Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ.7ಕ್ಕೆ ವರ್ಷದ ಮೊದಲ ಏಕಾದಶಿ: ಕಷ್ಟಗಳ ನಿವಾರಣೆಗೆ ಈ ಪರಿಹಾರ ಒಳ್ಳೆಯದು
2024ರ ಮೊದಲ ಏಕಾದಶಿ ಸಫಲಾ ಏಕಾದಶಿ. ಸಫಲಾ ಏಕಾದಶಿಯನ್ನು ಜನವರಿ 7ರಂದು ಆಚರಿಸಲಾಗುವುದು. ವರ್ಷದ ಮೊದಲ ಏಕಾದಶಿಯಂದು ಕೆಲವು ಪರಿಹಾರ ಮಾಡಿದರೆ ನಿಮ್ಮ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು. ಯಾವ ಸಮಸ್ಯೆಗೆ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಸಫಲ ಏಕಾದಶಿ
ದಿನಾಂಕ: ಜನವರಿ 7
ಏಕಾದಶಿ ತಿಥಿ ಆರಂಭ - ಜನವರಿ 06, 2024 ಮಧ್ಯರಾತ್ರಿ 12:41ರಿಂದ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ: ಜನವರಿ 7 ಬೆಳಗ್ಗೆ 12:46ಕ್ಕೆ
ಪಾರಣ ಸಮಯ: ಜನವರಿ 8 ಬೆಳಗ್ಗೆ 07:09ರಿಂದ 09:03ರವರೆಗೆ

ಈ ದಿನ ನಿಮ್ಮ ಸಮಸ್ಯೆಗಳಿಗೆ ಈ ಪರಿಹಾರ ಮಾಡಿ:
ಭಗವಾನ್ ವಿಷ್ಣುವನ್ನು ಪೂಜಿಸಿ
ಈ ದಿನ ಉಪವಾಸವಿದ್ದು ಶ್ರೀವಿಷ್ಣುವನ್ನು ಪೂಜಿಸಬೇಕು. ಉಪವಾಸವಿದ್ದು ಶ್ರೀ ವಿಷ್ಣುವನ್ನು ಆರಾಧಿಸುವುದರಿಂದ ಬಯಸಿದ್ದು ನೆರವೇರುವುದು ಎಂದು ಹೇಳಲಾಗುವುದು. ದೇವರಿಗೆ ಹಳದಿ ಬಣ್ಣದ ಹೂ, ಹಣ್ಣುಗಳು, ನೈವೇದ್ಯ ಅರ್ಪಿಸಿ ಪೂಜಿಸಿ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದೆ ಇರುವವರು ಹಾಲು, ಹಣ್ಣುಗಳನ್ನು ತೆಗೆದುಕೊಳ್ಳಬಹುದು.
ತುಳಸಿಯನ್ನು ಪೂಜಿಸಿ
ಸಫಲ ಏಕಾದಶಿಯಂದು ತುಳಸಿ ಗಿಡಕ್ಕೂ ಪೂಜೆಯನ್ನು ಸಲ್ಲಿಸಿ. ಏಕೆಂದರೆ ತುಳಸಿ ಶ್ರೀ ಹರಿಗೆ ಬಹಳ ಪ್ರಿಯಳು. ಶ್ರೀವಿಷ್ಣುವಿಗೆ ಅರ್ಪಿಸುವ ನೈವೇದ್ಯದಲ್ಲಿ ತುಳಸಿ ಹಾಕಲ್ಲ ಎಂದರೆ ಶ್ರೀವಿಷ್ಣು ಸ್ವೀಕರಿಸುವುದೇ ಇಲ್ಲ. ಈ ದಿನ ತುಳಸಿಗೂ ವಿಶೇಷ ಪೂಜೆ ಸಲ್ಲಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.
ಕೆಲಸದಲ್ಲಿನ ತೊಂದರೆ ನಿವಾರಣೆಗೆ ನಾರಾಯಣ ಕವಚ ಪಠಿಸಿ
ನಿಮ್ಮ ಕೆಲಸದಲ್ಲಿ ನೀವು ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಶುಕ್ರವಾರದಂದು, ನಿಮ್ಮ ಬಲಗೈಯಲ್ಲಿ ನೀರು ಮತ್ತು ಹಳದಿ ಹೂವುಗಳನ್ನು ತೆಗೆದುಕೊಂಡು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿ. ಈ ಸಮಯದಲ್ಲಿ, ತುಪ್ಪದ ದೀಪವನ್ನು ಬೆಳಗಿಸಿ ಮತ್ತು ನಿಗದಿತ ರೀತಿಯಲ್ಲಿ ನಾರಾಯಣ ಕವಚವನ್ನು ಪಠಿಸಿ. ಈ ಪರಿಹಾರವನ್ನು 11 ದಿನಗಳ ಕಾಲ ನಿರಂತರವಾಗಿ ಮಾಡಿ. ಇದರಿಂದ ನಿಮ್ಮ ಕೆಲಸದಲ್ಲಿ ಬರುವ ಅಡೆತಡೆಗಳು ದೂರಾಗುವುದು.
ಆರ್ಥಿಕ ಸಮಸ್ಯೆಯಿಂದ ಹೊರಬರಲು
ನೀವು ಆಗಾಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಸಫಲ ಏಕಾದಶಿಯ ದಿನದಂದು ನಿಮ್ಮ ಶಕ್ತಿಗೆ ಅನುಸಾರ ಅಗತ್ಯವಿರುವವರಿಗೆ ದಾನ ಮಾಡಿ. ಇದರಿಂದ ನೀವು ಪ್ರಯೋಜನ ಪಡೆಯಬಹುದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆಯಬಹುದು.
ಮನಸ್ಸಿನ ನೆಮ್ಮದಿಗೆ
ಅನಾವಶ್ಯಕ ವಾದ ವಿವಾದಗಳಿಗೆ ಸಿಲು ಮನಸ್ಸಿನ ನೆಮ್ಮದಿ ದೂರಾಗಿದ್ದರೆ ಏಕಾದಶಿಯ ದಿನದಂದು ಆಲದ ಮರವನ್ನು ಕ್ರಮಬದ್ಧವಾಗಿ ಪೂಜಿಸಿ. ನೀರಿಗೆ ಅರಿಶಿನ ಹಾಕಿ ಆ ನೀರನ್ನು ಆಲದ ಮರಕ್ಕೆ ಅರ್ಪಿಸಿ7 ಬಾರಿ ಪ್ರದಕ್ಷಿಣೆ ಹಾಕಿ. ಇದರಿಂದ ನೀವು ಮಾನಸಿಕ ನೆಮ್ಮದಿ ಪಡೆಯಬಹುದು.
ವೈವಾಹಿಕ ಜೀವನದಲ್ಲಿನ ಸಮಸ್ಯೆ ದೂರಾಗಲು
ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸಫಲ ಏಕಾದಶಿಯ ದಿನದಂದು ವಿಷ್ಣುವಿಗೆ ಹಳದಿ ಸಿಹಿ ತಿಂಡಿಗಳನ್ನು ಅರ್ಪಿಸಿ, ಪೂಜಿಸಿ. ಇದರಿಂದ ನೀವು ಲಾಭ ಪಡೆಯಬಹುದು, ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ವಿಷ್ಣು ಮೂಲ ಮಂತ್ರ
ಓಂ ನಮೋ ನಾರಾಯಣಾಯ
ನಾನು ನಿನಗೆ ನಮಸ್ಕರಿಸುತ್ತೇನೆ ಓ ನಾರಾಯಣ ದೇವರೇ ಮಹಾವಿಷ್ಣುವಿಗೆ ಸಮರ್ಪಿಸಲಾದ ಮಂತ್ರ ಇದಾಗಿದೆ. ಇದು ಹೆಚ್ಚು ಶಕ್ತಿಯುತವಾದ ಮಂತ್ರವಾಗಿದೆ.
ವಿಷ್ಣು ಭಗವತೇ ವಾಸುದೇವ ಮಂತ್ರ
ಓಂ ನಮೋ ಭಗವತೇ ವಾಸುದೇವಾಯ ವಿ
ಶ್ವವನ್ನು ಕಾಪಾಡುವ ಭಗವಂತನೇ ನಾನು ನಿನಗೆ ವಂದಿಸುತ್ತೇನೆ.
ವಿಷ್ಣು ಗಾಯತ್ರಿ ಮಂತ್ರ
ಓಂ ಶ್ರೀ ವೈಷ್ಣವೇ ಚ ವಿದಾಮಹೇ ವಾಸುದೇವಾಯ ಧೀಮಹಿ ತನ್ನೊ ವಿಷ್ಣು ಪ್ರಚೋದಯಾತ್
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications