Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೀನ ರಾಶಿಯವರಲ್ಲಿ ಶನಿ ಸಾಡೇಸಾತಿ ಮೊದಲ ಹಂತ: ಈ ಜ್ಯೋತಿಷ್ಯ ಪರಿಹಾರ ಒಳ್ಳೆಯದು
ಇದೀಗ ಶನಿಯು ಕುಂಭ ರಾಶಿಯಲ್ಲಿದೆ, ಇದೀಗ ಶನಿ ಸಾಡೇಸಾತಿ ಮೀನ ರಾಶಿಯವರಿಗೆ ಮೊದಲ ಹಂತದಲ್ಲಿದೆ. ಶನಿಯು ಮೊದಲ ಹಂತದಲ್ಲಿರುವಾಗ ಹೆಚ್ಚಿನ ತೊಂದರೆಗಳನ್ನು ಕೊಡುತ್ತಾನೆ ಎಂದು ಹೇಳಲಾಗುವುದು.
ಶನಿಯು ಮೊದಲ ಹಂತದಲ್ಲಿ ನಡೆಯುತ್ತಿದ್ದರೆ ಆ ರಾಶಿಯವರು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಧನು ರಾಶಿಯವರು ಸಾಡೇಸಾತಿಯಿಂದ ಮುಕ್ತರಾಗಿದ್ದಾರೆ. ಮಕರ ರಾಶಿಯವರಲ್ಲಿ ಕೊನೆಯ ಹಂತದಲ್ಲಿ. ಮೀನ, ಕುಂಭ, ಮಕರ ಶನಿ ಸಾಡೇ ಸಾತಿಯಿಂದ ಬಳಲುತ್ತಿದ್ದಾರೆ.
ಮೀನ ರಾಶಿಯಲ್ಲಿ ಸಾಡೇ ಸತಿಯ ಮೊದಲ ಹಂತ ನಡೆಯುತ್ತಿದೆ. ಮೀನ ರಾಶಿಯಲ್ಲಿ ಸಾಡೇ ಸತಿ 29 ಏಪ್ರಿಲ್ 2022 ರಿಂದ ಪ್ರಾರಂಭವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಸುಮಾರು 22 ವರ್ಷಗಳ ನಂತರ ಮೀನ ರಾಶಿಯವರಿಗೆ ಶನಿಯ ಸಾಡೇ ಸತಿ ಆರಂಭವಾಗಿದೆ. ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಕೆಟ್ಟ ಪರಿಣಾಮ ಕಡಿಮೆಯಾಗಲು ಕೆಲವೊಂದು ಜ್ಯೋತಿಷ್ಯ ಪರಿಹಾರ ನೀಡಲಾಗಿದೆ ನೋಡಿ:

ಮೀನ ರಾಶಿಯವರಿಗೆ ಎಲ್ಲಿಯವರೆಗೆ ಶನಿ ಸಾಡೇಸಾತಿ ಇರಲಿದೆ
ಸಾಡೇ ಸತಿಯ ಮೊದಲ ಹಂತವು ಮೀನ ರಾಶಿಯಲ್ಲಿ ನಡೆಯುತ್ತಿದೆ, ಇದು 29 ಮಾರ್ಚ್ 2025 ರವರೆಗೆ ಇರಲಿದೆ. ಇದಾದ ನಂತರ ಎರಡನೇ ಹಂತದ ಸಾಡೇ ಸತಿ ಆರಂಭವಾಗಲಿದೆ. , ಏಪ್ರಿಲ್ 7, 2030 ರಂದು, ಮೀನ ರಾಶಿಯವರು ಸಾಡೇಸಾತಿಯಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾರೆ.
ಜ್ಯೋತಿಷ್ಯ ಪರಿಹಾರಗಳು
ಬಡವರು ಮತ್ತು ನಿರ್ಗತಿಕರಿಗೆ ನಿಮ್ಮ ಶಕ್ತಿಗೆ ಅನುಸಾರ ಸಹಾಯ ಮಾಡಿ
ಬಡವರಿಗೆ ನಿಮ್ಮ ಶಕ್ತಿಗೆ ಅನುಸಾರ ಸಹಾಯ ಮಾಡಿ, ಬಡಮಕ್ಕಳಿಗೆ ಪುಸ್ತಕಗಳನ್ನು ಕೊಡಿಸಿ, ಬಡವರಿಗೆ ಕಪ್ಪು ಕಂಬಳಿ, ಎಳ್ಳೆಣ್ಣೆ, ಕಪ್ಪು ಎಳ್ಳು ಜೊತೆಗೆ ಆಹಾರ ಸಾಮಗ್ರಿ ಧಾನ ಮಾಡಿ.
ಶಿವನಿಗೆ ಪ್ರತಿ ಶನಿವಾರ ಜಲಾಭಿಷೇಕಮಾಡಿ
ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಬೆರೆಸಿದ ನೀರಿನಲ್ಲಿ ಅಭಿಷೇಕ ಮಾಡಿ. ಈ ರೀತಿ ಮಾಡುವುದರಿಂದ ಶಿವನ ಕೃಪೆ ದೊರೆಯುವುದು, ಶನಿಯು ತನ್ನ ಕೆಟ್ಟ ದೃಷ್ಟಿ ಬೀರುವುದನ್ನು ಕಡಿಮೆ ಮಾಡುತ್ತಾನೆ. ಶನಿ ಯಂತ್ರವನ್ನು ಸ್ಥಾಪಿಸಿ, ಪ್ರತಿದಿನ ಪೂಜಿಸಿ. ಈ ಪರಿಹಾರವನ್ನು ಮಾಡುವುದರಿಂದ ಶನಿ ದೋಷದಿಂದ ಪರಿಹಾರ ಪಡೆಯಬಹುದು.
ಆಲರ ಮರದಡಿಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ
ಮೀನ ರಾಶಿಯ ಜನರು ಸಾಡೇಸತಿಯನ್ನು ತೊಡೆದುಹಾಕಲು ಗುರುವಾರ ಮತ್ತು ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಆಲದ ಮರಕ್ಕೆ ನೀರನ್ನು ಅರ್ಪಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
ಹನುಮಾನ್ ಚಾಲೀಸಾ ಪಠಿಸಿ
ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿ. ಹನುಮಾನ ಕೃಪೆಯಿಂದ ಶನಿಯ ಕಾಟ ಕಡಿಮೆಯಾಗುವುದು. ಶನಿವಾರ ತಪ್ಪದೆ ಹನುಮಾನ್ ಚಾಲೀಸ ಪಠಿಸಿ.
ಶನಿ ಸಾಡೇಸಾತಿ ಅಂದರೆ ಏಳೂವರೆ ವರ್ಷ ಇರುತ್ತದೆ, ಈ ಶನಿ ಸಾಡೇಸಾತಿ ಬಂದರೆ ಮನುಷ್ಯ ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಈ ಶನಿ ಸಾಡೇಸಾತಿ ಅನುಭವಿಸಿರುವ ಪ್ರತಿಯೊಬ್ಬರ ಅನುಭವ ಮಾತು. ಈ ಅವಧಿಯಲ್ಲಿ ಇಂಥ ಜ್ಯೋತಿಷ್ಯ ಪರಿಹಾರಗಳು ಸ್ವಲ್ಪ ಪರಿಹಾರ ನೀಡುತ್ತದೆ.
ಈ ಪರಿಹಾರ ಮಾಡುವುದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು, ಇಲ್ಲದಿದ್ದರೆ ಆರ್ಥಿಕ, ವೃತ್ತಿ ಜೀವನ, ಕುಟುಂಬ ಜೀವನ ಎಲ್ಲದರಲ್ಲೂ ಒಂದಲ್ಲಾ ಒಂದು ಕಷ್ಟ ಅನುಭವಿಸಬೇಕಾಗುತ್ತದೆ. ಕುಂಭ ರಾಶಿಗೆ ಹೋಲಿಸಿದರೆ ಮೀನ ರಾಶಿಯವರಿಗೆ ಈ ಸಾಡೇಸಾತಿ ಪ್ರಭಾವ ಕಠಿಣವಾಗಿದೆ, ಏಕೆಂದರೆ ಇದು ಮೊದಲ ಮನೆಯಲ್ಲಿ ನಡೆಯುತ್ತಿದೆ. ಆದ್ದರಿಂದ ಶನಿಯ ಪ್ರಭಾವ ಕಡಿಮೆ ಮಾಡಲು ಜ್ಯೋತಿಷ್ಯ ಪರಿಹಾರ ಒಳ್ಳೆಯದು ಎಂದು ನಂಬಲಾಗಿದೆ.
ಶನಿ ಮಂತ್ರ ಹಾಗೂ ಹನುಮಾನ್ ಚಾಲೀಸವನ್ನು ಪ್ರತಿದಿನ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
