Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದೇ ತಿಂಗಳು ಶನಿ ಮಾರ್ಗಿಯಾಗಿ ಚಲಿಸಲಿದೆ: ಈ 3 ರಾಶಿಯವರು ಹೆಚ್ಚಿನ ಜಾಗ್ರತೆವಹಿಸಬೇಕು
ನವಗ್ರಹಗಳ ಕಠಿಣ ಪ್ರಭಾವದಲ್ಲಿ ಜನರು ಹೆಚ್ಚು ಭಯ ಪಡುವುದು ಶನಿಯ ಪ್ರಭಾವ, ಶನಿಯು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇರದಿದ್ದರೆ ತುಂಬಾನೇ ತೊಂದರೆ ಅನುಭವಿಸಬೇಕಾಗುತ್ತದೆ.
ಶನಿಸಾಡೇಸಾತಿ ಸಮಯದಲ್ಲಿ ಶನಿ ನೀಡುವ ಕಷ್ಟದಿಂದ ತಪ್ಪಿಸಿಕೊಂಡವರೇ ಇಲ್ಲ, ಕೆಲವೊಂದು ಪರಿಹಾರ ಮೂಲಕ ಅದರ ಕೆಟ್ಟ ಪರಿಣಾಮವನ್ನು ತಗ್ಗಿಸಬಹುದು ಅಷ್ಟೇ, ಶನಿಯು ರಾಶಿ ಬದಲಾವಣೆ ಕೂಡ ಎರಡೂವರೆ ವರ್ಷಕ್ಕೊಮ್ಮೆ ಮಾಡುವುದು. ಇದೀಗ ಶನಿಯು ಕುಂಭ ರಾಶಿಯಲ್ಲಿ ವಕ್ರೀಯ ಚಲನೆಯಲ್ಲಿದೆ, ನವೆಂಬರ್ 15ರಿಂದ ಮಾರ್ಗಿಯಾಗಿ ಸಂಚರಿಸಲಿದೆ.
ಶನಿಯು ಮಾರ್ಗಿಯಾಗಿ ಚಲಿಸಲಾರಂಭಿಸಿದಾಗ ಈ ರಾಶಿಯವರು ಹೆಚ್ಚಿನ ಜಾಗ್ರತೆವಹಿಸಬೇಕು:

ಮೀನ ರಾಶಿ:
ಮೀನ ರಾಶಿಯವರಲ್ಲಿ ಶನಿ ಸಾಡೇಸಾತಿಯ ಕಠಿಣ ಹಂತ ನಡೆಯುತ್ತಿರುವುದರಿಂದ ಶನಿಯು ಮಾರ್ಗಿಯಾದಾಗ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ವೃತ್ತಿ ಬದುಕಿನಲ್ಲಿ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಹೆಸರಿಗೆ ಕಳಂಕ ಬರಬಹುದು, ಈ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಮಾನಸಿಕ ಒತ್ತಡ ತುಂಬಾ ಹೆಚ್ಚಿರಲಿದೆ ಹಾಗಾಗಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಕೂಡ ಕಷ್ಟವಾಗುವುದು. ಈ ಸಮಯದಲ್ಲಿ ಹಣಕಾಸಿನ ಬಗ್ಗೆ ಜಾಗ್ರತೆವಹಿಸಬೇಕು.
* ಪ್ರತಿಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಶನಿ ಮಂತ್ರಗಳನ್ನು ಪಠಿಸಿ
* ಬಡವರಿಗೆ ಆಹಾರ ವಸ್ತುಗಳನ್ನು ಕಪ್ಪು ಎಳ್ಳಿನ ಜೊತೆಗೆ ದಾನ ಮಾಡಿ
* ಕಪ್ಪು ಕಂಬಳಿಯನ್ನು ನೀಡಿ
*ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ
* ಶನಿವಾರ ಶಿವನಿಗೆ ರುದ್ರಾಭಿಷೇಕ ಮಾಡಿಸುವುದು ಕೂಡ ಒಳ್ಳೆಯದು.
ಕುಂಭ ರಾಶಿ
ಶನಿಯು ಮಾರ್ಗಿಯಾಗಿ ಚಲಿಸಲಾರಂಭಿಸಿದಾಗ ಅದರ ಸ್ಥಾನ ಕುಂಭ ರಾಶೀಯವರಿಗೆ ತುಂಬಾನೇ ಮಾನಸಿಕ ಒತ್ತಡ ಉಂಟು ಮಾಡುತ್ತದೆ.ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳಿರಬಹುದು, ವೈಯಕ್ತಿಕ ಬದುಕಿನ ಸಮಸ್ಯೆ ವೃತ್ತಿ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಬೇಕು, ಕೋಪದ ವರ್ತನೆ ಸಮಸ್ಯೆ ಹೆಚ್ಚಿಸಬಹುದು, ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾದರೆ ಅದು ಹೆಚ್ಚಾಗದಂತೆ ನೋಡಿಕೊಳ್ಳಿ,ಹೊಂದಾಣಿಕೆಯಿಂದ ಇರಲು ಪ್ರಯತ್ನಿಸಬೇಕು. ಅನಗ್ಯತ ವಾದ ತಪ್ಪಿಸಿ.
- ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ
- ಮಂಗಳವಾರ ಮತ್ತು ಶನಿವಾರ ಹನುಮಂತ ಪೂಜಿಸಿ, ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಕೊಟ್ಟು ಬನ್ನಿ
ಮಕರ ರಾಶಿ
ಶನಿ ಮಾರ್ಗಿಯಾಗಿ ಚಲಿಸಲಾರಂಭಿಸಿದಾಗ ಮಕರ ರಾಶಿಯವರ ಬದುಕಿನಲ್ಲಿಯೂ ಕೆಲ ಸಮಸ್ಯೆಗಳು ಬರಬಹುದು, ಪತಿ-ಪತ್ನಿ ನಡುವೆ ವಿರಸ ಉಂಟಾಗಬಹುದು, ಚಿಕ್ಕ ವಿಷಯಕ್ಕೆ ಮನಸ್ತಾಪ ಉಂಟಾಗಬಹುದು, ಮೂರನೇಯ ವ್ಯಕ್ತಿಯ ಅಭಿಪ್ರಾಯ ತೆಗೆದುಕೊಳ್ಳಲು ಬಿಡಿಬೇಡಿ. ಹಣಕಾಸಿನ ಬಗ್ಗೆ ಕೂಡ ನೀವು ಗಮನಹರಿಸಬೇಕು, ನೀವು ಬಯಸಿದಂತೆ ಹಣ ಹೊಂದಿಸುವುದು ಕಷ್ಟವಾಗಬಹುದು. ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ.
ಮಕರ ರಾಶಿಯಲ್ಲಿ ಶನಿಸಾಡೇಸಾತಿ ಕೊನೆಯ ಹಂತ ನಡೆಯುತ್ತಿದೆ, ಹಾಗಾಗಿ ನಿಮ್ಮ ಸಮಸ್ಯೆಗಳು ಬೇಗನೆ ಬಗೆಹರಿಯಲಿದೆ. ಪ್ರತಿದಿನ ಹನುಮಾನ್ ಚಾಲೀಸ ಮಂತ್ರ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications