Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಜಯಂತಿ 2024: ನಿಮ್ಮ ರಾಶಿ ಪ್ರಕಾರ ಈ ದಿನ ಈ ಸೇವೆ ಒಳ್ಳೆಯದು, ಕಷ್ಟಗಳು ದೂರಾಗುವುದು
ಜೂನ್ ತಿಂಗಳ ಅಮವಾಸ್ಯೆಯಂದು ಶನಿ ಜಯಂತಿ ಆಚರಿಸಲಾಗುವುದು, ಈ ಶನಿ ಜಯಂತಿ ಜೂನ್ 6 ಸಂಜೆ 6:07 ಕ್ಕೆ ಮುಕ್ತಾಯವಾಗುತ್ತದೆ. ಈ ಶನಿ ಜಯಂತಿಯಂದು ರಾಶಿ ಪ್ರಕಾರ ಈ ರೀತಿ ಪೂಜೆ ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗಬಹುದು.
ಶನಿ ಕೃಪೆಯಿಂದ ಕಷ್ಟಗಳು ದೂರಾಗುವುದು, ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯುವುದು. ಬನ್ನಿ ನಿಮ್ಮ ರಾಶಿಗೆ ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶನಿ ಜಯಂತಿಯಂದು ಈ ಜ್ಯೋತಿಷ್ಯ ಪರಿಹಾರ ಒಳ್ಳೆಯದು
ಮೇಷ ರಾಶಿ: ಮೇಷ ರಾಶಿಯವರು ಶನಿ ಜಯಂತಿಯ ದಿನ ಸಾಸಿವೆ ಎಣ್ಣೆ ಅಥವಾ ಕಪ್ಪು ಎಳ್ಳನ್ನು ದಾನ ಮಾಡಬೇಕು.
ವೃಷಭ ರಾಶಿ : ಶನಿ ಜಯಂತಿಯ ದಿನದಂದು ವೃಷಭ ರಾಶಿಯವರು ಬಡವರು ಮತ್ತು ನಿರ್ಗತಿಕರಿಗೆ ಕಪ್ಪು ಕಂಬಳಿ ದಾನ ಮಾಡಬೇಕು.
ಮಿಥುನ ರಾಶಿ: ಶನಿ ಜಯಂತಿಯ ದಿನದಂದು ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಿಮ್ಮ ನೆರಳು ನೋಡಿ ಆ ಎಣ್ಣೆಯನ್ನು ದಾನ ಮಾಡಿ.
ಕರ್ಕ ರಾಶಿ : ಕರ್ಕ ರಾಶಿಯವರು ಶನಿ ಜಯಂತಿಯಂದು ಬಡವರಿಗೆ ಕಪ್ಪು ಎಳ್ಳು, ಉದ್ದಿನಬೇಳೆ, ಸಾಸಿವೆ ಎಣ್ಣೆ ಮತ್ತು ಬಟ್ಟೆಗಳನ್ನು ದಾನ ಮಾಡಿ.
ಸಿಂಹ ರಾಶಿ: ಸಿಂಹ ರಾಶಿಯವ ಈ ದಿನ ಹನುಮಂತನ ದೇವಾಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬನ್ನಿ.
ಕನ್ಯಾ ರಾಶಿ : ಕನ್ಯಾ ರಾಶಿಯವರು ಈ ದಿನ ಶನಿ ಮಂತ್ರ ಪಠಿಸಿ.
ತುಲಾ ರಾಶಿ: ತುಲಾ ರಾಶಿಯವರು ಈ ದಿನ ಕಪ್ಪು ಅಥವಾ ನೀಲಿ ಬಟ್ಟೆ, ಎಳ್ಳು, ಆಹಾರ ವಸ್ತುಗಳನ್ನು ದಾನ ಮಾಡಿ.
ವೃಶ್ಚಿಕ ರಾಶಿ: ಶನಿ ಜಯಂತಿಯಂದು ಹನುಮಂತ ದೇವರ ಆರಾಧನೆ ಮಾಡಿ. ಪೂಜೆಯ ನಂತರ, ಕಪ್ಪು ನಾಯಿಯನ್ನು ಬಡಿಸಿ.
ಧನು ರಾಶಿ : ಧನು ರಾಶಿಯವರು ಶನಿ ಜಯಂತಿಯ ದಿನದಂದು ಆಲದ ಮರದ ಸುತ್ತು ಹಾಕಿ ಸಾಸಿವೆಯೆಣ್ಣೆ ದೀಪ ಹಚ್ಚಿ.
ಮಕರ ರಾಶಿ: ಮಕರ ರಾಶಿಯವರು ಈ ದಿನ ಶನಿಯ ಕೃಪೆಗಾಗಿ ಆಹಾರವಸ್ತುಗಳನ್ನು ಬಡವರಿಗೆ ದಾನ ಮಾಡಿ.
ಕುಂಭ ರಾಶಿ: ಈ ದಿನ ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ ಬಳಿಮ ಶನಿಗೆ ಪ್ರಿಯವಾದ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ.
ಮೀನ ರಾಶಿ: ಮೀನ ರಾಶಿಯವರು ಶನಿ ಜಯಂತಿಯ ದಿನದಂದು ಹಳದಿ ಬಟ್ಟೆ, ಅರಿಶಿನ, ಕುಂಕುಮವನ್ನು ದಾನ ಮಾಡಬೇಕು
ಎಲ್ಲಾ ರಾಶಿಯವರು ಈ ದಿನ ವಿಷ್ಣ ಚಾಲೀಸ ಮಂತ್ರ ಪಠಿಸಿ
ಶನಿ ಜಯಂತಿ ಕಥೆ
ಸೂರ್ಯನು ದಕ್ಷ ರಾಜನ ಮಗಳು ಸಂಗ್ಯಾಳನ್ನು ವಿವಾಹವಾಗುತ್ತಾನೆ. ಸೂರ್ಯನಿಗೆ ಮನು, ಯಮರಾಜ ಮತ್ತು ಯಮುನಾ ಎಂಬ ಮೂವರು ಮಕ್ಕಳಿದ್ದಾರೆ. ಪುರಾಣಗಳ ಪ್ರಕಾರ, ಒಮ್ಮೆ ಸಂಗ್ಯಾ ತನ್ನ ತಂದೆ ದಕ್ಷನಿಗೆ ಸೂರ್ಯನ ಪ್ರಖರತೆಯಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದಳು . ಆಗ ರಾಜ ದಕ್ಷನು ತನ್ನ ಮಗಳ ಮಾತಿಗೆ ಗಮನ ಕೊಡಲಿಲ್ಲ. ನೀನು ಸೂರ್ಯನ ಅರ್ಧಾಂಗಿ ಎಂದು ಹೇಳಿದರು. ಅವಳ ತಂದೆ ಹೀಗೆ ಹೇಳಿದಾಗ ಸಂಗ್ಯಾ ತನ್ನ ತಪಸ್ಸಿನ ಬಲದಿಂದ ಅವಳ ನೆರಳನ್ನು ಬಹಿರಂಗಪಡಿಸಿದಳು ಮತ್ತು ಅವಳಿಗೆ ಸವರ್ಣ ಎಂದು ಹೆಸರಿಸಿದಳು.
ಸೂರ್ಯ ಮತ್ತು ಸಂಗ್ಯಾರಿಗೆ ಶನಿ ಹುಟ್ಟುತ್ತಾನೆ, ಶನಿದೇವನ ಮೈಬಣ್ಣ ತುಂಬಾ ಗಾಢವಾಗಿತ್ತು. ಸೂರ್ಯ ದೇವನಿಗೆ ಶನಿಯನನ್ನು ತನ್ನ ಮಗನಾಗಿ ಸ್ವೀಕರಿಸಲು ನಿರಾಕರಿಸಿದನು. ಇದರಿಂದ ಕೋಪಗೊಂಡ ಶನಿಯು ಸೂರ್ಯನತ್ತ ನೋಡಿದಾಗ ಸೂರ್ಯ ಮಂಕಾಗಿ ಇಡೀ ಜಗತ್ತು ಕತ್ತಲಾಗುವುದು.
ಆವಾಗ ಸೂರ್ಯನು ತನ್ನ ತಪ್ಪನ್ನು ಮನ್ನಿಸುವಂತೆ ಶಿವನ ಬಳಿ ಹೋಗುತ್ತಾನೆ, ಆವಾಗ ಶಿವನು ಶನಿಯ ಶಕ್ತಿ ಬಗ್ಗೆ ಹೇಳುತ್ತಾನೆ, ನಂತರ ಸೂರ್ಯನನ್ನು ನೆರಳಿನ ಹಿಡಿತದಿಂದ ಮುಕ್ತಗೊಳಿಸುತ್ತಾನೆ. ಹೀಗಾಗಿ ಶನಿಯ ಕೋಪಕ್ಕೆ ತಂದೆಯಾದ ಸೂರ್ಯನೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಮೇಲೆ ಶನಿಯ ವಕ್ರದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications