Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮ ನವಮಿಯಂದು ಈ ಪವರ್ ಫುಲ್ ಮಂತ್ರ ಪಠಣೆ ಮಾಡಿದರೆ ಸಕಲ ಕಷ್ಟಗಳು ದೂರಾಗುವುದು
ಏಪ್ರಿಲ್ 17ಕ್ಕೆ ರಾಮ ನವಮಿ. ಆದರ್ಶ ಪುರುಷ ಹುಟ್ಟಿದ ದಿನಾಂಕವನ್ನು ರಾಮ ನವಮಿಯೆಂದು ಆಚರಿಸಲಾಗುವುದು. ಶ್ರೀರಾಮ ದೈವ ಪುರುಷ, ಶ್ರೀ ವಿಷ್ಣುವಿನ 8ನೇ ಅವತಾರವೆಂದು ಹೇಳಲಾಗುವುದು.
ರಾಮ ನವಮಿಯಂದು ದೇಶದ ಉದ್ದಗಲ ರಾಮನದ್ದೇ ಜಪ, ಅಯೋಧ್ಯೆಯಲ್ಲಿ ಈ ದಿನ ಇಡೀ ಅಯೋಧ್ಯೆಯೇ ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಈ ದಿನದಂದು ಹಳ್ಳಿಗಳಲ್ಲಿ, ಪಟ್ಟಣದ ಮೂಲೆ-ಮೂಲೆಗಳನ್ನು ರಾಮ ನವಮಿಯನ್ನು ಆಚರಿಸಲಾಗುವುದು.
ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಕಷ್ಟವೂ ನಿವಾರಣೆಯಾಗುವುದು, ಈ ದಿನ ಉಪವಾಸವಿದ್ದು ಶ್ರೀ ರಾಮ ಮಮತ್ರಗಳನ್ನು ಪಠಿಸಲಾಗುವುದ. ರಾಮ ನವಮಿಯಂದು ಈ ಮಂತ್ರ ಪಠಣೆ ಮಾಡಿದರೆ ಶ್ರೀರಾಮನ ಕೃಪೆಯಿಂದ ಸಕಲ ಅಡೆತಡೆ ದೂರಾಗುವುದು ನೋಡಿ:

ಶ್ರೀರಾಮ ಸ್ತೋತ್ರಂ
ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
ರಾಮ ಗಾಯತ್ರಿ ಮಂತ್ರ
"ಓಂ ದಶರಥಾಯ ವಿಧ್ಮಹೇ ಸೀತವಲ್ಲಭಾಯ ಧೀಮಾಹಿ, ತನ್ನೋ ರಾಮ ಪ್ರಚೋದಯಾತ್ " .
ರಾಮ ಧ್ಯಾನ ಮಂತ್ರ
"ಓಂ ಅಪಾದಮಪಹರ್ತರಾಮ ದತಾರಾಮ ಸರ್ವಸಂಪದಂ ಲೋಕಭಿರಾಮಂ ಶ್ರೀರಾಮಂ ಭುಯೋ-ಭುಯೋ ನಮಮ್ಯಾಹಂ"
"ಶ್ರೀ ರಾಮ ಜಯ ರಾಮ ಕೋದಂಡ ರಾಮ"
ಶ್ರೀ ರಾಮ ರಕ್ಷಾ ಸ್ತೋತ್ರ
ಶ್ರೀಗಣೇಶಾಯ ನಮಃ ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ |
ಬುಧಕೌಶಿಕಋಷಿಃ |
ಶ್ರೀಸೀತಾರಾಮಚಂದ್ರೋ ದೇವತಾ |
ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ |
ಶ್ರೀಮದ್ಧನುಮಾನ್ ಕೀಲಕಮ್ | ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ | ಅಥ ಧ್ಯಾನಮ್ |
ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ |
ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |
ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ |
ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ |
|| ಇತಿ ಧ್ಯಾನಮ್ |
-
ರಾಮ ರಕ್ಷಾ ಮಂತ್ರ ಪಠಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
- ರಾಮ ರಕ್ಷಾ ಸ್ತೋತ್ರ ಪಠಣೆ ಮಾಡುವುದರಿಂದ ಎಲ್ಲಾ ಕಷ್ಟಗಳಿಂದ ಶ್ರೀರಾಮ ರಕ್ಷಣೆ ಮಾಡುತ್ತಾನೆ ಎಂದು ನಂಬಲಾಗುವುದು
- ಪತಿ-ಪತ್ನಿ ನಡುವೆ ಕಲಹವಾಗುತ್ತಿದ್ದರೆ ಎಲ್ಲವೂ ದೂರಾಗಲಿದೆ
- ಋಣಾತ್ಮಕ ಶಕ್ತಿ ನಿಮಗೆ ಕೆಡಕು ಮಾಡಲು ಸಾಧ್ಯವಾಗಲ್ಲ
- ಅಪಘಾತ ತಪ್ಪಿಸುತ್ತದೆ
- ಗರ್ಭಿಣಿಯರು ಈ ಮಂತ್ರ ಪಠಣೆ ಮಾಡುವುದರಿಂದ ತಾಯಿ ಮಗುವಿಗೆ ಒಳ್ಳೆಯದು
- ಮಕ್ಕಳು ಈ ಮಂತ್ರ ಪಠಣೆ ಮಾಡುವುದರಿಂದ ಅವರ ಜ್ಞಾಪಕ ಶಕ್ತಿ ಉತ್ತಮವಾಗಿದು, ಉಚ್ಛಾರಣೆ ಸ್ಪಷ್ಟವಾಗುವುದು.
ಕಷ್ಟದಿಂದ ಮುಕ್ತಿ ಪಡೆಯಲು
ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶನಾಥಂ
ಕಾರುಣ್ಯರೂಪಂ ಕರುಣಾಕರಂ ತಂ
ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ
ಯಾವುದೋ ಅವ್ಯಕ್ತ ಭಯ ಕಾಡುತ್ತಿದೆ, ಕಷ್ಟಗಳು ಮೇಲಿಂದ ಮೇಲೆ ಬರುತ್ತಿದೆ ಎಂದಾದರೆ ಈ ಮಂತ್ರ ಪಠಣೆ ಮಾಡುವುದರಿಂದ ಅ ಕಷ್ಟಗಳನ್ನು ಎದುರಿಸುವ ಧೈರ್ಯ ಮಾಡಬೇಡಿ.
ವೃತ್ತಿ ಬದುಕಿನ ಯಶಸ್ವಿಗೆ
ಓಂ ರಾಮ ಓಂ ರಾಮ ಓಂ ರಾಮಾಯ
ಹ್ರೀಂ ರಾಮ ಹ್ರೀಂ ರಾಮ ಶ್ರೀಂ ರಾಮ ಶ್ರೀಂ ರಾಮ
ಕ್ಲೀಂ ರಾಮ ಕ್ಲೀಂ ರಾಮ ಫಟ್ ರಾಮ ಫಟ್ ರಾಮಾಯ ನಮಃ
ಶುಭ ಕಾರ್ಯ ನಡೆಯಲು
ಮಂಗಲ ಭವನ ಅಮಂಗಲಹಾರಿ
ದ್ರವಹು ಸೋ ದಶರಥ ಅಜೀರ ವಿಹಾರಿ
ಮನೆಯಲ್ಲಿ ಮದುವೆ ವಯಸ್ಸಿನ ಮಕ್ಕಳಿಗೆ ಮದುವೆಯಾಗಲು, ವಿವಾಹಿತ ದಂಪತಿಗೆ ಮಗುವಾಗಲು ಹೀಗೆ ಮನೆಯಲ್ಲಿ ಶುಭ ಕಾರ್ಯ ನಡೆಯಲು ಈ ಮಂತ್ರ ಪಠಣೆ ಮಾಡಿ.
ಸಕಲ ಸಮಸ್ಯೆ ನಿವಾರಣೆಗೆ
ರಾಮ ರಾಮೇತಿ ರಾಮೇತಿ, ರಾಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ, ರಾಮನಾಮಂ ವರಾನನ
ಈ ಮಂತ್ರವನ್ನು ನೀವು ಪ್ರತಿದಿನ ಪಠಣೆ ಮಾಡುವುದರಿಂದ ಸಕಲ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ, ಬದುಕಿನಲ್ಲಿ ಸಂತೋಷ, ನೆಮ್ಮದಿ ಇರಲಿದೆ. ನಿಮ್ಮ ಬದುಕಿನಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











