Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಟ ದರ್ಶನ್ ರಾಶಿಯಲ್ಲಿ ನಡೆಯುತ್ತಿದೆ ಶನಿ ಸಾಡೇಸಾತಿ 2ನೇ ಹಂತ: ಅತ್ಯಂತ ಕಷ್ಟಕರ ಸಮಯವಿದು
ದರ್ಶನ್ ಸುದ್ದಿ ಇಡೀ ಕರ್ನಾಟಕ್ಕೆ ಬೇಸರ ಮೂಡಿಸಿದೆ. ಅಷ್ಟೊಂದು ಒಳ್ಳೆಯ ನಟ ನಿಜ ಜೀವನದಲ್ಲಿ ಇಷ್ಟೊಂದು ಕಠೋರವಾಗಿ ವರ್ತಿಸಿದ್ದಾರೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹೆಚ್ಚು ಫ್ಯಾನ್ ಫಾಲೋವರ್ ಹೊಂದಿರು ದರ್ಶನ್ ತನ್ನ ಅಭಿಮಾನಿಯನ್ನು ಕೊಲೆ ಮಾಡಿರುವ ಆರೋಪ ಪಟ್ಟಿ ಹೊತ್ತು ಇದೀಗ ಜೈಲ್‌ನಲ್ಲಿದ್ದಾರೆ.
ಒಂದು ವೇಳೆ ಆರೋಪ ಸಾಬೀತಾದರೆ ಇಂಥ ನಟನ ಅಭಿಮಾನಿಯಾಗಿದ್ದಕ್ಕೆ ಪಶ್ಚಾತಾಪ ಪಡಬೇಕಾಗುತ್ತದೆ, ಏಕೆಂದರೆ ಅದು ಅಕ್ಷಮ್ಯ ಅಪರಾಧ, ಆದರೆ ಈಗ ಕೇಸ್ ತನಿಖಾ ಹಂತದಲ್ಲಿದೆ. .. ಆದರೆ ದರ್ಶನ್ ಅವರ ರಾಶಿಯಲ್ಲಿ ಇದೀಗ ಶನಿ ಸಾಡೇಸಾತಿಯಿದೆ.

ನಟ ದರ್ಶನ್‌ರವರದ್ದು ಕುಂಭ ರಾಶಿ, ಇದೀಗ ಕುಂಭ ರಾಶಿಯಲ್ಲಿ ಶನಿ ಸಾಡೇ ಸಾತಿಯ ಎರಡನೇ ಹಂತ ನಡೆಯುತ್ತಿದೆ. ಈ ಶನಿ ಸಾಡೇಸಾತಿ ಪ್ರಭಾವ 2028ರವರೆಗೆ ಕುಂಭ ರಾಶಿಯವರಿಗೆ ಇರಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಶನಿ ಸಾಡೇಸಾತಿ ಅತ್ಯಂತ ಕಠಿಣ ಸಮಯ ಎಂದು ಹೇಳಲಾಗುವುದು, ಈ ಶನಿ ಸಾಡೇ ಸಾತಿ ಶುರುವಾದರೆ ವ್ಯಕ್ತಿ ಬದುಕಿನಲ್ಲಿ ತುಂಬಾನೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ನೋವು, ಅವಮಾನ, ಸಂಕಷ್ಟ ಎಲ್ಲವೂ ಎದುರಾಗುವುದು, ಆ ಸೂರ್ಯನೇ ಶನಿಯ ಕೆಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ, ಮನುಷ್ಯ ಶನಿಯ ಈ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ ಕೆಲವೊಂದು ಪರಿಹಾರ ಮಾಡಿದರೆ ಶನಿಯ ಕಠಿಣ ಪ್ರಭಾವ ತಗ್ಗಿಸಬಹುದು ಎಂದು ಹೇಳಲಾಗುವುದು.
ದರ್ಶನ್ ಅವರ ರಾಶಿಯಲ್ಲಿ ಶನಿಯ ಎರಡನೇ ಹಂತ ನಡೆಯುತ್ತಿದೆ
ವೈದಿಕ ಜ್ಯೋತಿಷ್ಯದಲ್ಲಿ ಶನಿ ಸಾಡೇ ಸಾತಿ ಏಳೂವರೆ ವರ್ಷ ಇರುತ್ತದೆ, ಅದು ಮೂರು ಹಂತಗಳಲ್ಲಿ ಇರುತ್ತದೆ ಎಂದು ಹೇಳಲಾಗುವುದು.
ಆಲೂ ಬಟಾಣಿ- ಪನ್ನೀರ್ ಟಿಕ್ಕಿ, ಮಕ್ಕಳಿಗೆ ಆರೋಗ್ಯಕರ ಸ್ನ್ಯಾಕ್ಸ್
ಮೊದಲ ಹಂತ
ಶನಿಯು 12 ನೇ ಮನೆಗೆ ಪ್ರವೇಶಿಸಿದಾಗ, ಸಾಡೇ ಸತಿಯ ಮೊದಲ ಹಂತವು ಪ್ರಾರಂಭವಾಗುತ್ತದೆ. ಇದರ ಪ್ರಭಾವ ಎರಡೂವರೆ ವರ್ಷ ಇರಲಿದೆ. ಶನಿಯ ಸಾಡೇಸಾತಿ ಮೊದಲ ಹಂತ ಶುರುವಾದಾಗ ಆಸ್ತಿಗೆ ಸಂಬಂಧಿಸಿದಂತೆ ಅನೇಕ ರೀತಿಯ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆಗಳು ಬರುವುದು.
ಶನಿ ಸಾಡೇಸಾತಿಯ ಮೊದಲನೇ ಹಂತದಲ್ಲಿ ಮಾನಸಿಕ ಒತ್ತಡ, ದುಗುಡ ಇವೆಲ್ಲಾ ಬರುವುದು. ಅನೇಕ ಸಮಸ್ಯೆಗಳು ಒಟ್ಟೊಟ್ಟಿಗೆ ಬರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ, ಒಂದು ಸವಾಲು ಮುಗಿಯುವಷ್ಟರಲ್ಲಿ ಮತ್ತೊಂದು ಸವಾಲು ರೆಡಿಯಾಗಿರುತ್ತದೆ.
ಎರಡನೇ ಹಂತ
ಈ ಹಂತದಲ್ಲಿ ವೃತ್ತಿ ಜೀವನ, ಆರ್ಥಿಕತೆ ಅಥವಾ ಸಂಬಂಧ ಇವುಗಳ ಮೇಲೆ ಪ್ರಭಾವ ಬೀರುವುದು, ಈ ಸಮಯದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲಾಗುವುದು. ಆದರೆ ಈ ಹಂತದಲ್ಲಿ ನೀವು ನಿಮ್ಮ ಗುರಿ ಹಾಗೂ ಕೆಲಸ ಹಾಕಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿ ಸಾಡೇ ಸತಿಯ ಎರಡನೇ ಹಂತ ಅತ್ಯಂತ ನೋವಿನಿಂದ ಹಾಗೂ ದುಃಖದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಸಾಡೇಸಾತಿಯ ಎರಡನೇ ಹಂತವು ಪ್ರಾರಂಭವಾದಾಗ, ಒಬ್ಬ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಗಂಭೀರ ಆರೋಪ ಬರಬಹುದು, ಅನಗ್ಯತ ವಾದಗಳು ಉಂಟಾಗುವುದು, ಒಟ್ಟಿನಲ್ಲಿ ಈ ಅವಧಿ ಅತ್ಯಂತ ಕಷ್ಟಕರವಾಗಿರುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಈ ಅವಧಿಯಲ್ಲಿ ಹೊಸ ಅವಕಾಶಗಳೂ ದೊರೆಯಲಿದೆ, ಹೊಸತನ ಶುರುವಾಗುವುದು. ಮೂರನೇ ಹಂತದಲ್ಲಿ ಸವಾಲುಗಳು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಈ ಹಂತದ ಕೊನೆ-ಕೊನೆಗೆ ನಿಮ್ಮ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುವುದು.
ಶನಿಯು ಮೂಲ ಚಂದ್ರನ ಮನೆಯಿಂದ ಎರಡನೇ ಮನೆಗೆ ಪ್ರವೇಶಿಸಿದಾಗ, ಸಾಡೇಸಾತಿಯ ಮೂರನೇ ಹಂತವು ಪ್ರಾರಂಭವಾಗುತ್ತದೆ. ಶನಿಯ ಸಾಡೇಸತಿಯ ಮೂರನೇ ಹಂತವನ್ನು ಅವರೋಹಣ ಸಾಡೇಸತಿ ಎಂದೂ ಕರೆಯುತ್ತಾರೆ. ಈ ಹಂತ ಅಷ್ಟೆನೂ ಕಷ್ಟಕರವಾಗಿರುವುದಿಲ್ಲ. ಈ ಅವಧಿಯಲ್ಲಿ ದೊಡ್ಡ ಸಮಸ್ಯೆಗಳಿರಲ್ಲ, ಆದರೆ ಕೆಲ ಸಣ್ಣ ಸಮಸ್ಯೆಗಳಿರುತ್ತದೆ.
ಮೊದಲ ಎರಡು ಹಂತ ತುಂಬಾ ಕಷ್ಟಕರ, ಈಗ ದರ್ಶನ್ ಅವರ ಜಾತಕದಲ್ಲಿ ಶನಿ ಸಾಡೇಸಾತಿ ಎರಡನೇ ಹಂತದಲ್ಲಿ ನಡೆಯುತ್ತಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications