಕೆ ಇರುತ್ತದೆ. ಅಲ್ಲದೆ ಸ್ವಾಮಿಯ ಪವಾಡ ಅವನ ಅನುಭವಕ್ಕೆ ಬಂದಿರುತ್ತದೆ, ಯಾವುದೋ ಕಷ್ಟ ಬಂದಾಗ ಅಯ್ಯಪ್ಪನ ಭಕ್ತಿಯಿಂದ ಆರಾಧಿಸಿದಾಗ ಆ ಕಷ್ಟ ಪರಿಹಾರವಾಗಿರುತ್ತದೆ.
41 ದಿನಗಳು ತುಂಬಾ ಕಠಿಣ ವ್ರತ ಮಾಡುತ್ತಾರೆ, ಪ್ರತಿ ಕ್ಷಣವೂ ಅಯ್ಯಪ್ಪನ ಧ್ಯಾನ ಮಾಡುತ್ತಾರೆ. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ನದಿ ಸ್ನಾನ ಮಾಡಿ ಶರಣ ಕರೆಯುತ್ತಾರೆ, ಸೂರ್ಯಾಸ್ತದ ನಂತರ ಕೂಡ ಸ್ನಾನ ಮಾಡಿ ಶರಣ ಕರೆಯುತ್ತಾರೆ. ಅಯ್ಯಪ್ಪ ಸ್ವಾಮಿಯ ಶರಣ ಕರೆಯುವಾಗ ಅಯ್ಯಪ್ಪಸ್ವಾಮಿ ಮಾಲೆಧಾರಿಗಳು ಈ ಮಂತ್ರ ಪಠಣೆ ಮಾಡಿದರೆ ಒಳ್ಳೆಯದು.
ಅಯ್ಯಪ್ಪ ಸ್ವಾಮಿ ಆಲೆ ಹಾಕಿದವರು ಪ್ರತಿದಿನ ಈ ಮಂತ್ರ ಪಠಣೆ ಮಾಡಿ
ಜ್ಞಾನಮುದ್ರಾಂ ಶಾಸ್ತ್ರಮುದ್ರಾಂ ಗುರುಮುದ್ರಾಂ ನಮಾಮ್ಯಹಮ್|
ವನಮುದ್ರಾಂ ಶುದ್ಧಮುದ್ರಾಂ ರುದ್ರಮುದ್ರಾಂ ನಮಾಮ್ಯಹಮ್||
ಶಾಂತಮುದ್ರಾಂ ಸತ್ಯಮುದ್ರಾಂ ವ್ರತಮುದ್ರಾಂ ನಮಾಮ್ಯಹಮ್|
ಶಬರ್ಯಾಶ್ರಮಸತ್ಯೇನ ಮುದ್ರಾಂ ಪಾತು ಸದಾಪಿ ಮೇ||
ಗುರುದಕ್ಷಿಣಿಯಾ ಪೂರ್ವ ತಸ್ಯಾನುಗ್ರಹಕಾರಿಣೀ|
ಶರಣಾಗತಮುದ್ರಾಖ್ಯಂ ತ್ವನ್ಮುದ್ರಾಂ ಧಾರಯಾಮ್ಯಹಮ್||
ಚಿನ್ಮುದ್ರಾಂ ಖೇಷರೀಮುದ್ರಾಂ ಭದ್ರಮುದ್ರಾಂ ನಮಾಮ್ಯುಹಮ್|
ಶಬರ್ಯಾಚಲಮುದ್ರಾಯೈ ನಮಸ್ತುಭ್ಯಂ ನಮೋ ನಮಃ||
ವ್ರತಮಾಲಾ ಉದ್ಯಪನ ಮಂತ್ರ
ಅಪೂರ್ವಮಚಲಾರೋಹ ದಿವ್ಯದರ್ಶನಕಾರಣಾತ್|
ಶಾಸ್ತ್ರಮುದ್ರಾತ್ಮಕ ದೇವ ದೇಹಿ ಮೇ ವ್ರತಮೋಚನಮ್||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











