Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಫೆ.6ರಂದು ಷಟಿಲಾ ಏಕಾದಶಿ: ಅದೃಷ್ಟಕ್ಕಾಗಿ, ಆರೋಗ್ಯಕ್ಕಾಗಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
ಫೆಬ್ರವರಿ 6ಕ್ಕೆ ಷಟಿಲಾ ಏಕಾದಶಿ, ಪ್ರತಿಯೊಂದು ಏಕಾದಶಿ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಈ ಏಕಾದಶಿಯಂದ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ. ಅನ್ನದಾನ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು, ಅಲ್ಲದೆ ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂಬ ನಿಯಮಗಳಿವೆ, ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಷಟಿಲಾ ಏಕಾದಶಿಯ ಪೂಜಾ ಮುಹೂರ್ತ
ತಿಥಿ ಪ್ರಾರಂಭ: ಮಾಘ ಮಾಸದ ಸಕೃಷ್ಣ ಏಕಾದಶಿ ದಿನಾಂಕ ಆರಂಭ: 5 ಫೆಬ್ರವರಿ ಸಂಜೆ 05:24ಕ್ಕೆ ಪ್ರಾರಂಭ
ಮಾಘ ಕೃಷ್ಣ ಏಕಾದಶಿ ತಿಥಿಯ ಅಂತ್ಯ: ಫೆಬ್ರವರಿ 6, ಸಂಜೆ 04:07 ಕ್ಕೆ
ಪಾರಣ ಸಮಯ: 7 ಫೆಬ್ರವರಿ ಬೆಳಗ್ಗೆ 07:06 ರಿಂದ 09:18 ರವರೆಗೆ
ಷಟಿಲಾ ಏಕಾದಶಿಯಂದು ಏನು ಮಾಡಬೇಕು?
- ಷಟಿಲಾ ಏಕಾದಶಿಯ ದಿನದಂದು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದು, ಪುಣ್ಯ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಬಕೆಟ್ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ ಸ್ನಾನ ಮಾಡಿ.
- ಈ ದಿನದ ದಾನಕ್ಕೂ ವಿಶೇಷ ಮಹತ್ವವಿದೆ. ಈ ದಿನದಂದು ಎಳ್ಳನ್ನು ದಾನ ಮಾಡುವುದರಿಂದ ಸಮಸ್ಯೆಗಳು ದೂರಾಗುವುದು.
- ಷಟಿಲಾ ಏಕಾದಶಿಯ ದಿನದಂದು ಎಳ್ಳನ್ನು ವಿಷ್ಣುವಿಗೆ ಅರ್ಪಿಸಬೇಕು ಹೀಗೆ ಅರ್ಪಿಸುವಾಗ ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಎಳ್ಳನ್ನು ಅರ್ಪಿಸಿ. ದೇವರ ಪಂಚಾಮೃತದಲ್ಲಿ ಎಳ್ಳು ಬೆರೆಸಿ ತಯಾರಿಸಿ.
- ಈ ದಿನ ಸ್ನಾನದ ನೀರಿಗೂ ಎಳ್ಳು ಸೇರಿಸಬೇಕು. ಹೀಗೆ ಮಾಡುವುದರಿಂದ ರೋಗ ಬಾಧೆಯಿಂದ ಮುಕ್ತರಾಗುವುದು ಎಂದು ನಂಬಲಾಗಿದೆ.
- ಷಟಿಲಾ ಏಕಾದಶಿಯ ದಿನದಂದು ಉಪವಾಸವಿದ್ದು ವಿಷ್ಣುವನ್ನು ಸ್ಮರಿಸಿ.
ಷಟಿಲಾ ಏಕಾದಶಿಯಂದು ಏನು ಮಾಡಬಾರದು?
- ಷಟಿಲಾ ಏಕಾದಶಿಯಂದು ತಾಮಸಿಕ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.
- ಷಟಿಲಾ ಏಕಾದಶಿಯಂದು ದೈಹಿಕ ಸಂಪರ್ಕ ಮಾಡಬಾರದು, ಇಡೀ ದಿನ ವಿಷ್ಣುವಿನ ಧ್ಯಾನದಲ್ಲಿ ಕಾಲ ಕಳೆಯಬೇಕು
- ಈ ದಿನ ಬದನೆಯನ್ನು ಸೇವಿಸಬೇಡಿ.
- ಈ ದಿನ ಕೋಪಗೊಳ್ಳಬೇಡಿ, ಬೇರೆಯವರಿಗೆ ನೋವುಂಟು ಮಾಡಬೇಡಿ
- ಏಕಾದಶಿಯ ದಿನ ಸೌದೆ ಒಡೆಯಬೇಡಿ.
ಷಟಿಲಾ ಏಕಾದಶಿಯಂದು ಪರಿಹಾರ
ಉತ್ತಮ ಆರೋಗ್ಯಕ್ಕೆ
ಏಕಾದಶಿಯಂದು ಸ್ನಾನ ಮಾಡುವಾಗ ಅದಕ್ಕೆ ಸ್ವಲ್ಪ ಎಳ್ಳನ್ನು ಹಾಕಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು. ಎಳ್ಳು ತಿನ್ನುವುದರಿಂದ ವ್ಯಕ್ತಿಯ ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟಕ್ಕಾಗಿ
ಎಳ್ಳುಂಡೆ ಹಾಗೂ ನಾಣ್ಯಗಳನ್ನು ದಾನ ಮಾಡಿ, ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಬಲವಾಗುವುದು ಎಂದು ಹೇಳಲಾಗುವುದು.
ಶನಿದೋಷಕ್ಕೆ ಪರಿಹಾರ
ನಿಮ್ಮ ಜಾತಕದಲ್ಲಿ ಶನಿ ದೋಷವಿದ್ದರೆ, ರಾಹು ಅಥವಾ ಕೇತು ಅಥವಾ ಪಿತ್ರ ದೋಷಗಳ ದುಷ್ಪರಿಣಾಮಗಳು ಇದ್ದರೆ, ನೀವು ಷಟಿಲಾ ಏಕಾದಶಿಯ ದಿನದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು.
ಅನ್ನದಾನ
ಈ ದಿನ ಬಡವರಿಗೆ , ನಿರ್ಗತಿಕರಿಗೆ ಅನ್ನದಾನ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
