Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಎರಡನೇ ಹಂತ ಶುರು: ಈ ಅವಧಿ ತುಂಬಾ ಕಠಿಣ, ಪರಿಹಾರವೇನು?
ಶನಿ ಸಾಡೇಸಾತಿ ಮನುಷ್ಯನಿಗೆ ಬಂದರೆ ಅವನು ಆ ಏಳೂವರೆ ವರ್ಷ ಮನುಷ್ಯ ತುಂಬಾನೇ ಕಷ್ಟಪಡಬೇಕಾಗುತ್ತದೆ. ಅದರಲ್ಲಿಯೂ ಮೊದಲ ಹಂತ ಕಷ್ಟಕರ, ಎರಡನೇ ಹಂತ ತುಂಬಾನೇ ಕಠಿಣ ಎಂದು ಹೇಳಲಾಗುವುದು.
ಎರಡನೇ ಹಂತದಲ್ಲಿ ಶನಿಯು ಪಡಬಾರದ ಕಷ್ಟವನ್ನು ನೀಡುತ್ತಾನೆ, ಈ ಅವಧಿಯಲ್ಲಿ ಅವಮಾನವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಶನಿ ಸಾಡೇಸಾತಿ ಎಂದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. ಶನಿ ಮೆಚ್ಚಿಕೊಳ್ಳುವ ಕಾರ್ಯಗಳನ್ನು ಮಾಡಿ ಶನಿ ಸಾಡೇಸಾತಿಯ ಕಷ್ಟದಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು ಅಷ್ಟೇ...

ಇದೀಗ ಮೂರು ರಾಶಿಯಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ
ಶನಿ ಸಾಡೇಸಾತಿ ಮಕರ, ಕುಂಭ ರಾಶಿಯಲ್ಲಿ ನಡೆಯುತ್ತಿದೆ, ಅದರಲ್ಲಿ ಮಕರ ರಾಶಿಯವರಿಗೆ ಶನಿಯ ಮೂರನೇ ಹಂತ ನಡೆಯುತ್ತಿದೆ, ಹೀಗಾಗಿ ಈ ಅವಧಿ ತೊಂದರೆಯಿಲ್ಲ, ಮೀನ ರಾಶಿಯವರಿಗೆ ಮೊದಲಿನ ಹಂತ ನಡೆಯುತ್ತಿದೆ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಎರಡನೇ ಹಂತ ಶುರುವಾಗಿದೆ.
ಶನಿ ಸಾಡೇಸಾತಿ ಎರಡನೇ ಹಂತ ಅತ್ಯಂತ ಕಠಿಣ
ಶನಿ ಸಾಡೇಸಾತಿ ಎರಡನೇ ಹಂತದಲ್ಲಿ ಇದ್ದಾಗ ಆ ವ್ಯಕ್ತಿಯು ಒಂದರ ಹಿಂದೆ ಮತ್ತೊಂದು ಎಂಬಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಅವಧಿಯಲ್ಲಿ ದೈಹಿಕ, ಮಾನಸಿಕ ಸಮಸ್ಯೆಗಳು ಎದುರಾಗುವುದು, ಆರ್ಥಿಕವಾಗಿ ತುಂಬಾ ಕಷ್ಟಗಳನ್ನು ಅನುಭವಿಸಬೇಕು. ಈ ಸಮಯದಲ್ಲಿ ಆ ವ್ಯಕ್ತಿಯನ್ನು ಯಾರಾದರೂ ಮೋಸ ಮಾಡಬಹುದು, ಮಾನಸಿಕವಾಗಿ ತುಂಬಾನೇ ನೋವುಂಟಾಗುವುದು. ಈ ಅವಧಿಯಲ್ಲಿ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದು ಕಷ್ಟವಾಗುವುದು.
ಶನಿಸಾಡೇಸಾತಿ ಕಷ್ಟದಿಂದ ಪಾರಾಗಲು ಯಾವ ಪರಿಹಾರ ಒಳ್ಳೆಯದು?
ಕೆಲ ಜ್ಯೋತಿಷ್ಯ ಪರಿಹಾರ ಮಾಡಿ, ಪ್ರತಿ ಶನಿವಾರ ಶನಿದೇವಾಲಯಕ್ಕೆ ಭೇಟಿ ನೀಡಿ ನೀಡಿ, ಎಳ್ಳೆಣ್ಣೆ ದಾನ ಮಾಡಿ. ಎಳ್ಳೆಣ್ಣೆಯಲ್ಲಿ ನಿಮ್ಮ ಮುಕ ನೋಡಿ ನಂತರ ದಾನ ಮಾಡಿ.
ಬಡವರಿಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಿ.
ಈ ದಿನ ಉಪವಾಸವಿದ್ದು ಶನಿಯನ್ನು ಆರಾಧಿಸಿ, ಶನಿ ಮಂತ್ರವನ್ನು ಪಠಿಸಿ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.
ಹನುಮಾನ್ ಚಾಲೀಸ ಪಠಿಸಿ.
ಆರ್ಥಿಕ ತೊಂದರೆಗಳು ಉಂಟಾಗುವುದು: ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದು, ದುಡ್ಡು ಬರಬೇಕಾಗಿರುವ ಕಡೆಯಿಂದ ಬರುವುದು ಕಷ್ಟವಾಗುವುದು, ಸಾಲ ಕೇಳಿದರೆ ಸಿಗುವುದು ಕಷ್ಟ, ಖರ್ಚು ಅಧಿಕ ಬರುವುದು, ಹೀಗೆ ಆರ್ಥಿಕವಾಗಿಯೂ ಸವಾಲಿನ ಸಮಯ, ಹಣದ ಚಿಂತೆ ತುಂಬಾನೇ ಕಾಡಲಿದೆ, ಯಾವ ಕೆಲಸದಲ್ಲಿಯೂ ನಿರೀಕ್ಷೆಯಂತೆ ಲಾಭ ಸಿಗಲ್ಲ.
ಆರೋಗ್ಯ: ಈ ಅವಧಿಯಲ್ಲಿ ಆರೊಗ್ಯ ಸಂಬಂಧಿತ ಸಮಸ್ಯೆ ಕಂಡು ಬರುವುದು. ಆಸ್ಪತ್ರೆಗೆ ತುಂಬಾನೇ ಹಣ ಖರ್ಚಾಗುವುದು.
ಶನಿ ಮಂತ್ರ
ಓಂ ಹಿಲ್ಮ್ ಶಾಮ್ ಶನಾಯ ನಮ" "ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ" "ಓಂ ಶಾಮ್ ಶನೇಶ್ಚಾರ ನಮಃ" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications