Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮೇ 26ಕ್ಕೆ ಸಂಕಷ್ಟಿ ಚತುರ್ಥಿ: ಕಷ್ಟ ನಿವಾರಣೆಗೆ ಪೂಜಾ ವಿಧಾನ, ಸಂತಾನ ಭಾಗ್ಯಕ್ಕಾಗಿ ಈ ಮಂತ್ರ ಪಠಿಸಿ
ಪ್ರತಿಮಾಸ ಸಂಕಷ್ಟಿ ಚತುರ್ಥಿ ಆಚರಿಸಲಾಗುವುದು. ಸಂಕಷ್ಟಿ ಚತುರ್ಥಿ ಶ್ರೀ ಗಣೇಶ, ಲಂಭೋದರನಿಗೆ ಮೀಸಲಾದ ದಿನ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಮಾಡುವುದಾದರೂ ಶ್ರೀ ಗಣೇಶನಿಗೆ ಮೊದಲು ಪೂಜೆಯನ್ನು ಮಾಡಬೇಕು, ನಂತರ ಉಳಿದ ದೇವರುಗಳಿಗೆ ಮಾಡಲಾಗುವುದು.
ನಾವು ಮಾಡುವ ಪೂಜಾ ಕಾರ್ಯಗಳಾಗಲಿ, ನಾವು ಮಾಡುವ ಶುಭ ಕಾರ್ಯಗಳಾಗಲಿ ಯಾವುದೇ ವಿಘ್ನವಿಲ್ಲದೆ ನೆರವೇರಲು ಶ್ರೀಗಣೇಶನ ಆಶೀರ್ವಾದ ಕೋರುತ್ತೇವೆ.

ಇನ್ನು ಬದುಕಿನಲ್ಲಿರುವ ಸಂಕಷ್ಟಗಳನ್ನು ದೂರ ಮಾಡಲು ನಾವು ಗಣೇಶನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಎಂಬುವುದು, ಅವನ ಭಕ್ತರ ಅಚಲ ನಂಬಿಕೆ. ಶ್ರೀಗಣೇಶನನ್ನು ವಾರದಲ್ಲಿ ಬುಧವಾರದಂದು ಉಪವಾಸವಿದ್ದು ಗಣಪತಿಯನ್ನು ಆರಾಧನೆ ಮಾಡಲಾಗುವುದು, ಇನ್ನು ತಿಂಗಳಿನಲ್ಲಿ ಬರುವ ವಿನಾಯಕ ಸಂಕಷ್ಟಿ ಚತುರ್ಥಿ ಗಣೇಶನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವಾಗಿದೆ. ಈ ದಿನದಲ್ಲಿ ಪೂಜೆ ಮಾಡಿದರೆ ವಿಶೇಷ ಫಲ ಸಿಗಲಿದೆ ಎಂದು ಹೇಳಲಾಗುವುದು.
ಮೇ 26ಕ್ಕೆ ಏಕದಂತ ಸಂಕಷ್ಟಿ ಚತುರ್ಥಿ
ಈ ಮೇ 26ಕ್ಕೆ ಸಂಕಷ್ಟಿ.
ಚತುರ್ಥಿ ತಿಥಿ ಪ್ರಾರಂಭ ಸಂಜೆ 06:06ರಿಂದ ಪ್ರಾರಂಭ
ಚತುರ್ಥಿ ತಿಥಿ ಮುಕ್ತಾಯ: ಮೇ 27 ಸಂಜೆ 04:53ರವರೆಗೆ
ಚಂದ್ರೋದಯ ಸಮಯ: ರಾತ್ರಿ 10:12ರವರೆಗೆ
ಕುಟುಂಬದ ಶ್ರೇಯೋಭುವೃದ್ಧಿಗಾಗಿ ಸಂಕಷ್ಟಿ ಚತುರ್ಥಿ ಆಚರಿಸಲಾಗುವುದು
ಈ ಸಂಕಷ್ಟಿಯನ್ನು ಆಚರಣೆ ಮಾಡುವುದರಿಂದ ಕುಟುಂಬಕ್ಕೆ ತುಂಬಾನೇ ಒಳಿತಾಗುವುದು. ಮನೆಯಲ್ಲಿ ಇರುವ ಕಷ್ಟಗಳು ದೂರಾಗುವುದು, ಮಾನಸಿಕ ನೆಮ್ಮದಿ ಇರಲಿದೆ, ಆರ್ಥಿಕ ಸಮಸ್ಯೆಗಳು ದೂರಾಗಲಿದೆ, ಆರೋಗ್ಯ ಚೆನ್ನಾಗಿರಲಿದೆ. ಸಂತಾನ ಭಾಗ್ಯ ದೊರೆಯಲಿದೆ. ಹೀಗಾಗಿ ಸಕಲ ಕಷ್ಟಗಳು ದೂರಮಾಡು, ನಮ್ಮ ಕೆಲಸಗಳು ಸುಲಭವಾಗಿ ನೆರವೇರುವಂತೆ ಮಾಡು ಎಂದು ಪ್ರಾರ್ಥಿಸಿದರೆ ಶ್ರೀ ಗಣೇಶ ನಮ್ಮೆಲ್ಲಾ ಸಮಸ್ಯೆ ನಿವಾರಿಸುತ್ತಾನೆ ಎಂಬ ನಂಬಿಕೆ.
ಸಂತಾನ ಭಾಗ್ಯಕ್ಕಾಗಿ ದಂಪತಿ ಜೊತೆಗೂಡಿ ಪೂಜೆಯನ್ನು ಮಾಡಬೇಕು?
ಮಗುವನ್ನು ಬಯಸಿರುವ ದಂಪತಿ ಸಂಕಷ್ಟಿಯಂದು ಉಪವಾಸವಿದ್ದು ಶ್ರೀ ಗಣೇಶನ ಆರಾಧನೆ ಮಾಡಬೇಕು, ಹೀಗೆ ಆರಾಧಿಸುವುದರಿಂದ ಸಂತಾನಭಾಗ್ಯ ದೊರೆಯಲಿದೆ.
ಸಂತಾನ ಭಾಗ್ಯಕ್ಕಾಗಿ ಈ ಮಂತ್ರಗಳನ್ನು ಪಠಿಸಿ
ನಮೋಽಸ್ತು ಗಣನಾಥಾಯ ಸಿದ್ಧಿಬುದ್ಧಿಯುತಾಯ ಚ | ಸರ್ವಪ್ರದಾಯ ದೇವಾಯ ಪುತ್ರವೃದ್ಧಿಪ್ರದಾಯ ಚ || ೧ ||
ಗುರೂದರಾಯ ಗುರವೇ ಗೋಪ್ತ್ರೇ ಗುಹ್ಯಾಸಿತಾಯ ತೇ | ಗೋಪ್ಯಾಯ ಗೋಪಿತಾಶೇಷಭುವನಾಯ ಚಿದಾತ್ಮನೇ || ೨ ||
ವಿಶ್ವಮೂಲಾಯ ಭವ್ಯಾಯ ವಿಶ್ವಸೃಷ್ಟಿಕರಾಯ ತೇ | ನಮೋ ನಮಸ್ತೇ ಸತ್ಯಾಯ ಸತ್ಯಪೂರ್ಣಾಯ ಶುಂಡಿನೇ || ೩ ||
ಏಕದಂತಾಯ ಶುದ್ಧಾಯ ಸುಮುಖಾಯ ನಮೋ ನಮಃ | ಪ್ರಪನ್ನಜನಪಾಲಾಯ ಪ್ರಣತಾರ್ತಿವಿನಾಶಿನೇ || ೪ ||
ತೇ ಸರ್ವೇ ತವ ಪೂಜಾರ್ಥಂ ನಿರತಾಃ ಸ್ಯುರ್ವರೋಮತಃ | ಪುತ್ರಪ್ರದಮಿದಂ ಸ್ತೋತ್ರಂ ಸರ್ವಸಿದ್ಧಿಪ್ರದಾಯಕಮ್ || ೬ || ಇತಿ ಸಂತಾನ ಗಣಪತಿ ಸ್ತೋತ್ರಂ ಸಂಪೂರ್ಣಮ್ ||
ಶರಣಂ ಭವ ದೇವೇಶ ಸಂತತಿಂ ಸುದೃಢಾ ಕುರು | ಭವಿಷ್ಯಂತಿ ಚ ಯೇ ಪುತ್ರಾ ಮತ್ಕುಲೇ ಗಣನಾಯಕ || ೫ ||
ಗರಿಕೆಯನ್ನು ಅರ್ಪಿಸಿ
ಶ್ರೀ ಗಣೇಶನ ಪೂಜೆಗೆ ನೀವು ಬರಿ ಗರಿಕೆ ಅರ್ಪಿಸಿದರೆ ಸಾಕು. ಯಾವುದೇ ವಸ್ತುಗಳನ್ನು, ಹಣ್ಣು-ಹಂಪಲುಗಳನ್ನು ಅರ್ಪಿಸಿ ಗರಿಕೆಯನ್ನು ಅರ್ಪಿಸದಿದ್ದರೆ ಗಣೇಶನ ಪೂಜೆ ಸಂಪೂರ್ಣವಾಗಲ್ಲ, ಆದ್ದರಿಂದ ಗಣೇಶನಿಗೆ ಗರಿಕೆಯನ್ನು ಈ ದಿನ ತಪ್ಪದೇ ಅರ್ಪಿಸಿ.
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
