Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಷಟಿಲಾ ಏಕಾದಶಿ ಫೆ.5ಕ್ಕಾ 6ಕ್ಕಾ? ಈ ದಿನ ಅನ್ನ ದಾನಕ್ಕೆ ತುಂಬಾನೇ ಮಹತ್ವಇದೆ ಏಕೆ?
ಹಿಂದೂ ಧರ್ಮದಲ್ಲಿ ಏಕಾದಶಿಗೆ ತುಂಬಾನೇ ಮಹತ್ವವಿದೆ, ಏಕಾದಶಿಯಂದು ಶ್ರೀವಿಷ್ಣುವನ್ನು ಆರಾಧನೆ ಮಾಡಿದರೆ ಒಳಿತಾಗುವುದು ಎಂದು ಹೇಳಲಾಗುವುದು. ವರ್ಷದಲ್ಲಿ 24 ಏಕಾದಶಿ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ.
ಫೆಬ್ರವರಿ ಪ್ರಾರಂಭದಲ್ಲಿ ಷಟಿಲಾ ಏಕಾದಶಿ ಬಂದಿದೆ, ಈ ಏಕಾದಶಿಯಂದು ಮಾಡುವ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ, ಈ ಏಕಾದಶಿಯನ್ನು ಯಾವಾಗ ಆಚರಿಸಲಾಗುವುದು? ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ಷಟಿಲಾ(ಷಟ್ತಿಲಾ) ಏಕಾದಶಿ
ಸನಾತನ ಧರ್ಮದಲ್ಲಿ ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಶಟ್ಟಿಲ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿ ಫೆಬ್ರವರಿ 5 ರಂದು ಸಂಜೆ 05.24 ರಿಂದ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 6 ರಂದು ಸಂಜೆ 04.07 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ, ಫೆಬ್ರವರಿ 6 ರಂದು ಉಪವಾಸವನ್ನು ಆಚರಿಸಲಾಗುವುದು. ಈ ದಿನದಂದು ವಿಷ್ಣು ದೇವರಿಗೆ ಉಪವಾಸ, ಪೂಜೆ ಮತ್ತು ಎಳ್ಳನ್ನು ದಾನ ಮಾಡುವುದರಿಂದ ಮನುಷ್ಯ ಸಕಲ ಸುಖವನ್ನು ಪಡೆಯುತ್ತಾನೆ.
ಷಟಿಲಾ ಏಕಾದಶಿ ಕತೆ ಕೇಳಬೇಕು ಏಕೆ?
ಷಟ್ತಿಲಾ ಏಕಾದಶಿ ಕತೆ ಕೇಳಿ ಯಾರು ಈ ಉಪವಾಸ ಆಚರಿಸುತ್ತಾರೋ ಅವರಿಗೆ ಕಷ್ಟಗಳು ನಿವಾರಣೆಯಾಗಿ ಅವರ ಇಷ್ಟಾರ್ಥಗಳು ನೆರವೇರುವುದು. ಮನೆಯಲ್ಲಿ ಸುಳ-ನೆಮ್ಮದಿ-ಐಶ್ವರ್ಯ ಇರುತ್ತದೆ ಎಂದು ಹೇಳಲಾಗುವುದು. ಯಾರಿಗೆ ಈ ದಿನ ಉಪವಾಸ ಇರಲು ಸಾಧ್ಯವಾಗದಿದ್ದರೆ ಏಕಾದಶಿ ಕತೆಯನ್ನು ಕೇಳಿದರೂ ಪುಣ್ಯ ಲಭಿಸುವುದಂತೆ.
ಷಟಿಲಾ ಏಕಾದಶಿಯ ಪೂಜಾ ನಿಯಮಗಳು
ಷಟ್ತಿಲಾ ಏಕಾದಶಿಯ ದಿನ ಹಸುವಿನ ಸಗಣಿ, ಹತ್ತಿ, ಎಳ್ಳು ಬೆರೆಸಿ ರೊಟ್ಟಿಗಳನ್ನು ಮಾಡಿ ಹವನ ಮಾಡಬೇಕು.
* ಏಕಾದಶಿಯ ದಿನದಂದು ಶ್ರೀವಿಷ್ಣುವನ್ನು ರಾತ್ರಿ ಜಾಗರಣೆ ಇದ್ದು ಧ್ಯಾನ ಮಾಡಿ.
* ಏಕಾದಶಿಯ ದಿನದಂದು ಸಿಹಿತಿಂಡಿ, ತೆಂಗಿನಕಾಯಿ ಮತ್ತು ಸುಪಾರಿಯೊಂದಿಗೆ ಅರ್ಘ್ಯವನ್ನು ಅರ್ಪಿಸಿ ವಿಷ್ಣುವನ್ನು ಸ್ತುತಿಸಿ.
* ಮರುದಿನ, ವಿಷ್ಣು ದೇವರನ್ನು ಧೂಪ, ದೀಪದಿಂದ ಪೂಜಿಸಿ ಮತ್ತು ನೈವೇದ್ಯ ಅರ್ಪಿಸಿ.
* ಈ ದಿನದ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ.
ಷಟಿಲಾ ಏಕಾದಶಿಯಂದು ಅನ್ನದಾನದ ಮಹತ್ವ
ಪದ್ಮ ಪುರಾಣದ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಬ್ಬ ವಿಷ್ಣುವಿನ ಭಕ್ತೆಯಿದ್ದಳು. ವಿಷ್ಣುವಿನ ಯಾವುದೇ ಪೂಜೆ, ಉಪವಾಸ ತಪ್ಪಿಸುತ್ತಿರಲಿಲ್ಲ. ಉಪವಾಸವನ್ನು ಮಾಡಿದ್ದರಿಂದ ಆಕೆಯ ದೇಹ ಶುದ್ಧವಾಯಿತು. ಶ್ರೀ ವಿಷ್ಣುವಿನ ಭಕ್ತೆಯಾದ ನನಗೆ ಮೋಕ್ಷ ಸಿಗುವುದೆಂದೇ ನಂಬಿದ್ದಳು. ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ಆಹಾರವನ್ನು ದಾನ ಮಾಡಿರಲಿಲ್ಲ. ಆ ಮಹಿಳೆ ತನ್ನ ಮರಣದ ನಂತರ ವೈಕುಂಠ ತಲುಪಿದಾಗ ಅಲ್ಲಿ ಅವಳಿಗೆ ಆಶ್ಚಯ ಎದುರಾಗಿತ್ತು, ವಿಷ್ಣುವಿನ ಪ್ರತಿಯೊಂದು ಪೂಜೆ, ಪುರಸ್ಕಾರ ಮಾಡಿದರೂ ವೈಕುಂಠದಲ್ಲಿ ಅವಳಿಗಾಗಿ ಖಾಲಿ ಗುಡಿಸಲು ನೀಡಲಾಗಿತ್ತು.
ಆ ಮಹಿಳೆಗೆ ತುಂಬಾ ದುಃಖವಾಯಿತು, ಶ್ರೀವಿಷ್ಣುವಿನ ಬಳಿ ಹೋಗಿ ನಾನು ನಿನ್ನ ಭಕ್ತೆ, ಪ್ರತಿಯೊಂದು ಉಪವಾಸ ಮಾಡುತ್ತಿದ್ದೆ, ಪೂಜೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೆ ನನಗೇಕೆ ಖಾಲಿ ಗುಡಿಸಲು ಸಿಕ್ಕಿದೆ..? ಆಗ ದೇವರು ನೀನು ಪೂಜೆ , ಪುರಸ್ಕಾರ ಎಲ್ಲಾ ಮಾಡಿದ್ದೀಯ, ನಿನ್ನ ಪೂಜೆಯ ಫಲದಿಂದ ವೈಕುಂಠಕ್ಕೆ ಬಂದಿದ್ದೀಯ, ಆದರೆ ನಿನ್ನ ಜೀವನದಲ್ಲಿ ನೀನು ಯಾವತ್ತೂ ಏನನ್ನೂ ದಾನ ಮಾಡಿಲ್ಲ ಆದ್ದರಿಂದ ನಿನಗೆ ಈ ಫಲ ಸಿಕ್ಕಿದೆ ಎಂದು ಹೇಳುತ್ತಾನೆ. ನಂತರ ವಿಷ್ಣು ಒಮ್ಮೆ ನಾನು ನಿನ್ನ ಉದ್ಧಾರಕ್ಕಾಗಿ ಭಿಕ್ಷೆ ಕೇಳಲು ಬಂದಿದ್ದೆ, ಆದರೆ ನೀನು ಆಹಾರ ನೀಡುವ ಬದಲಿಗೆ ನನಗೆ ಮಣ್ಣಿನ ಮುದ್ದೆ ನೀಡಿದೆ. ಹಾಗಾಗಿ ವೈಕುಂಠದಲ್ಲಿ ನಿನಗೆ ಗುಡಿಸಲು ಸಿಕ್ಕಿದೆ ಎಂದು ಹೇಳುತ್ತಾನೆ. ಭಗವಾನ್ ವಿಷ್ಣುವಿನ ಮಾತುಗಳನ್ನು ಕೇಳಿದ ಮಹಿಳೆಗೆ ತುಂಬಾ ಪಶ್ಚಾತ್ತಾಪವಾಗುತ್ತೆ, ಆಕೆ ನಾನು ಮಾಡಿದ ತಪ್ಪನ್ನು ಸರಿಪಡಿಸುವ ಮಾರ್ಗವನ್ನು ಭಗವಂತನಲ್ಲಿ ಕೇಳಿದಳು.
ಆಗ ಶ್ರೀ ಹರಿಯು ದೇವ ಕನ್ಯೆಯರು ನಿನ್ನನ್ನು ಭೇಟಿಯಾಗಲು ಬರುತ್ತಾರೆ, ಅವರನ್ನು ನಿನ್ನಗುಡಿಸಲಿಗೆ ಆಹ್ವಾನಿಸಬೇಕು, ನಂತರ ಅವರುಷಟಿಲಾ ಏಕಾದಶಿಯ ಉಪವಾಸದ ಕತೆ ಬಗ್ಗೆ ಹೇಳುವವರೆಗೆ ಗುಡಿಸಲ ಬಾಗಿಲು ತೆರೆಯಬೇಡ ಎಂದನು. ಅದರಂತೆ ದೇವಕನ್ಯೆಯರು ಬಂದಾಗ ಮಹಿಳೆ ಅವರನ್ನು ತನ್ನ ಗುಡಿಸಿಲಿಗೆ ಆಹ್ವಾನಿಸಿ ಅವರ ಬಳಿಷಟಿಲಾ ಏಕಾದಶಿ ಬಗ್ಗೆ ಕತೆ ಹೇಳಲು ಬೇಡಿಕೊಳ್ಳುತ್ತಾಳೆ. ಅವರುಷಟಿಲಾ ಏಕಾದಶಿಯ ಮಹತ್ವವನ್ನು ಹೇಳುತ್ತಾರೆ. ಅದರ ನಂತರ ಮಹಿಳೆಯು ವಿಧಿ - ವಿಧಾನಗಳ ಪ್ರಕಾರಷಟಿಲಾ ಏಕಾದಶಿ ವ್ರತವನ್ನು ಪೂರ್ಣಗೊಳಿಸುತ್ತಾಳೆ. ಇದರಿಂದ ಆಕೆಯ ಪಾಪಗಳು ಕಳೆದು ಗುಡಿಸಲಿನಲ್ಲಿ ಅವಳು ಬಯಸಿದಂತೆ ಆಹಾರ ಮತ್ತು ಐಶ್ವರ್ಯ ಸಿಗುವುದು, ವೈಕುಂಠದಲ್ಲಿ ಸಂತೋಷದಿಂದ ಇರುತ್ತಾಳೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











