Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪರೂಪದ ಶನಿ ಪುಷ್ಯ ಯೋಗ: ಕಷ್ಟನಿವಾರಣೆಗೆ ಶನಿಗೆ ಈ ಪರಿಹಾರ ಮಾಡುವುದು ಒಳ್ಳೆಯದು
ನವೆಂಬರ್ ತಿಂಗಳ ಮೊದಕಲ ಶನಿವಾರ ಬಹಳ ವಿಶೇಷವಾಗಿದೆ. ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವನ್ನು ತುಂಬಾ ಶ್ರೇಷ್ಠ ನಕ್ಷತ್ರವೆಂದು ಪರಿಗಣಿಸಲಾಗಿದೆ. ಈ ಶನಿವಾರದಂದು ಶನಿ ಪುಷ್ಯ ಯೋಗದ ಅಪರೂಪದ ಸಂಯೋಜನೆ ನಡೆಯಲಿದೆ. ಈ ರೀತಿಯ ಅಪರೂಪದ ಘಟನೆ ವರ್ಷದಲ್ಲಿ ಒಂದು ಬಾರಿ ಮಾತ್ರ ಸಂಭವಿಸಲಿದೆ, ಅದರಲ್ಲೂ ಈ ಬಾರಿ ಶನಿ ಪುಷ್ಯ ಹಾಗೂ ರವಿ ಪುಷ್ಯ ಏರ್ಪಟ್ಟಿದೆ, 400 ವರ್ಷಗಳಿಗೊಮ್ಮೆ ಸಂಭವಿಸುವುದು ಎಂದು ಹೇಳಲಾಗುವುದು.
ಅಲ್ಲದೆ ಈ ದಿನ ಶನಿಯೂ ರಾಶಿ ಬದಲಾವಣೆ ಮಾಡುತ್ತಿರುವುದು ಕಾಕತಾಳೀಯವೇ ಸರಿ. ಜ್ಯೋತಿಷ್ಯದಲ್ಲಿ ಗುರು ಪುಷ್ಯ ಯೋಗದಷ್ಟೇ ಶನಿ ಪುಷ್ಯ ಯೋಗವೂ ಮಂಗಳಕರ ಹಾಗೂ ಅಪರೂಪದ ಯೋಗವಾಗಿದೆ.

ಈ ಶನಿ ಪುಷ್ಯ ಯೋಗದಲ್ಲಿ ದೀರ್ಘಕಾಲದ ಹೂಡಿಕೆ ಮಾಡುವುದು ಬಹಳ ಮಂಗಳಕರವೆಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪುಷ್ಯ ನಕ್ಷತ್ರದಲ್ಲಿ ಮಾಡುವ ಪೂಜೆ ಮತ್ತು ಪರಿಹಾರಗಳು ಕೂಡ ಶುಭ ಫಲವನ್ನು ನೀಡುತ್ತವೆ. ಈ ಬಾರಿ ಇಂದು ಅಂದರೆ ಜೂನ್ 4, ಶನಿವಾರದಂದು ಪುಷ್ಯ ನಕ್ಷತ್ರದ ನಿಮಿತ್ತ ಶನಿ-ಪುಷ್ಯರ ಶುಭ ಸಂಯೋಗ ಉಂಟಾಗಿದೆ.
ಶನಿ ಪುಷ್ಯ ಯೋಗದಂದ ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು:
* ಈ ದಿನ ಹನುಮಂತನನ್ನು ಆರಾಧಿಸಿ.
* ಶನಿವಾರದಂದು ಹನುಮಾನ್ ಚಾಲೀಸಾ ಅಥವಾ ಹನುಮಾನ್ ಬಹು ಅಷ್ಟಕವನ್ನು ಪಠಿಸುವುದರಿಂದ ಶನಿಯ ಬಾಧೆಯಿಂದ ಪರಿಹಾರ ಸಿಗುವುದು.
* ಆಲದ ಮರದ ಎಲೆಯಲ್ಲಿ ಓಂ ಶಂ ಶನೈಶ್ಚರಾಯ ನಮಃ ಎಂಬ ಮಂತ್ರವನ್ನು ಬರೆದು ಈ ಮಂತ್ರವನ್ನು 108 ಬಾರಿ ಪಠಿಸುತ್ತಾ ಆಲದ ಮರಕ್ಕೆ ಸುತ್ತು ಹಾಕಿ.
* ಈ ದಿನ ಶನಿ ದೇವರಿಗೆ ಸಾಸಿವೆಯೆಣ್ಣೆ ಅರ್ಪಿಸಿ.
* ಅನಾಥರಿಗೆ ದಾನ ಮಾಡಿ
* ಕಪ್ಪು ಎಳ್ಳು, ಕಪ್ಪು ಕಂಬಳಿಗಳನ್ನು ದಾನ ಮಾಡಿ
ಶನಿ ಮಂತ್ರಗಳನ್ನು ಪಠಿಸಿ
ಶನಿ ಮಹಾಮಂತ್ರ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||''
ಶನಿ ಗಾಯತ್ರಿ ಮಂತ್ರ
ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|
ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|''
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
