Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶಿವ ತಾಂಡವ ಸ್ತೋತ್ರ ಹಾಗೂ ಇದನ್ನು ಪಠಣೆ ಮಾಡಿದರೆ ದೊರೆಯುವ ಪ್ರಯೋಜನಗಳು
ಶಿವ ತಾಂಡವ ಸ್ತೋತ್ರ ಪಠಣೆ ಮಾಡಿದರೆ ದೊರೆಯುವ ಪ್ರಯೋಜನಗಳು ಹಾಗೂ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ ನೋಡಿ:
ಶಿವ ತಾಂಡವ ಸ್ತೋತ್ರ ಪಠಣೆಯಿಂದ ದೊರೆಯುವ ಪ್ರಯೋಜನಗಳು

ಆಸೆಗಳು ಈಡೇರುವುದು
ಶಿವ ತಾಂಡವ ಸ್ತೋತ್ರ ಪಠಣೆ ಮಾಡುವುದರಿಂದ ಆಸೆಗಳು ಈಡೇರುವುದು, ಸಂಪತ್ತು ಹೆಚ್ಚಾಗುವುದು, ಯಾರು ಈ ಮಂತ್ರಗಳನ್ನು ಪ್ರತಿನಿತ್ಯ ಪಠಣೆ ಮಾಡುತ್ತಾರೋ ಅವರ ಅಸೆಗಳೆಲ್ಲಾ ಈಡೇರುವುದು.
ಮನೆಯಲ್ಲಿ ಶಾಂತಿ ನೆಲೆಸುವುದು
ಮನೆಯ ಸದಸ್ಯರು ಈ ಮಂತ್ರ ಪಠಣೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು.
ಮದುವೆ ವಯಸ್ಸಿಗೆ ಬಂದ ಮಗ ಅಥವಾ ಮಗಳಿಗೆ ಮದುವೆ ವಿಳಂಬವಾಗುತ್ತಿದ್ದರೆ ಈ ಮಂತ್ರವನ್ನು ಪ್ರತಿದಿನ 51 ಬಾರಿ ಪಠಣೆ ಮಾಡಿ. ಈ ಮಂತ್ರ ಪಠಣೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿನ ಸಮಸ್ಯೆ ದೂರಾಗುವುದು.
ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯುವುದು
ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ವೃತ್ತಿ ಜೀವನದಲ್ಲಿನ ಸವಾಲುಗಳು ದೂರಾಗುವುದು, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಈ ಮಂತ್ರ ಸಹಾಯ ಮಾಡುತ್ತದೆ.
ಸಂತಾನ ಭಾಗ್ಯ ದೊರೆಯುವುದು
ಮಕ್ಕಳಿಲ್ಲದ ದಂಪತಿ ಈ ಮಂತ್ರ ಪಠಣೆ ಮಾಡುವುದರಿಂದ ಅವರಿಗೆ ಮಕ್ಕಳ ಭಾಗ್ಯ ದೊರೆಯುವುದು.
ಗ್ರಹಣ ದೋಷ ದೂರಾಗುವುದು
ಇನ್ನು ಗ್ರಹಣ ಸಮಯದಲ್ಲಿ ಈ ಮಂತ್ರ ಪಠಣೆ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗುವುದು. ಗ್ರಹಣದ ಸಮಯದಲ್ಲಿ ಯಾರು 1008 ಬಾರಿ ಈ ಮಂತ್ರ ಪಠಣೆ ಮಾಡುತ್ತಾರೋ ಅವರು ಎಲ್ಲಾ ದೋಷಗಳಿಂದ ಮುಕ್ತರಾಗುವುದು ಮಾತ್ರವಲ್ಲ ಶಿವನ ಪ್ರೀತಿ ಪಾತ್ರರು ಆಗುತ್ತಾರೆ, ಇದರಿಂದಾಗಿ ಶಿವ ಅವರ ಎಲ್ಲಾ ಆಸೆ ಪೂರೈಸುತ್ತಾನೆ ಎಂದು ಹೇಳಲಾಗುವುದು.
ಆರೋಗ್ಯ ಸಮಸ್ಯೆಯಿದ್ದರೆ ದೂರಾಗುವುದು
ಶಿವ ತಾಂಡವ ಮಂತ್ರವನ್ನು ಪ್ರತಿನಿತ್ಯ ಪಠಣೆ ಮಾಡುವುದರಿಂದ ಆರೋಗ್ಯ ಸಮಸ್ಯೆ ದೂರಾಗುವುದು. ಈ ಮಂತ್ರ ಪಠಣೆ ಮಾಡುವುದರಿಂದ ಯಾವ ಕೆಟ್ಟ ತಂತ್ರಗಳು ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ, ಅಲ್ಲದೆ ಈ ಮಂತ್ರ ಪಠಣೆ ಮಾಡುವುದರಿಂದ ವ್ಯಕ್ತಿ ತಾನು ಮಾಡಿದ ಪಾಪದಿಂದ ಮೋಕ್ಷ ಪಡೆಯುತ್ತಾನೆ.
ಶಿವ ತಾಂಡವ ಮಂತ್ರವನ್ನು ಯಾವುದೇ ದಿನದಲ್ಲಿ ಪಠಿಸಬಹುದು
ಶಿವ ತಾಂಡವ ಮಂತ್ರ ಪಠಣೆಗೆ ಇದೇ ಸಮಯ, ದಿನ ಅಂತಿಲ್ಲ, ಯಾವುದೇ ದಿನದಲ್ಲಿ ಪಠಿಸಬಹುದು, ಆದರೆ ಸೂರ್ಯಾಸ್ತಕ್ಕೆ ಒಂದು ಗಂಟೆ ಮೊದಲು ಪಠಣೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುವುದು
ಶಿವ ತಾಂಡವ ಸ್ತೋತ್ರ
ಶಿವ ತಾಂಡವ ಸ್ತೋತ್ರ
ಜಟಾಟವೀ ಗಲಜ್ಜಲ ಪ್ರವಾಹ ಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್
ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ-
-ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ
ಧರಾಧರೇಂದ್ರ ನಂದಿನೀ ವಿಲಾಸಬಂಧು ಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ
ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ
ಸಹಸ್ರಲೋಚನ ಪ್ರಭೃತ್ಯಶೇಷಲೇಖ ಶೇಖರ
ಪ್ರಸೂನಧೂಳಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ
ಲಲಾಟ ಚತ್ವರಜ್ವಲದ್ಧನಂಜಯ ಸ್ಫುಲಿಂಗಭಾ-
-ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೇಶಿರೋಜಟಾಲಮಸ್ತು ನಃ
ಕರಾಲ ಫಾಲಪಟ್ಟಿಕಾ ಧಗದ್ಧಗದ್ಧಗಜ್ಜ್ವಲ-
ದ್ಧನಂಜಯಾಧರೀಕೃತಪ್ರಚಂಡಪಂಚಸಾಯಕೇ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ-
-ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ಮತಿರ್ಮಮ
ನವೀನಮೇಘಮಂಡಲೀ ನಿರುದ್ಧ ದುರ್ಧರ ಸ್ಫುರತ್-
ಕುಹೂನಿಶೀಥಿನೀತಮಃ ಪ್ರಬಂಧಬಂಧುಕಂಧರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಳಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ
ಪ್ರಫುಲ್ಲ ನೀಲ ಪಂಕಜ ಪ್ರಪಂಚಕಾಲಿಮಪ್ರಭಾ-
-ವಿಲಂಬಿಕಂಠಕಂದಲೀರುಚಿಪ್ರಬದ್ಧಕಂಧರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ
ಅಗರ್ವಸರ್ವಮಂಗಳಾಕಳಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ
ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ-
-ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಫಾಲಹವ್ಯವಾಟ್ |
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಳ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ
ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್-
-ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ
ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ
ಕದಾ ನಿಲಿಂಪನಿರ್ಝರೀನಿಕುಂಜಕೋಟರೇ ವಸನ್
ವಿಮುಕ್ತದುರ್ಮತಿಃ ಸದಾ ಶಿರಃಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೋ ಲಲಾಟಫಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಸದಾ ಸುಖೀ ಭವಾಮ್ಯಹಮ್
ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











