Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಫೆಬ್ರವರಿ 24, ಸೋಮವಾರದ ದಿನ ಬಂದಿದೆ ವಿಜಯ ಏಕಾದಶಿ : ಈ ದಿನ ಏನು ಮಾಡಿದರೆ ತುಂಬಾ ಒಳ್ಳೆಯದು?
ಫೆಬ್ರವರಿ 24ಕ್ಕೆ ವಿಜಯ ಏಕಾದಶಿ, ಈ ಏಕಾದಶಿಯನ್ನು ಫಾಲ್ಗುಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುವುದು. ಈ ವಿಜಯದ ಏಕಾದಶಿ ಆಚರಣೆ ಮಾಡುವುದರಿಂದ ನಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ ಎಂದು ಹೇಳಲಾಗುವುದು.
ಈ ಏಕಾದಶಿಯನ್ನು ಉದಯ ತಿಥಿ ಪ್ರಕಾರ ಫೆಬ್ರವರಿ 24ರಂದು ಆಚರಣೆ ಮಾಡಲಾಗುತ್ತಿದೆ. ಇನ್ನು ಪಾರಣ ಸಮಯ ಫೆಬ್ರವರಿ 25 ಬೆಳಗ್ಗೆ 6:49ರಿಂದ 09:07ರವರೆಗೆ ಇದೆ.
ವಿಜಯ ಏಕಾದಶಿ ಹೆಸರೇ ಸೂಚಿಸುವಂತೆ ಈ ಏಕಾದಶಿ ಆಚರಣೆ ಮಾಡುವುದರಿಂದನಾವು ಏನು ಅಂದುಕೊಂಡಿದ್ದೆವೋ ಅದಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸು ಬಯಸಿದರೆ, ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಯಶಸ್ಸು ಬಯಸುತ್ತಾರೆ, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಗುರಿ ಇರುತ್ತದೆ, ಆ ಗುರಿ ನೆರವೇರಲು ವಿಜಯ ಏಕಾದಶಿ ಆಚರಣೆ ಮಾಡಲಾಗುವುದು.

ಯಾರು ಭಕ್ತಿಯಿಂದ ಏಕಾದಶಿ ಆಚರಿಸುತ್ತಾರೋ ಅವರೆಲ್ಲಾ ಕನಸುಗಳು ಸಾಕಾರವಾಗಲು ಶ್ರೀ ವಿಷ್ಣುವಿನ ಕೃಪೆ ದೊರೆಯಲಿದೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ನಮಗಿರುವ ಪ್ರಮುಖ ಸವಾಲುಗಳು ದೂರಾಗಲಿದೆ, ಜಯ ನಮ್ಮದಾಗಲಿದೆ ಎಂದು ಹೇಳಲಾಗುವುದು.
ವಿಜಯ ಏಕಾದಶಿಯಂದು ಈ ಪರಿಹಾರ ಮಾಡಿದರೆ ಒಳ್ಳೆಯದು:
ವಿಜಯ ಏಕಾದಶಿಯನ್ನು ಆರ್ಥಿಕ ಸಮಸ್ಯೆ ನಿವಾರಣೆಗೆ ಪರಿಹಾರ ಕ್ರಮ
ಈ ದಿನ ನೀವು ಶ್ರೀವಿಷ್ಣುವಿಗೆ ಕೊಬ್ಬರಿ ಅರ್ಪಿಸಿ, ನಂತರ ಆ ಕೊಬ್ಬರಿಗೆ ಬೆಲ್ಲ ಸೇರಿಸಿ ಹಸುವಿಗೆ ನೀಡಿ, ವಿಜಯ ಏಕಾದಶಿ ದಿನ ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯುವುದು ಎಂಬ ನಂಬಿಕೆ ಭಕ್ತರಲ್ಲಿದೆ.
ಈ ದಿನ ನೀವು ಏನಾದರೂ ಸಂಕಲ್ಪ ತೆಗೆದುಕೊಂಡು 'ಓಂ ನಮೋ ಭಗವತೇ ನಾರಾಯಣಾಯ' ಎಂಬ ಮಂತ್ರವನ್ನು ನಿರಂತರವಾಗಿ ಪಠಿಸಿ, ಈ ಮಂತ್ರ 108 ಬಾರಿ ಪಠಿಸಿದರೆ ತುಂಬಾನೇ ಒಳ್ಳೆಯದು.
ಕೆಲಸ-ಕಾರ್ಯದಲ್ಲಿ ಯಶಸ್ಸು ದೊರೆಯಲು
ಇತ್ತೀಚಿನ ದಿನಗಳಲ್ಲಿ ಕೆಲಸ ಕಾರ್ಯದಲ್ಲಿ ತುಂಬಾನೇ ಅಡಚಣೆ ಉಂಟಾಗಿದ್ದರೆ ಈ ದಿನದಂದು ಸ್ನಾನ ಮಾಡಿ ಮಡಿಬಟ್ಟೆ ಧರಿಸಿ ಕಲಶವಿಟ್ಟು, ಶ್ರೀ ವಿಷ್ಣುವಿನ ಮಂತ್ರವನ್ನು ಹೇಳಿ ಪೂಜೆ ಸಲ್ಲಿಸಿ, ಇದರಿಂದ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.
ಈ ದಿನ ಮಾಡುವ ದಾನ ಧರ್ಮಕ್ಕೂ ತುಂಬಾನೇ ಮಹತ್ವವಿದೆ: ಏಕಾದಶಿಯಂದು ಬಡವರಿಗೆ ದಾನ ಮಾಡಬೇಕು. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ದಾನ ಮಾಡಿ.
ಮದುವೆ ಸಂಬಂಧ ಕೂಡಿ ಬರಲು
ಕೆಲವರಿಗೆ ಎಷ್ಟೇ ಸಂಬಂಧ ಬಂದಿದ್ದರೂ ಒಂದು ಸಂಬಂಧ ಕೂಡ ಬಂದಿರಲ್ಲ, ಅಂತವರು ಈ ಏಕಾದಶಿ ಆಚರಣೆ ಮಾಡುವುದರಿಂದ ಮದುವೆ ಸಂಬಂಧ ಕೂಡಿ ಬರಲಿದೆ. ಈ ದಿನ ಬಾಳೆಗಿಡಕ್ಕೆ ನೀರು ಹಾಕಿ, ಶ್ರೀ ವಿಷ್ಣುವಿನ ಪೂಜಿಸಿದರೆ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
