Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯ ಮೇಲೆ ಶಿವರಾತ್ರಿಯ ಬಳಿಕ ಶನಿ ದೃಷ್ಟಿ.! ಯಾವ ರಾಶಿಯವರು ಜಾಗೃತೆ ವಹಿಸಬೇಕು.?
ಮಾರ್ಚ್ 8ರಂದು ಭಾರತದಾದ್ಯಂತ ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ. ಈ ವಿಶೇಷ ಹಬ್ಬದಂದು ಶಿವನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಭಗವಾನ್ ಶಿವ ಈ ಮಹಾ ಶಿವರಾತ್ರಿಯಂದು ತಾಂಡವ ನೃತ್ಯವನ್ನು ಮಾಡುತ್ತಾನೆಂದು ನಂಬಲಾಗಿದೆ. ಈ ವಾರ ನಕ್ಷತ್ರಗಳು ನಿಮ್ಮ ಪರವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ ಜೊತೆಗೆ ಯಾವ ರಾಶಿಗೆ ಮಹಾಶಿವರಾತ್ರಿಯ ನಂತರ ಶನಿ ದೇವನ ದೃಷ್ಟಿ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳಿ.
ನವಗ್ರಹಗಳಲ್ಲಿ ಒಬ್ಬರ ಕರ್ಮಫಲವನ್ನು ದಯಪಾಲಿಸುವ ಶುಭಗ್ರಹ ಶನಿ. ಈ ಶನಿಯು ಪ್ರತಿ 2 1/2 ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಶನಿಯು ಪ್ರಸ್ತುತ ತನ್ನ ಮೂಲ ರಾಶಿಯಾದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಹಾಗಾದರೆ ಶಿವರಾತ್ರಿಯ ಬಳಿಕ ಶನಿ ದೃಷ್ಟಿ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಯಾವ ರಾಶಿಯ ಜನರು ಜಾಗರೂಕರಾಗಬೇಕು ಎಂಬುದನ್ನು ನಾವಿಂದು ನೋಡೋಣ.

ಕರ್ಕ ರಾಶಿ:
ಶನಿ ದೇವರ ದೃಷ್ಟಿಯು ಕರ್ಕ ರಾಶಿಯವರ ಮೇಲೆ ಬೀಳುವುದರಿಂದ, ಈ ರಾಶಿಯ ಜನರು ಅನೇಕ ತೊಂದರೆಗಳನ್ನು ಮತ್ತು ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ. ಉದ್ಯೋಗಿಗಳು ಕಚೇರಿಯಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆಗಳಿಂದ ಹಿಡಿದು ಆರ್ಥಿಕ ನಷ್ಟದಂತಹ ಸಮಸ್ಯೆ ಎದುರಾಗಬಹುದಂತೆ. ಮುಂದಿನ 10 ತಿಂಗಳ ಕಾಲ ಅತೀ ದೊಡ್ಡ ವ್ಯವಹಾರಗಳ ಮಾಡುವಾಗ ಎಚ್ಚರಿಕೆಯಿಂದ ಇರುವುದು ಅತೀ ಮುಖ್ಯವಾಗಿದೆ. ಜೊತೆಗೆ ಕರ್ಕ ರಾಶಿತ ಜನರು ತಾಳ್ಮೆ ಬೆಳೆಸಿಕೊಳ್ಳುವುದು ಉತ್ತಮ.
ವೃಶ್ಚಿಕ ರಾಶಿ:
ಶನಿಯ ತೀವ್ರತರವಾದ ದೃಷ್ಟಿ ಬಿದ್ದಿರುವುದು ವೃಶ್ಚಿಕ ರಾಶಿಯವರ ಮೇಲೆ. ಈ ರಾಶಿಯವರು ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ನೀವು ಹಣದ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತೀರಿ. ಮುಂದಿನ 10 ತಿಂಗಳುಗಳು ಹಣದ ವ್ಯವಹಾರದಲ್ಲಿ ಅಡೆತಡೆ, ಖರ್ಚು ಹೆಚ್ಚಾಗುವುದು ಆದಾಯಕ್ಕಿಂತಲು ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇರಲಿದೆ. ಆದರೆ ಇವರಿಗೆ ಶನಿ ದೇವರಿಂದ ಅಡ್ಡಪರಿಣಾಮದ ಜೊತೆಗೆ ಒಂದಿಷ್ಟು ಒಳಿತಾಗುವ ಸಂಭವವೂ ಇದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಶನಿಯ ಪ್ರವೇಶ ಕೊನೆಯ ಹಂತವಾಗಿದ್ದರೂ, ಇದರಿಂದ ಪರಿಣಾಮ ಎದುರಿಸಬೇಕಾಗುತ್ತದೆ. ಇವರಲ್ಲಿ ಹೆಚ್ಚಿನ ಒತ್ತಡ, ಕುಟುಂಬದಲ್ಲಿ ಒತ್ತಡ, ನೆಮ್ಮದಿ ಇಲ್ಲದಿರುವುದು, ದೂರದ ಪ್ರಯಾಣಗಳು, ಆರೋಗ್ಯದಲ್ಲಿ ಆಗಾಗ ಸಮಸ್ಯೆ ಎದುರಾಗಬಹುದು. ಇದೆಲ್ಲಾ ಶನಿ ತನ್ನ ಸ್ಥಾನಪಲ್ಲಟದ ಪರಿಣಾಮವಾಗಿರುತ್ತದೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಏಳೂವರೆ ಶನಿಯ ಎರಡನೇ ಘಟ್ಟ. ಹಾಗೆಯೇ ಶನಿಯು ಮೊದಲನೆಯ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಪರಿಣಾಮವಾಗಿ, ಈ ರಾಶಿಯವರು ನೋವು ಮತ್ತು ಬೇಸರಿಕೆ ಹೆಚ್ಚಾಗುತ್ತದೆ. ತೀವ್ರ ತಳಮಳ, ಗೊಂದಲದ ಪರಿಸ್ಥಿತಿಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಗಮನಕೊಡದ ಸ್ಥಿತಿ ಇದಾಗಿರಲಿದೆ. ಮುಂದಿನ 10 ತಿಂಗಳಲ್ಲಿ ಸಣ್ಣ ಪುಟ್ಟ ವಿವಾದಗಳು, ಖರ್ಚು ಹೆಚ್ಚಾಗುವುದು ಸಂಭವಿಸಬಹುದು. ಹೀಗಾಗಿ ಹೆಚ್ಚು ಜಾಗೃತೆ ವಹಿಸಿ.
ಮೀನ ರಾಶಿ:
ಮೀನ ರಾಶಿಯವರಿಗೆ ಶನಿಯಿಂದ ವಿವಿಧ ರೀತಿಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ದಾಂಪತ್ಯದಲ್ಲಿ ಹಲವು ರೀತಿಯ ವಿರಸಗಳು, ಹೊಸ ಉದ್ಯಮ, ಕಟ್ಟಡ, ವಾಹನ ಖರೀದಿಸುವ ಮನಸ್ಸಿದ್ದರೆ ಅಲ್ಲಿ ಅಡೆತಡೆಯ ಸಂಭವ ಹೀಗೆ ಹೊಸ ಕಾರ್ಯಗಳಿಗೆ ಶನಿ ದೇವರ ಅವಕೃಪೆ ಕಾಣಬಹುದು. ಆದರೆ ಇದರಲ್ಲಿ ಹೆಚ್ಚಿನ ಪರಿಣಾಮ ಕಂಡುಬರುವುದಿಲ್ಲ. ಆದ್ದರಿಂದ ಮುಂದಿನ 10 ತಿಂಗಳ ಕಾಲ ಮೀನ ರಾಶಿಯವರು ಬಹಳ ಜಾಣನಡೆ ಇಡಬೇಕಿದೆ. ಅವಸರದ ನಿರ್ಧಾರ ತೆಗೆದುಕೊಳ್ಳದೆ, ಯಾವಾಗಲೂ ಹತ್ತಾರು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಬಹಳ ಮುಖ್ಯವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











