Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಫಲಾ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ತಲೆಸ್ನಾನ ಮಾಡಬಾರದು
ವರ್ಷದ ಮೊದಲ ಏಕಾದಶಿ ಸಫಲಾ ಏಕಾದಶಿಯನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಸಫಲಾ ಏಕಾದಶಿಯಂದು ಉಪವಾಸದ ಜೊತೆಗೆ ಕೆಲವು ವ್ರತ ನಿಯಮಗಳನ್ನು ಪಾಲಿಸಿದರೆ ವಿಷ್ಣು ಕೃಪೆಯಿಂದ ನೀವು ಬಯಸಿದ್ದು ನೆರವೇರುವುದು. ಸಫಲಾ ಏಕಾದಶಿಯಂದು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬ್ರಹ್ಮಚರ್ಯೆ ಪಾಲಿಸಬೇಕು: ಏಕಾದಶಿಯ ದಿನದಂದು ಸದಾ ವಿಷ್ಣುವಿನ ಸ್ಮರಣೆಯಲ್ಲಿರಬೇಕು. ಆದ್ದರಿಂದ ಈ ದಿನ ಬ್ರಹ್ಮಚರ್ಯೆ ನಿಯಮ ಪಾಲಿಸಬೇಕು, ದಂಪತಿ ವಿಷ್ಣುವಿನ ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು.
ಯಾರಿಗೂ ನೋವುಂಟು ಮಾಡಬೇಡಿ: ಈ ದಿನ ನಿಮ್ಮ ಮಾತುಗಳಿಂದ, ನಡವಳಿಕೆಯಿಂದ ಯಾರನ್ನೂ ದೂರ ಮಾಡಬೇಡಿ. ಬೇರೆಯವರಿಗೆ ನೋವುಂಟು ಮಾಡಿದರೆ ಪೂಜೆ ಫಲ ಸಿಗುವುದಿಲ್ಲ.
ನೀರು ಕುಡಿಯಬೇಡಿ: ಈ ದಿನ ಸಂಪೂರ್ಣ ಉಪವಾಸವಿದ್ದರೆ ಒಳ್ಳೆಯದು, ಕಠಿಣ ಉಪವಾಸ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಹಾಲು , ಹಣ್ಣು ಸೇವನೆ ಮಾಡಿ.
ಕೋಪಗೊಳ್ಳಬೇಡಿ: ಈ ದಿನ ನೀವು ಕೋಪಗೊಳ್ಳಬೇಡಿ, ನೀವು ಕೋಪಗೊಂಡರೆ ವ್ರತ ಪಾಲಿಸಿದರೂ ಅದರ ಫಲ ಸಂಪೂರ್ಣ ಫಲ ಸಿಗುವುದಿಲ್ಲ.
ಹಿಂಸೆ ಮಾಡಬಾರದು: ಈ ದಿನ ಮನುಷ್ಯರಿಗೆ ಆಗಲಿ, ಪ್ರಾಣಿಗಳಾಗಲಿ ಹಿಂಸೆ ಮಾಡಬೇಡಿ.
ಏಕಾದಶಿಯ ದಿನದಂದು ಏನು ಮಾಡಬೇಕು?
* ಈ ದಿನ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು, ನಂತರ ಮಡಿ ಬಟ್ಟೆ ಧರಿಸಿ
* ಈ ದಿನ ಮಾಂಸ, ಮೀನು, ಬೆಳ್ಳುಳ್ಳಿ, ಮಿಟ್ಟೆ, ಮದ್ಯ ಮುಂತಾದ ತಾಮಸಿಕ ಆಹಾರ ಸೇವಿಸಬೇಡಿ.
* ಈ ದಿನ ದಾನ್ಯಗಳು, ಕಾಳುಗಳನ್ನು ಸೇವಿಸುವಂತಿಲ್ಲ.
* ಏಕಾದಶಿ ದಿನ ಬಳಸುವ ಪ್ರಸಾದಕ್ಕೆ ನೀವು ಎಣ್ಣೆ ಹಾಕಬಾರದು. ತುಪ್ಪ ಬಳಸಿ ಪ್ರಸಾದ ತಯಾರಿಸಬೇಕು.
* ಏಕಾದಶಿಯಂದು ತಲೆಸ್ನಾನ ಮಾಡಬಾರದು, ದಶಮಿಯಂದೇ ತಲೆ ಸ್ನಾನ ಮಾಡಿ.
* ವಿಷ್ಣುವಿನ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
