Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ವರ್ಷ ಮೊದಲ ಗ್ರಹಣ ಯಾವಾಗ? ಗ್ರಹಣ ದೋಷ ತಡೆಗಟ್ಟಲು ಈ ಜ್ಯೋತಿಷ್ಯ ಪರಿಹಾರ ಒಳ್ಳೆಯದು
ಗ್ರಹಣ ಎಂದರೆ ಜ್ಯೋತಿಷ್ಯದಲ್ಲಿ ಅದನ್ನು ಶುಭ ಎಂದು ಪರಿಗಣಿಸುವುದಿಲ್ಲ. 2024 ವರ್ಷ ಮೊದಲ ಚಂದ್ರಗ್ರಹಣ ಮಾರ್ಚ್ 25 ರಂದು ಸಂಭವಿಸಲಿದೆ. ಇದಾದ 15 ದಿನಗಳಲ್ಲಿ ಚೈತ್ರ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಜ್ಯೋತಿಷ್ಯದಲ್ಲಿ ಈ ಸಮಯದಲ್ಲಿ ರಾಹುವಿನ ಕೋಪವು ಭೂಮಿಯ ಮೇಲೆ ಹೆಚ್ಚಾಗುತ್ತದೆ, ಅದರ ಅಶುಭ ಪರಿಣಾಮಗಳು ಎಲ್ಲೆಡೆ ಕಂಡುಬರುತ್ತವೆ. ಒಂದು ವರ್ಷದಲ್ಲಿ ಸುಮಾರು 4 ಗ್ರಹ ಗ್ರಹಣಗಳು ಸಂಭವಿಸುತ್ತವೆ, ಅದರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಈ ಗ್ರಹಣದ ಸಮಯ, ಇದರಿಂದ ಅಶುಭ ಪರಿಣಾಮ ಉಂಟಾಗುವುದು, ಇದನ್ನು ತಪ್ಪಿಸಲು ಜನರು ಕೆಲ ಜನರು ಕೆಲವು ಜ್ಯೋತಿಷ್ಯ ಪರಿಹಾರ ಮಾಡುತ್ತಾರೆ.

ಗ್ರಹಣ ಸಮಯದಲ್ಲಿ ಚಂದ್ರಗ್ರಹಣ 9 ಗಂಟೆಗಳ ಮೊದಲು ಪ್ರಾರಂಭವಾಗುವುದು. ಸನಾತನ ಧರ್ಮದಲ್ಲಿ ಈ ಅವಧಿಯಲ್ಲಿ ಅನೇಕ ನಿಯಮಗಳನ್ನು ಪಾಲಿಸುವ ಸಂಪ್ರದಾಯವಿದೆ, ಇದರಿಂದ ಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಬಹುದು. ಗ್ರಹಣದ ಅಶುಭ ಪರಿಣಾಮಗಳು ಈ ವಸ್ತುಗಳ ಮೇಲೆ ಬೀಳದಂತೆ ಆಹಾರ ಪದಾರ್ಥಗಳಲ್ಲಿ ತುಳಸಿ ಎಲೆಗಳನ್ನು ಬಳಸುವುದು ಎಲ್ಲಾ ಮನೆಗಳಲ್ಲಿ ಆಗಾಗ್ಗೆ ಮಾಡುವ ಈ ಕಾರ್ಯಗಳಲ್ಲಿ ಒಂದಾಗಿದೆ. ಆದರೆ ಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು ತುಳಸಿಯನ್ನು ಹೊರತುಪಡಿಸಿ ಇನ್ನೂ ಅನೇಕ ವಸ್ತುಗಳನ್ನು ಬಳಸಬಹುದು ಗೊತ್ತಾ?
ತುಳಸಿಯ ಹೊರತಾಗಿ, ಗ್ರಹಣದ ಸಮಯದಲ್ಲಿ ಈ ವಸ್ತುಗಳನ್ನು ಸಹ ಬಳಸಬಹುದು
ಗರಿಕೆ ಹುಲ್ಲು ಬಳಸಲಾಗುವುದು
ಗ್ರಹಣದ ಸಮಯದಲ್ಲಿ ಆಹಾರದಲ್ಲಿ ಗರಿಕೆ ಹುಲ್ಲು ಬಳಸಲಾಗುವುದು. ಗರಿಕೆ ಹುಲ್ಲು ಪೂಜೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಶ್ರೀ ಗಣೇಶನ ಆರಾಧನೆಯಲ್ಲಿ ಗರಿಕೆಗೆ ತುಂಬಾನೇ ಮಹತ್ವವಿದೆ. ಗ್ರಹಣದಲ್ಲಿ ಗರಿಕೆಯನ್ನು ನೀರು, ಆಹಾರ ಪದಾರ್ಥಗಳಿಗೆ ಹಾಕಲಾಗುವುದು. ಅಲ್ಲದೆ ದೇವರ ಫೋಟೋಗಳಿಗೆ ಗರಿಕೆಯನ್ನು ಇಡಲಾಗುವುದು. ಸೂರ್ಯಗ್ರಹಣದ ಕೆಟ್ಟ ಪ್ರಭಾವ ಆ ಸಮಯದಲ್ಲಿ ದೇವರಗಳ ಮೇಲೆ ಕೂಡ ಬೀಳುವುದು ಎಂದು ಹೇಳಲಾಗುವುದು. ಈ ದಿನ ತುಳಸಿ ಅಥವಾ ಗರಿಕೆ ಹಾಕದ ಆಹಾರ ತಿನ್ನಲು ಯೋಗ್ಯವಲ್ಲ ಎಂದು ಹೇಳಲಾಗುವುದು. ಇದು ಒಂದು ರೀತಿಯ ನಂಬಿಕೆ ಹೌದು, ಆದರೆ ಈ ಸಮಯದಲ್ಲಿ ವಾತಾವರಣದಲ್ಲಿ ಋಣಾತ್ಮಕ ಶಕ್ತಿ ಅಧಿಕವಿರುವುದು ಎಂದು ವಿಜ್ಞಾನ ಕೂಡ ಒಪ್ಪುತ್ತದೆ.
ಎಳ್ಳು ದಾನ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣ ಸಂಭವಿಸಿದಾಗ, ಅನೇಕ ಅಶುಭ ಶಕ್ತಿಗಳ ಚಟುವಟಿಕೆ ಹೆಚ್ಚಿರುತ್ತದೆ ಎಂದು ಹೇಳಲಾಗುವುದು.ಆದ್ದರಿಂದ ಅವುಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಜನರು ಈ ದಿನ ಗ್ರಹಣದ ನಂತರ ದಾನ ಮಾಡುತ್ತಾರೆ. ಇದರಿಂದ ಗ್ರಹಣ ದೋಷ ದೂರಾಗುವುದು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ರಾಹು ಮತ್ತು ಕೇತುಗಳನ್ನು ಶಾಂತಗೊಳಿಸಲು, ಎಳ್ಳು ಬೀಜಗಳು, ಎಳ್ಳೆಣ್ಣೆ, ಕಪ್ಪು ಬಟ್ಟೆಗಳನ್ನು ದಾನ ಮಾಡಲಾಗುವುದು. ಗ್ರಹಣ ಮುಗಿದ ನಂತರ, ಸ್ನಾನ ಮಾಡಿ ದೇವರ ಪೂಜೆಗಳನ್ನು ಮಾಡಿ, ನಂತರ ಎಳ್ಳೆಣ್ಣೆ, ಕಪ್ಪು ಎಳ್ಳು, ಪೂಜೆಯ ನಂತರ ಅದನ್ನು ಅಗತ್ಯವಿರುವವರಿಗೆ ದಾನ ಮಾಡಿ. ಎಳ್ಳನ್ನು ದಾನ ಮಾಡುವುದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ, ಇದು ರಾಹು-ಕೇತುಗಳನ್ನು ಶಾಂತವಾಗಿರಿಸುತ್ತದೆ ಮತ್ತು ವ್ಯಕ್ತಿಯು ಅನಗತ್ಯ ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ ಎಂದು ಹೇಳಲಾಗುವುದು. ಅಲ್ಲದೆ, ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ.
ಗಂಗಾಜಲವನ್ನು ಬಳಸಿ
ಸನಾತನ ಧರ್ಮದಲ್ಲಿ, ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ, ಆದ್ದರಿಂದ ಗ್ರಹಣ ಸಮಯದಲ್ಲಿ ಗಂಗಾಜಲವನ್ನು ಬಳಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದಲ್ಲಿ, ಗ್ರಹಣದ ನಂತರ ಗಂಗಾಜಲವನ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ದೈಹಿಕ ಮತ್ತು ಮಾನಸಿಕ ಶುದ್ಧಿಗಾಗಿ ಗ್ರಹಣದ ನಂತರ ಸ್ನಾನ ಮಾಡುವುದು ಬಹಳ ಮುಖ್ಯ ಎಂದು ಹೇಳಲಾಗುವುದು. ಈ ದಿನ ಗಂಗಾಜಲದಿಂದ ಮನೆಯನ್ನು ಶುದ್ಧೀಕರಿಸುತ್ತಾರೆ.
ಈ ರೀತಿಯೆಲ್ಲಾ ಮಾಡುವುದರಿಂದ ಗ್ರಹಣದ ಅಶುಭ ಫಲ ದೂರ ಮಾಡಲಾಗುವುದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











