Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹನುಮ ಜಯಂತಿಯಂದು ಅಪರೂಪದ ರಾಜಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ..
ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ರಾಮನ ಪರಮ ಭಕ್ತನಾದ ಹನುಮನಿಗಾಗಿ ಈ ದಿನ ಸಮರ್ಪಿತವಾಗಿದೆ. ಈ ದಿನ ಹನುಮ ಜನಿಸಿದ ದಿನ ಎಂದು ಪರಿಗಣಿಸಲಾಗಿದೆ. ಹೀಗಾಗಿ ರಾಮ ಭಕ್ತರು ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಚೈತ್ರ ಪೂರ್ಣಿಮಾ ತಿಥಿ ಏಪ್ರಿಲ್ 12 ರಂದು ಬೆಳಗ್ಗೆ 3:20 ಕ್ಕೆ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ ಏಪ್ರಿಲ್ 13 ರಂದು ಬೆಳಗ್ಗೆ 5:52 ಕ್ಕೆ ಮುಕ್ತಾಯಗೊಳ್ಳುತ್ತದೆ.
ಈ ಹಬ್ಬವು ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿಯೂ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಚೈತ್ರ ಪೂರ್ಣಿಮಾ ತಿಥಿಯಲ್ಲಿ ಈ ಹಬ್ಬ ಬರುವುದು ಬಹಳ ಶುಭಕರ ಲಗ್ನವಾಗಿದೆ. ಹಾಗೆ ಈ ದಿನವೇ ರವಿ ಯೋಗ ಮತ್ತು ಜಯ ಯೋಗಗಳು ಉಂಟಾಗುವುದು ಎಲ್ಲರ ಮೇಲೆಯೂ ತನ್ನ ಪ್ರಭಾವ ಉಂಟು ಮಾಡುತ್ತದೆ. ಅದರಲ್ಲೂ ಹಲವು ರಾಶಿ ಜನರಿಗೆ ಇದು ಶುಭಕರ ದಿನವಾಗಿ ಪರಿಣಮಿಸಲಿದೆ.

ಹಾಗೆ ಈ ದಿನದಂದು ಬುಧ, ಶುಕ್ರ, ಶನಿ, ರಾಹು ಹಾಗೂ ಸೂರ್ಯನು ಒಂದೇ ರಾಶಿಯಲ್ಲಿ ಚಲಿಸುವ ದಿನ. ಮೀನ ರಾಶಿಯಲ್ಲಿ ಈ ಎಲ್ಲಾ ಗ್ರಹಗಳ ಸಂಚಾರ ಇರುವುದು ಬಹಳ ಅಪರೂಪದ ಯೋಗಗಳು, ಲಾಭಗಳಿಗೆ ಕಾರಣವಾಗುತ್ತದೆ. ಈ ವಿಶೇಷ ಗ್ರಹಗಳ ಸಂಯೋಗವು ಬುಧಾದಿತ್ಯ ಯೋಗ, ಶುಕ್ರಾದಿತ್ಯ ಯೋಗ, ಮಾಳವ್ಯ ಯೋಗ, ಲಕ್ಷ್ಮೀ ನಾರಾಯಣ ಯೋಗದಂತಹ ಶಕ್ತಿಶಾಲಿ ರಾಜಯೋಗಗಳನ್ನು ಸೃಷ್ಟಿಸುತ್ತದೆ.
ಈ ಯೋಗಗಳು ಕೆಲವು ರಾಶಿ ಜನರಿಗೆ ಶುಭ ಫಲಿತಾಂಶಗಳನ್ನು ತರಲಿವೆ. ಹಾಗಾದ್ರೆ ಈ ಹನುಮ ಜಯಂತಿಯ ದಿನದಂದು ಯಾವೆಲ್ಲಾ ರಾಶಿಯವರು ಹನುಮನ ಆಶೀರ್ವಾದಕ್ಕೆ ಒಳಗಾಗುತ್ತಾರೆ, ಯಾರ ಮೇಲೆ ಆತನ ಅನುಗ್ರಹ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಈ ಹನುಮ ಜಯಂತಿಯಂದು ವೃಷಭ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗುವ ದಿನವಾಗಿರಲಿದೆ. ಹನುಮನ ಆಶೀರ್ವಾದದಿಂದಾಗಿ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ನೋಡಬಹುದು. ವಿಶೇಷವಾಗಿ ನೀವು ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದ. ಹಾಗೆ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಸಿಗಲಿದೆ. ಹಾಗೆ ನಿಮ್ಮ ಆಧ್ಯಾತ್ಮಿಕ ಚಿಂತನೆಯಲ್ಲಿ ಧನಾತ್ಮಕ ಪರಿಣಾಮಗಳ ನೋಡಬಹುದು. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಗಳು ಲಾಭದಾಯಕವಾಗಿ ಪರಿಣಮಿಸಲಿದೆ, ಹಾಗೆ ಭೂಮಿಗೆ ಸಂಬಂಧ ಪಟ್ಟಂತೆ ನೀವು ಯಾವುದಾದರು ವ್ಯವಹಾರ ಮಾಡುತ್ತಿದ್ದರೆ ಒಳಿತಾಗುವ ಸಂಭವ ಹೆಚ್ಚಾಗಲಿದೆ.
ಮಿಥುನ ರಾಶಿ
ಈ ರಾಶಿಚಕ್ರದ ಜನರು ತಮ್ಮ ಯೋಜಿತ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ನಿಮ್ಮ ಬಹುದೊಡ್ಡ ಹೆದರಿಕೆ, ಭಯ ಅಥವಾ ಸವಾಲಿನ ಕೆಲಸವನ್ನು ಈ ಸಮಯದಲ್ಲಿ ಸುಲಭವಾಗಿ ಮಾಡಿ ಮುಗಿಸುವ ಮನಸ್ಸು ಮಾಡಿ. ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುವುದರಿಂದಾಗಿ ವೃತ್ತಿ ಜೀವನದಲ್ಲಿನ ಏರಿಳಿತಗಳಿಂದ ಮುಕ್ತರಾಗುತ್ತೀರಿ. ದೇವಾಲಯ ಭೇಟಿ, ಪ್ರವಾಸದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ನೀವು ಬಹಳ ಸಮಯದಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಈ ಸಮಯದಲ್ಲು ಪೂರ್ಣ ಆಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಆರ್ಥಿಕವಾಗಿ ಸ್ಥಿರರಾಗಲು ಅವಕಾಶಗಳು ದೊರೆಯುತ್ತವೆ. ಹನುಮನ ಆಶೀರ್ವಾದ ನಿಮ್ಮ ಮೇಲಿರುವುದರಿಂದ ನಿಮ್ಮಲ್ಲಿ ದೃಢಸಂಕಲ್ಪ ಮಾಡಲು ಬಹಳ ಸೂಕ್ತ ಸಮಯ ಆಗಿರಲಿದೆ. ಹಾಗೆ ಈ ದಿನದಂದು ನಿಮ್ಮ ಆರ್ಥಿಕ ಸಮಸ್ಯೆಗೆ ಸಂಬಂಧಿಸಿದಂತೆ ಇದ್ದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ. ಕುಟುಂಬಸ್ಥರು, ಸ್ನೇಹಿತರ ಕಡೆಯಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಇದರಿಂದ ನೀವು ಮತ್ತಷ್ಟು ಮುಂದುವರೆಯಲು ಇಚ್ಛಿಸಬಹುದು. ಅವಿವಾಹಿತರು ಈ ದಿನ ಶುಭ ಸುದ್ದಿಗಳ ಕೇಳುವಿರಿ. ಹಾಗೆ ಮನೆಯಲ್ಲಿ ಶಾಂತಿ ನೆಲೆಸಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


