Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಜೂನ್ 6ಕ್ಕೆ ಶನಿ ಜಯಂತಿ: ಶನಿ ಸಾಡೇಸಾತಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಈ ಪರಿಹಾರ ಮಾಡಿದರೆ ಒಳ್ಳೆಯದು
ಈ ವರ್ಷ ಜೂನ್ 6ರಂದು ಶನಿ ಜಯಂತಿಯನ್ನು ಆಚರಿಸಲಾಗುವುದು, ಜ್ಯೇಷ್ಠಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುವುದು.
ಶನಿಯು ನಮ್ಮ ಕರ್ಮದ ಫಲ ನೀಡುವ ಗ್ರಹವಾಗಿದೆ. ಶನಿಯು ಒಳ್ಳೆಯ ಹಾಗೂ ಕೆಟ್ಟ ಪ್ರಭಾವವಿರುತ್ತದೆ, ಕೆಟ್ಟ ಪ್ರಭಾವ ತುಂಬಾನೇ ಕಠೋರವಾಗಿರುವುದರಿಂದ ಜನರು ತುಂಬಾನೇ ಭಯ ಪಡುತ್ತಾರೆ.

ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇದ್ದು ನಂತರ ರಾಶಿ ಬದಲಾವಣೆ ಮಾಡುತ್ತದೆ, ಇದೀಗ ಶನಿಯು ಕುಂಭ ರಾಶಿಯಲ್ಲಿದೆ. ಇದೀಗ ಮಕರ, ಕುಂಭ, ಮೀನ ರಾಶಿಯಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ.
ಶನಿ ಶಾಡೇಸಾತಿ ಇರುವವರು ಶನಿ ಜಯಂತಿಯಂದು ಈ ಪರಿಹಾರ ಮಾಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಮಕರ ರಾಶಿಯಲ್ಲಿ ಶನಿ ಸಾಡೇಸಾತಿ ಕೊನೆಯ ಹಂತ ನಡೆಯುತ್ತಿದೆ
ಮಕರ ರಾಶಿಯವರಲ್ಲಿ ಶನಿ ಸಾಡೇ ಸಾತಿಯ ಕೊನೆಯ ಹಂತವಿದು. ಈ ರಾಶಿಯವರಿಗೆ ಸಾಡೇ ಸತಿ 26 ಜನವರಿ 2017 ರಿಂದ ಪ್ರಾರಂಭವಾಯಿತು. 2025 ಮಾರ್ಚ್ 29 ರಂದು ಕೊನೆಗೊಳ್ಳುತ್ತದೆ.
ಕುಂಭ ರಾಶಿಯ ಮೇಲೆ ಸಾಡೇ ಸತಿ ಪ್ರಭಾವ
ಕುಂಭ ರಾಶಿಯ ಅಧಿಪತಿಯೂ ಶನಿದೇವನಾಗಿದ್ದು, ಈ ರಾಶಿಯಲ್ಲಿ ಶನಿಯ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ. ಕುಂಭ ರಾಶಿಯವರಿಗೆ 23 ಫೆಬ್ರವರಿ 2028 ರವರೆಗೆ ಶನಿ ಸಾಡೇಸಾತಿ ಪ್ರಭಾವ ಇರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಘಟ್ಟ ನಡೆಯುತ್ತಿದೆ. ಏಳೂವರೆ ವರ್ಷದ ಇದರ ಪ್ರಭಾವ ಇರಲಿದೆ, 2023ರಿಂದ ಶುರುವಾದ ಶನಿ ಸಾಡೇಸಾತಿಯಿಂದ 2030ರಲ್ಲಿ ಮುಕ್ತರಾಗುತ್ತಾರೆ.
ಶನಿ ಸಾಡೇಸಾತಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಸಾಡೇಸಾತಿಯಂದು ಈ ಪರಿಹಾರ ಮಾಡಿದರೆ ಒಳ್ಳೆಯದು:
ನೆರಳು ದಾನ ಮಾಡಿ
ಶನಿಯ ಸಾಡೇ ಸತಿ ಇರುವವರು ಶನಿ ಜಯಂತಿಯಂದು ಬೆಳಗ್ಗೆ ಸ್ನಾನ ಮಾಡಿ ದಿನ ಶನಿದೇವನ ದೇವಸ್ಥಾನಕ್ಕೆ ತೆರಳಿ ವಿಧಿವಿಧಾನಗಳ ಪ್ರಕಾರ ಪೂಜೆ ಮಾಡಿದರೆ ಒಳ್ಳೆಯದು. ಸಾಸಿವೆಯೆಣ್ಣೆಯನ್ನು ಕಬ್ಬಿಣದ ತಟ್ಟೆಗೆ ಹಾಕಿ ಅದರಲ್ಲಿ ಮುಖವನ್ನು ನೋಡಿ ಆ ಎಣ್ಣೆಯನ್ನು ಬಡವರಿಗೆ ದಾನ ಮಾಡಿ. ಈ ರೀತಿ ಮಾಡುವುದರಿಂದ ಸಾಡೇಸಾತಿ ಮತ್ತು ಶನಿ ಧೈಯ್ಯಾದ ದುಷ್ಪರಿಣಾಮಗಳು ದೂರವಾಗುವುದು.
ಈ ದಿನ ಬಡವರಿಗೆ ದಾನ ಮಾಡಿ
ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ ಬಳಿಕ ಬಡವರಿಗೆ ಮತ್ತು ನಿರ್ಗತಿಕರಿಗೆ ಹೊದಿಕೆ, ಕಪ್ಪು ಬಟ್ಟೆ, ಕಬ್ಬಿಣ, ಉಕ್ಕಿನ ಪಾತ್ರೆಗಳು, ಕಪ್ಪು ಎಳ್ಳು, ಕಪ್ಪು ಎಳ್ಳುಂಡೆ ಇವುಗಳನ್ನು ದಾನ ಮಾಡಿ. ಇದರಿಂದ ಶನಿಯು ಸಂತುಷ್ಟನಾಗುತ್ತಾನೆ, ಶನಿ ಕೆಟ್ಟ ಪ್ರಬಾವ ಕಡಿಮೆಯಾಗುವುದು. ಈ ದಿನ ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆ ದೀಪ ಹಚ್ಚಿದರೆ ಒಳ್ಳೆಯದು.
ಹನುಮಂತನ ಪೂಜೆ ಮಾಡಿ
- ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಹನುಮಂತನನ್ನು ಪೂಜಿಸಿ, ಈ ದಿನ ಹನುಮಾನ್ ಚಾಲೀಸ ಪಠಿಸಿ. ಈ ದಿನ ಹನುಮಾನ್ ಚಾಲೀಸ ಪಠಿಸಿ.ಸ
- ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಕಪ್ಪು ಕುದುರೆಯ ಉಗುರಿನಿಂದ ಮಾಡಿದ ಉಂಗುರವನ್ನು ಶನಿ ಜಯಂತಿಯಂದು ಸೂರ್ಯಾಸ್ತದ ಸಮಯದಲ್ಲಿ ಬಲಗೈಯ ಮಧ್ಯದ ಬೆರಳಿಗೆ ಧರಿಸಿದರೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
- ಶನಿ ಜಯಂತಿಯಂದು ಬೆಳಗ್ಗೆ ಸ್ನಾನ ಇತ್ಯಾದಿ ಮಾಡಿದ ನಂತರ ಆಲದ ಮರಕ್ಕೆ ನೀರನ್ನು ಅರ್ಪಿಸಿ 7 ಬಾರಿ ಪ್ರದಕ್ಷಿಣೆ ಮಾಡಿ. ಸಂಜೆ ಬಂದು ಸಂಜೆ ಸಾಸಿವೆಯೆಣ್ಣೆಯ ದೀಪವನ್ನು ಬೆಳಗಿಸಿ.
- ಈ ದಿನ ನೀವು ಹಿಟ್ಟು, ಸಕ್ಕರೆ, ಕಪ್ಪು ಎಳ್ಳು ಬೆರೆಸಿ ಇರುವೆಗಳಿಗೆ ಆಹಾರ ನೀಡಿ.
- ಶನಿ ಜಯಂತಿಯಂದು ಅಸಹಾಯಕ ಜನರಿಗೆ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications