Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಅಕ್ಟೋಬರ್ 16ಕ್ಕೆ ಶರದ್ ಹುಣ್ಣಿಮೆ: ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ನೀಡಬೇಡಿ
ಪ್ರತಿತಿಂಗಳು ಹುಣ್ಣಿಮೆ ಹಾಗೂ ಅಮವಾಸ್ಯೆ ಬರುತ್ತದೆ, ಈ ಎರಡು ದಿನಗಳು ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಅಕ್ಟೋಬರ್ 16ಕ್ಕೆ ಶರದ್ ಪೂರ್ಣಿಮಾ ಎಂದು ಆಚರಿಸಲಾಗುವುದು. ಅಶ್ವಿನ್ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುವುದು.
ಈ ಶರದ್ ಪೂರ್ಣಿಮೆಯಂದು ಕೆಲವೊಂದು ಕಾರ್ಯ ಮಾಡಬೇಕು,ಕೆಲವೊಂದು ಕಾರ್ಯಗಳನ್ನು ಮಾಡಲೇಬಾರದು ಎಂದು ಹೇಳಲಾಗುವುದು. ಇನ್ನು ಈ ದಿನ ಕೆಲ ವಸ್ತುಗಳನ್ನು ದಾನ ಮಾಡಿದರೆ ಅದು ನಮ್ಮ ಮೇಲೆ ನಕರಾತ್ಮಕ ಪರಿಣಾಮ ಬೀರುವುದು ಎಂಬ ಧಾರ್ಮಿಕ ನಂಬಿಕೆಯಿದೆ. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶರದ್ ಪೂರ್ಣಿಮೆಯಂದು ವಿಷ್ಣು ಮತ್ತು ಲಕ್ಷ್ಮಿಯನ್ನು ಆರಾಧಿಸಿ
ಈ ದಿನ ಶ್ರೀವಿಷ್ಣು ಹಾಗೂ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು,ಆರ್ಥಿಕ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ ಎಂದು ಹೇಳಲಾಗುವುದು. ಸಂಜೆ ಶ್ರೀ ವಿಷ್ಣು ಮತ್ತು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ, ತುಳಸಿ ಅರ್ಪಿಸಿ ಪೂಜೆ ಸಲ್ಲಿಸಿ.
ಶರದ್ ಪೂರ್ಣಿಮಾ ಮಹತ್ವವೇನು?
ಶರದ್ ಪೂರ್ಣಿಮಾ ಬಳಿಕ ಚಳಿಗಾಲ ಶುರುವಾಗುವುದು, ಮಳೆಗಾಲ ಕಳೆದು ಚಳಿಗಾಲ ಶುರುವಾಗುವುದು, ಹಾಗಾಗಿ ಈ ದಿನ ಲಜ್ಷ್ಮಿ ಪೂಜೆಯಿಂದ ಈ ದಿನ ಶುರುವಾಗುವುದು.
ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇಮಹತ್ವವಿದೆ
ಈದಿನ ಬಡವರಿಗೆ ಆಹಾರ, ಬಟ್ಟೆ, ಅಗ್ಯತವಿರುವ ವಸ್ತುಗಳನ್ನು ದಾನ ಮಾಡಬೇಕು ಎಂದು ಹೇಳಲಾಗುವುದು. ಈ ಶುಭ ದಿನದಲ್ಲಿ ದಾನ ಮಾಡುವುದರಿಂದ ಧಾರ್ಮಿಕ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಹೀಗೆ ಮಾಡುವುದರಿಂದ ಪುಣ್ಯದ ಫಲ ಹೆಚ್ಚುವುದು, ನಮ್ಮ ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ.
ತುಂಬಾ ಕಡೆ ಶರದ್ ಪೂರ್ಣಿಮಾವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು
ಹೊಸ ಋತುವಿನ ಆರಂಭ, ಈ ದಿನದಂದು ಪಾಯಸ ಮಾಡಿ, ಹುಣ್ಣಿಮೆಯ ಬೆಳತಿಂಗಳಿನಲ್ಲಿ ಎಲ್ಲರು ಜೊತೆಯಾಗಿ ಸೇರಿ ತಿನ್ನುವ ಸಂಪ್ರದಾಯವಿರುತ್ತದೆ. ಮನೆ ಮುಂದೆ ರಂಗೋಲಿ ಹಾಕಿ ದೀಪ ಬೆಳಗಿ , ಎಲ್ಲರೂ ಜೊತೆಯಾಗಿ ಸಂತೋಷ-ಸಂಭ್ರಮದಿಂದ ಈ ದಿನ ಆಚರಿಸಲಾಗುವುದು.
ಶರದ್ ಪೂರ್ಣಿಮಾ ದಿನಾಂಕ: ಅಕ್ಟೋಬರ್ 16
ಪೂರ್ಣಿಮಾ ತಿಥಿ ಪ್ರಾರಂಭ ರಾತ್ರಿ:08:04ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ ಅಕ್ಟೋಬರ್ 17 ಸಂಜೆ 04:55ಕ್ಕೆ
ಚಂದ್ರೋದಯ:ಅಕ್ಟೋಬರ್ 16 ಸಂಜೆ 05:13ಕ್ಕೆ
ಈ ಚಂದ್ರ ಚಂದ್ರನು 16 ಕಲಶದ ಹೊಳಪಿನಿಂದ ಕೂಡಿರುತ್ತಾನೆ, ಈ ದಿನ ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ.
ಶರದ್ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳಲಾಗುವುದು
ಈ ದಿನ ನೀವು ಪಾತ್ರೆ ಹಾಗೂ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು
ಈ ರೀತಿ ಮಾಡಿದರೆ ದರಿದ್ರ ಉಂಟಾಗುವುದು ಎಂದು ಹೇಳಲಾಗುವುದು. ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಕಷ್ಟ ಅನುಭವಿಸುವಂತಾಗುವುದು ಎಂಬ ನಂಬಿಕೆಯಿದೆ.
ಹಾಲಿನ ಉತ್ಪನ್ನಗಳು
ಶರದ್ ಪೂರ್ಣಿಮೆಯಂದು ಮೊಸರು, ಮಜ್ಜಿಗೆ ಈ ಬಗೆಯ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳಲಾಗುವುದು. ಹಾಲಿನ ಉತ್ಪನ್ನಗಳನ್ನು ದಾನ ಮಾಡಿದರೆ ಶುಕ್ರದೋಷ ಉಂಟಾಗುವುದು ಎಂದು ಹೇಳಲಾಗುವುದು. ಶುಕ್ರದೋಷ ಉಂಟಾದರೆ ಆರ್ಥಿಕ ತೊಂದರೆಗಳು, ಕೆಲಸದಲ್ಲಿ ಅಡೆತಡೆ ಈ ಬಗೆಯ ಸಮಸ್ಯೆ ಉಂಟಾಗುವುದು.
ಉಪ್ಪು
ಉಪ್ಪು ದಾನ ಮಾಡಬೇಡಿ, ಉಪ್ಪು ಕೊಡುವುದರಿಂದ ಅಥವಾ ಉಪ್ಪು ಸಾಲ ಪಡೆಯುವುದರಿಂದ ನಕರಾತ್ಮಕ ಪರಿಣಾಮ ಬೀರುವುದು ಎಂದು ಹೇಳಲಾಗುವುದು.
ಹೊಸ ಋತು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಚೈತನ್ಯ, ಹುಮ್ಮಸು ತರಲಿ, ಸಮೃದ್ಧಿ, ಸಂಪತ್ತು ತುಂಬಿರಲಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
