Sharad Purnima: ಲಕ್ಷ್ಮಿ ದೇವಿ ಭೂಲೋಕಕ್ಕೆ ಬರುವ ದಿನ.. ಯಾರಿಗೆ ಲಾಭ?

Sharad Purnima: ಇಂದು ಲಕ್ಷ್ಮಿ ದೇವಿಯೂ ಭೂಮಿಯಲ್ಲಿ ಸಂಚರಿಸುವ ದಿನ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನದವನ್ನು ಶರದ್ ಪೂರ್ಣಿಮಾ ಎಂಬುದಾಗಿ ಕರೆಯಲಾಗುತ್ತದೆ. ಇಂದು ಅಕ್ಟೋಬರ್ 6ರಂದು ಲಕ್ಷ್ಮಿ ದೇವಿ ಭೂಮಿಯಲ್ಲಿ ಸಂಚರಿಸುತ್ತಾಳೆ ಎಂದು ಹೇಳಲಾಗಿದೆ. ಹೀಗಾಗಿ ಈ ದಿನವನ್ನು ಬಹಳ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಅದ್ರಲ್ಲೂ ಜ್ಯೋತಿಷ್ಯದ ವಿಚಾರವಾಗಿ ಇಂದು ಮುಖ್ಯ ದಿನ.

ನಾವಿಂದು ಶರದ್ ಪೂರ್ಣಿಮಾ ದಿನದ ಈ ವಿಶೇಷ ಸಮಯದಲ್ಲಿ ಲಕ್ಷ್ಮಿ ದೇವಿಯಿಂದ ಆಶೀರ್ವಾದ ಪಡೆಯುವಂತಹ ರಾಶಿಗಳ ಕುರಿತಾಗಿ ತಿಳಿದುಕೊಳ್ಳೋಣ. ಹಾಗೆ ಈ ಸಮಯದಲ್ಲಿ 4 ರಾಶಿಗಳು ಲಕ್ಷ್ಮಿ ದೇವಿಯ ಅದ್ಭುತ ಲಾಭ ಪಡೆಯಲಿದ್ದಾರೆ ಅವರಲ್ಲಿ ಯಾರಿಗೆಲ್ಲಾ ಧನಲಾಭ, ಯಾರಿಗೆ ಶುಭ ಸಂಪತ್ತು ವೃತ್ತಿ ನೋಡಿ.

Sharad Purnima These Lucky Zodiac Signs Will Get Lakshmi Devi Blessings In Kannada

ಈ ಶರದ್ ಪೂರ್ಣಿಮಾದ ಸಮಯದಲ್ಲಿ ಯಾವ ರಾಶಿಯವರಲ್ಲಿ ಆರ್ಥಿಕ ಬಲ ಹೆಚ್ಚಾಗಲಿದೆ? ಯಾರಿಗೆ ಲಕ್ಷ್ಮಿ ದೇವಿಯು ಒಲಿಯುತ್ತಾಳೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ವೃಷಭ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶರದ್ ಪೂರ್ಣಿಮಾದ ಸಮಯದಲ್ಲಿ ವೃಷಭ ರಾಶಿಯ ಜನರಿಗೆ ಉತ್ತಮ ಬೆಂಬಲ ಸಿಗಲಿದೆ. ಲಕ್ಷ್ಮಿ ದೇವಿಯ ಆಶೀರ್ವಾದದ ಪರಿಣಾಮವಾಗಿ ಅವರ ಆರ್ಥಿಕ ಬೆಂಬಲ ಹೆಚ್ಚಾಗಲಿದೆ, ಹೊಸ ಆದಾಯಗಳು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ. ಸಾಲದ ಪ್ರಮಾಣ ನಿಧಾನವಾಗಿ ಕಡಿಮೆ ಮಾಡುವ ದಾರಿ ಕಂಡುಕೊಳ್ಳಲಿದ್ದಾರೆ. ನೀವು ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಹುಡುಕಿ ಬರಬಹುದು. ಶರದ್ ಪೂರ್ಣಿಮಾ ದಿನದಂದು ನಿಮ್ಮ ಗೌರವ ಹೆಚ್ಚಾಗುವ ಸಂಭವವಿದೆ. ನಿಮ್ಮ ಪರಿಶ್ರಮ ವ್ಯರ್ಥವಾಗದೆ ಅದರಿಂದ ಉತ್ತಮ ಬೆಂಬಲ ಪಡೆಯಲಿದ್ದೀರಿ. ಪ್ರಯಾಣಗಳು, ಪ್ರವಾಸಗಳ ಮಾಡುವಿರಿ. ಜೀವನದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ವಾವಲಂಬಿಗಳಾಗಬಹುದು. ನಿಮಗೆ ಬರಬೇಖಿದ್ದ ಹಣಕಾಸು ನಿಮ್ಮ ಕೈ ಸೇರುವ ಸಮಯ ಇದಾಗಿರಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಲ್ಲಿ ಈ ಶರದ್ ಪೂರ್ಣಿಮಾ ದಿನದಿಂದ ಉತ್ತಮ ಸಮಯ ಆಗಮಿಸಲಿದೆ, ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮಲ್ಲಿ ಹಣಕಾಸಿನ ಕೊರತೆಯಂತಹ ಸಮಸ್ಯೆಗಳಿಗೆ ಮುಕ್ತಿ ಬೀಳಲಿದೆ. ಹಬ್ಬದ ವಾತಾವರಣದಲ್ಲಿ ನಿಮ್ಮಿಂದಾಗಿ ಖುಷಿ ಹೆಚ್ಚಾಗಲಿದೆ. ನಿಮ್ಮ ದೊಡ್ಡ ಕೆಲಸಗಳಲ್ಲಿ ಶುಭವಾಗುವ ಎಲ್ಲಾ ನಿರೀಕ್ಷೆಗಳಿವೆ. ಪ್ರಾಮಾಣಿಕ ಪ್ರಯತ್ನಗಳಲ್ಲಿ ಯಶಸ್ಸುಗಳಿಸುತ್ತೀರಿ. ಸಾಲದ ಪ್ರಮಾಣದಲ್ಲಿ ಇಳಿಕೆಯಾಗುವುದು ನಿಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿನ ನಿರ್ಧಾರಗಳು ನಿಮಗೆ ಉತ್ತಮ ಫಲಿತಾಂಶಗಳ ತರಲಿವೆ. ದುಂದು ವೆಚ್ಚಗಳು ಕಡಿಮೆಯಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಸಮಯವು ಬಹಳ ಅನುಕೂಲಗಳನ್ನು ತರಲಿದೆ. ನಿಮ್ಮ ಹಣಕಾಸು, ವ್ಯವಹಾರ, ದಾಂಪತ್ಯ ವಿಚಾರದಲ್ಲಿದ್ದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸಿಗಲಿವೆ. ಹಣದ ಸಮಸ್ಯೆಯಿಂದ ನೀವು ಅರ್ಧಕ್ಕೆ ಬಿಟ್ಟಂತಹ ಕೆಲಸಗಳನ್ನು ಮರು ಆರಂಭಿಸಲು ಸೂಕ್ತ ಸಮಯ ಆಗಿರಲಿದೆ. ಹಾಗೆ ಹಣದಿಂದಾಗಿ ವ್ಯಾಪಾರ ನಿಧಾನಗತಿಯಲ್ಲಿದ್ದರೆ ವೇಗ ಪಡೆದುಕೊಳ್ಳುವಿರಿ. ಪ್ರಯಾಣ ಮಾಡುವುದು ನಿಮಗೆ ಖರ್ಚಿನ ಜೊತೆಗೆ ಒಂದಿಷ್ಟು ಲಾಭದಾಯಕವೂ ಹೌದು.

ಮಕರ ರಾಶಿ

ಮಕರ ರಾಶಿಯವರಿಗೆ ಈ ಸಮಯವು ಅತ್ಯಂತ ಶುಭವಾಗುತ್ತಿದೆ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ವಿಚಾರವಾಗಿ ಇದ್ದ ಅಡೆತಡೆ ನಿವಾಣೆಯಾಗಲಿದೆ. ಮನೆ ನವೀಕರಣ, ಆಸ್ತಿ ಖರೀದಿ, ಪ್ರಯಾಣಗಳಿಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಉತ್ತಮ ಶುಭವಿದೆ. ಹಣಕ್ಕಾಗಿ ನಿಮ್ಮ ಆಪ್ತರಿಗೆ ಮನವಿ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ಬೆಂಬಲ ಸಿಗಲಿದೆ. ಹಾಗೆ ಅವಸರದಲ್ಲಿ ವ್ಯವಹಾರ ಸಂಬಂಧಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಯಾರಿಗಾದರು ಹಣ ನೀಡುವುದು ಅಥವಾ ಸಾಲ ನೀಡುವ ಮುನ್ನ ನಿಮ್ಮ ನಿರ್ಧಾರವನ್ನು ಮತ್ತೆ ಪರಿಶೀಲಿಸುವುದು ಉತ್ತಮ.

English summary

Sharad Purnima: These Lucky Zodiac Signs Will Get Lakshmi Devi Blessings In Kannada

Let's know about the zodiac signs that will receive blessings from Goddess Lakshmi during this special time of Sharad Purnima. So, 4 zodiac signs will receive wonderful benefits of Goddess Lakshmi during this time.
Story first published: Monday, October 6, 2025, 10:10 [IST]
X
Desktop Bottom Promotion