Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಚಂದ್ರಗ್ರಹಣದಲ್ಲಿ ಆಪತ್ತು ತರಲಿದ್ದಾನೆ ರಾಹು! ಕೆಲಸದಲ್ಲಿ ಸೋಲು, ಆರ್ಥಿಕತೆ ನೋವು!
ಸೆಪ್ಟೆಂಬರ್ 7ರ ಚಂದ್ರಗ್ರಹಣವು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಚಂದ್ರ ಹಾಗೂ ರಾಹುವಿನ ಸಮ್ಮಿಲನದಲ್ಲಿ ಉಂಟಾಗುತ್ತಿದ್ದು ಇದನ್ನು ರಾಹುಗ್ರಸ್ತ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಹೀಗಾಗಿ ಗ್ರಹಣದ ಸಮಯದಲ್ಲಿ ರಾಹುವಿನ ಪ್ರಭಾವ ಹೆಚ್ಚಾಗಿರಲಿದೆ. ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.
ವೈದಿಕ ಜ್ಯೋತಿಷ್ಯದಲ್ಲಿ ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ಇದರ ಸ್ವಭಾವವು ತುಂಬಾ ನಿಗೂಢ ಮತ್ತು ಅನಿಶ್ಚಿತವಾಗಿದೆ, ಆದ್ದರಿಂದ ಇದು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುವ ಗ್ರಹ ಎಂದು ಹೇಳಲಾಗುತ್ತದೆ. ಹಾಗೆ ರಾಹುವಿನಿಂದ ಗ್ರಹಣದ ಸಮಯದಲ್ಲಿ ಹಲವರು ಅನೇಕ ರೀತಿಯ ಸಮಸ್ಯೆಗಳ ಎದುರಿಸಬಹುದು.
ರಾಹುವಿನ ಚಲನೆಯು ಹಲವರಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ ಹಾಗೆ ಚಂದ್ರಗ್ರಹಣದ ಸಮಯದಲ್ಲಿ ರಾಹು ತನ್ನ ಪ್ರಭಾವ ಹೆಚ್ಚಾಗಿಸಿಕೊಳ್ಳುವುದು ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಹಾಗಾದ್ರೆ ಗ್ರಹಣ ಸಮಯದಲ್ಲಿ ರಾಹುವಿನ ಪ್ರಭಾವ ಕಡಿಮೆ ಮಾಡುವ ಅಂಶವೇನು? ರಾಹುವಿನ ಕೆಡುಕಿನಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಜ್ಯೋತಿಷ್ಯದಲ್ಲಿ ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಅದನ್ನು ಸರಿಯಾಗಿ ನಿಭಾಯಿಸಲು ಹಲವು ರೀತಿಯ ಪರಿಹಾರಗಳ ಹೇಳಲಾಗಿದೆ. ಹಾಗಾದ್ರೆ ಚಂದ್ರಹ್ರಗಣದಲ್ಲಿನ ರಾಹುವಿನ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ ನೋಡಿ.
ರಾಹುವಿನ ದುಷ್ಪರಿಣಾಮಗಳಿಂದ ಪರಿಹಾರ ಪಡೆಯಲ ಸ್ನಾನದ ನಂತರ ಪ್ರತಿದಿನ 108 ಬಾರಿ "ಓಂ ಭ್ರಮ್ ಭ್ರಮ್ ಭ್ರಮ್ ಸಹ್ ರಹವೇ ನಮಃ" ಎಂಬ ಮಂತ್ರವನ್ನು ಪಠಿಸುವುದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಿಯಮಿತವಾಗಿ ಜಪಿಸುವುದರಿಂದ ರಾಹು ದೋಷದ ಪರಿಣಾಮ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಯಾವ ರಾಶಿಯವರಲ್ಲಿ ರಾಹುವಿನಿಂದ ಸಮಸ್ಯೆ ಕಾಡಲಿದೆ? ಗ್ರಹಣ ಸಮಯದಲ್ಲಿ ಪ್ರಭಾವಕ್ಕೆ ಒಳಗಾಗುವ ರಾಶಿಗಳು ಯಾವುದು ನೋಡಿ.
ವೃಷಭ ರಾಶಿ
ರಾಹು ವೃಷಭ ರಾಶಿಯ 10ನೇ ಮನೆಯಲ್ಲಿರಲಿದ್ದಾನೆ. ಈ ಸಮಯದಲ್ಲಿ ರಾಹುವಿನ ಪ್ರಭಾವ ಎದುರಿಸಬೇಕಾಗುತ್ತದೆ. ಹೀಗಾಗಿ ಗ್ರಹಣ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ನೋಡಬಹುದು. ನಿಮ್ಮ ಹಲವು ಕೆಲಸಗಳು ನಿಧಾನವಾಗಬಹುದು. ಕೆಲಸದ ಒತ್ತಡದಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಲಿದೆ. ಆಪ್ತರಿಂದ ಹಣಕಾಸು ಸಂಬಂಧ ಸಮಸ್ಯೆ ಇರಲಿದೆ. ದುಬಾರಿ ವಸ್ತುಗಳ ಖರೀದಿ ನಿಮ್ಮಲ್ಲಿ ಸಾಲದ ಪ್ರಮಾಣ ಹೆಚ್ಚಾಗುವಂತೆ ಮಾಡಲಿದೆ. ಆರೋಗ್ಯ ಹದಗೆಡುವ ಕಾರಣ ನೀವು ಅಂದುಕೊಂಡ ಕೆಲಸಗಳು ಅರ್ಧದಲ್ಲೇ ನಿಲ್ಲಲಿವೆ.
ಕರ್ಕ ರಾಶಿ
ರಾಹು ಕರ್ಕಾ ರಾಶಿಯ 8ನೇ ಮನೆಲ್ಲಿರಲಿದ್ದಾನೆ. ಹೀಗಾಗಿ ಗ್ರಹಣ ಸಮಯದಲ್ಲಿ ನಿಮ್ಮಲ್ಲಿ ಹಲವು ಅಶುಭ ಕಾರಕಗಳು ಎದುರಿಸಬೇಕಾಗುತ್ತದೆ. ಅದ್ರಲ್ಲೂ ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಸವಾಲುಗಳು ಎದುರಾಗಬಹುದು. ಹಠಾತ್ ಅನಾರೋಗ್ಯದಿಂದ ಹಿಡಿದು ಹಠಾತ್ ಖರ್ಚುಗಳು ಕಾಡಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಕುರಿತಾಗಿ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಬಹುದು. ವ್ಯಾಪಾರ ವ್ಯವಹಾರಗಳು ನಿಧಾನವಾಗಬಹುದು.
ಮೀನ ರಾಶಿ
ಮೀನ ರಾಶಿಯ 12ನೇ ಮನೆಯಲ್ಲಿ ರಾಹು ನೆಲಸಿರುತ್ತಾನೆ. ಇದರಿಂದ ನಿಮಗೆ ಉದ್ಯೋಗದಲ್ಲಿನ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳು ಹೆಚ್ಚಳವಾಗಲಿದೆ. ನಿಮ್ಮ ಅನಾರೋಗ್ಯ ಸಂಬಂಧವಾಗಿ ನೀವು ಕೆಲಸ ಬದಲಿಸಬೇಕಾಗಬಹುದು. ವಾಹನ ಸಂಬಂಧ ಸಾಲ ಮಾಡಿದ್ದರೆ ಒತ್ತಡ ಎದುರಿಸುತ್ತೀರಿ. ಹಣಕಾಸು ಸಂಬಂಧ ನಷ್ಟ ಅಥವಾ ಮೋಸಕ್ಕೆ ತುತ್ತಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











