Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Raksha Bandhan: ಈ ಗಿಫ್ಟ್ ಕೊಟ್ಟರೆ ಸಂಬಂಧ ಹಾಳಾಗುತ್ತೆ! ಈ ತಪ್ಪು ಮಾಡಬೇಡಿ
ರಾಖಿಗೆ ಈ ಉಡುಗೊರೆಗಳನ್ನು ನೀಡಿದ್ರೆ ಸಂಬಂಧ ಹಾಳಾಗುತ್ತೆ! ಈ ಗಿಫ್ಟ್‌ಗಳನ್ನು ಎಂದಿಗೂ ನೀಡಬೇಡಿ. ರಕ್ಷಾ ಬಂಧನ (Raksha Bandhan 2025), ಒಡಹುಟ್ಟಿದವರ ಬಾಂಧವ್ಯದ ಸಂಕೇತವಾಗಿದೆ. ಈ ಹಬ್ಬದಲ್ಲಿ ಉಡುಗೊರೆಗಳ ವಿನಿಮಯವು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಆದರೆ, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಂಬಂಧಕ್ಕೆ ಅಷ್ಟೇನೂ ಶುಭವಲ್ಲ. ಹೌದು, ರಕ್ಷಾ ಬಂಧನ ಸಮೀಪಿಸುತ್ತಿದೆ. ಈ ಪವಿತ್ರ ದಿನದಂದು ಸಹೋದರ ಸಹೋದರಿಯರು ಪ್ರೀತಿಯಿಂದ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಜ್ಯೋತಿಷ್ಯ ಮತ್ತು ವಾಸ್ತು ತಜ್ಞರ ಪ್ರಕಾರ, ಕೆಲವು ವಸ್ತುಗಳನ್ನು ಉಡುಗೊರೆಯಾಗಿ (Raksha Bandhan Gift) ನೀಡುವುದು ಸಂಬಂಧಕ್ಕೆ ಒಳ್ಳೆಯದಲ್ಲ.
ಶ್ರಾವಣ ಮಾಸದಲ್ಲಿ ಬರುವ ಈ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 9 ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಈ ದಿನ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಾರೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸೋದರ ಸೋದರಿಯರ ಬಾಂಧವ್ಯವನ್ನು ಬಲಪಡಿಸುವ ಒಂದು ವಿಶೇಷ ಸಂದರ್ಭವಾಗಿದೆ. ಆದರೆ, ಕೆಲವು ಉಡುಗೊರೆಗಳನ್ನು ನೀಡುವುದು ಶುಭವಲ್ಲ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಹರಿತವಾದ ವಸ್ತುಗಳು ಅಥವಾ ಕನ್ನಡಿಗಳನ್ನು ಉಡುಗೊರೆಯಾಗಿ ನೀಡಬಾರದು. ಏಕೆಂದರೆ, ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು. ಅಲ್ಲದೆ, ಮುರಿದ ಅಥವಾ ಹಳೆಯ ವಸ್ತುಗಳನ್ನು ನೀಡುವುದು ದುರದೃಷ್ಟ ತರುತ್ತದೆ. ಈ ರೀತಿಯ ಉಡುಗೊರೆಗಳು ಸಂಬಂಧಗಳಲ್ಲಿ ಬಿರುಕು ತರಬಹುದು. ಹಾಗಿದ್ರೆ, ಸಹೋದರಿಗೆ ಯಾವ ಉಡುಗೊರೆ ನೀಡಬೇಕು ಎಂಬುದು ನಿಮಗೆ ಗೊತ್ತಾ? ನಾವು ಈ ಲೇಖನದಲ್ಲಿ ರಕ್ಷಾ ಬಂಧನ ದಿನದಂದು ನಿಮ್ಮ ಸಹೋದರಿಗೆ ನೀಡಬಾರದ ಕೆಲವು ಉಡುಗೊರೆಗಳು (Gifts to avoid on Raksha Bandhan) ಯಾವುವು ಎಂಬುದನ್ನು ತಿಳಿಸಿದ್ದೇವೆ.
ಕಂಚು, ಗಾಜಿನ ವಸ್ತುಗಳು
ಕಂಚು ಅಥವಾ ಗಾಜಿನಿಂದ ತಯಾರಿಸಿದ ಅಥವಾ ಮಾಡಿದ ವಸ್ತುಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಇವು ಸುಲಭವಾಗಿ ಒಡೆಯುತ್ತವೆ. ಇವು ಸಂಬಂಧಗಳನ್ನು ದುರ್ಬಲಗೊಳಿಸಬಹುದು ಅಥವಾ ಮುರಿಯಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ವಸ್ತುಗಳನ್ನು ಸಹೋದರಿಯರು ತಮ್ಮ ಸಹೋದರರಿಗೆ ಉಡುಗೊರೆಯಾಗಿ ನೀಡದಿರುವುದು ಉತ್ತಮ.
ಗಡಿಯಾರಗಳು, ಟೈಮರ್‌ಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗಡಿಯಾರಗಳನ್ನು ಶನಿ ಗ್ರಹಕ್ಕೆ ಸಂಬಂಧಿಸಿವೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಗಡಿಯಾರಗಳನ್ನು ಉಡುಗೊರೆಯಾಗಿ ನೀಡುವುದು ಸಂಬಂಧದಲ್ಲಿ ವಿಳಂಬ, ಅಡೆತಡೆಗಳು ಮತ್ತು ದುರದೃಷ್ಟವನ್ನು ತರಬಹುದು ಎಂದು ಹೇಳಲಾಗುತ್ತದೆ.
ಚೂಪಾದ ವಸ್ತುಗಳು
ಚಾಕುಗಳು, ಕತ್ತರಿಗಳಂತಹ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಇದು ಸಂಬಂಧದಲ್ಲಿ ತಪ್ಪು ತಿಳುವಳಿಕೆಗಳು ಮತ್ತು ಕಲಹಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಈ ರೀತಿಯ ವಸ್ತುಗಳು ಸಂಬಂಧಗಳನ್ನು ಹಾಳುಮಾಡುತ್ತವೆ. ಆದ್ದರಿಂದ, ಸಹೋದರಿಯರು ತಮ್ಮ ಸಹೋದರರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು.
ಕಪ್ಪು ಬಣ್ಣದ ಬಟ್ಟೆಗಳು, ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣವು ದುಃಖ ಮತ್ತು ನಕಾರಾತ್ಮಕ ಭಾವನೆಗಳ ಸಂಕೇತ. ಆದ್ದರಿಂದ, ಈ ಬಣ್ಣದ ವಸ್ತುಗಳು ಅಥವಾ ಬಟ್ಟೆಗಳನ್ನು ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಇವು ಸಂಬಂಧದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು.
ಹಣ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಬೇಡ
ರಾಖಿ ಹಬ್ಬದಂದು ಹಣ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನೀಡುವ ಬದಲು, ಶಾಶ್ವತವಾಗಿ ಉಳಿಯುವ ಮತ್ತು ಭಾವನಾತ್ಮಕ ಮೌಲ್ಯವಿರುವ ಉಡುಗೊರೆಗಳನ್ನು ಆಯ್ಕೆ ಮಾಡುವುದು ಉತ್ತಮ. ಉದಾಹರಣೆಗೆ, ಪುಸ್ತಕಗಳು, ಗಿಡಗಳು, ಕೈಯಿಂದ ಮಾಡಿದ ಕಲಾಕೃತಿಗಳು, ಅಥವಾ ಪ್ರವಾಸದಂತಹ ಅನುಭವಗಳನ್ನು ನೀಡಬಹುದು.
ಒಟ್ಟಾರೆಯಾಗಿ, ಉಡುಗೊರೆ ಕೇವಲ ಒಂದು ವಸ್ತು ಆಗಿರದೆ, ಅದೊಂದು ಭಾವನಾತ್ಮಕ ಸಂಪರ್ಕದ ಸಂಕೇತವಾಗಿರಬೇಕು. ಆದ್ದರಿಂದ, ರಾಖಿ ಹಬ್ಬದಂದು ನೀಡುವ ಉಡುಗೊರೆಗಳು ಸಂಬಂಧಗಳನ್ನು ಬಲಪಡಿಸುವಂತಹದ್ದಾಗಿರಲಿ ಎಂಬುವುದನ್ನು ನಮ್ಮ ಆಶಯವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ವಾಸ್ತು, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಈ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications













