Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ರಾಹು-ಕೇತು ಸಂಚಾರವು ಈ ರಾಶಿಯವರ ಹಲವು ಸಮಸ್ಯೆ ನಿವಾರಣೆ..!
ವೈದಿಕ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ಛಾಯಾ ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು ಮತ್ತು ಕೇತು ರಾಶಿಗಳು ಬದಲಾದಾಗ ಅದರ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಉಂಟಾಗಲಿದೆ. ಈ ಗ್ರಹಗಳ ಸಂಚಾರವು ಕೆಲವು ರಾಶಿಗಳಲ್ಲಿ ಅದ್ಭುತ ಲಾಭಕ್ಕೆ ಕಾರಣವಾಗಲಿದೆ. ಹಾಗೆ ಹಲವು ನಕರಾತ್ಮಕ ಫಲಿತಾಂಶಕ್ಕೂ ಕಾರಣವಾಗಲಿದೆ. ಹಾಗೆ ಹಲವು ರಾಶಿಯರಲ್ಲಿ ಅನೇಕ ರೀತಿಯ ಬದಲಾವಣೆಗಳಿಗೂ ಇದು ಕಾರಣವಾಗುತ್ತಿದೆ.
ರಾಹು ಮೇ 18ರಲ್ಲಿ ಕುಂಭ ರಾಶಿಗೆ ಚಲಿಸಲಿದೆ ಹಾಗೆ ಕೇತು ಸಿಂಹ ರಾಶಿಗೆ ಸಂಚರಿಸಲಿದೆ. ಈ ಎರಡು ನೆರಳಿನ ಗ್ರಹಗಳು ಒಂದೇ ದಿನದಂದು ತಮ್ಮ ರಾಶಿಯನ್ನು ಬದಲಾಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಹೀಗಾಗಿ ಇದು ಎಲ್ಲಾ 12 ರಾಶಿಗಳ ಮೇಲೆಯೂ ಪ್ರಭಾವ ಬೀರಲಿದೆ. ಹಾಗಾದ್ರೆ ಯಾವ ರಾಶಿಯವರಿಗೆ ಇದು ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗ್ರಹಗಳ ಸಂಚಾರದಿಂದ ಅನೇಕ ಲಾಭಗಳು ದೊರೆಯಲಿವೆ. ಅವರು ಈಗ ಅವರು ಬಯಸುವ ಅನೇಕ ವಿಷಯಗಲ್ಲಿ ಯಶಸ್ಸು ನೋಡಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಹೊಸ ರೀತಿಯ ಸಂಕಲ್ಪ ಮಾಡುತ್ತೀರಿ. ನಿಮ್ಮಲ್ಲಿದ್ದ ಕೌಟುಂಬಿಕ ಸಮಸ್ಯೆಗಳು ಕಾಲಕ್ರಮೇಣ ನಿವಾರಣೆಯಾಗಲಿದೆ. ಇಷ್ಟು ಸಮಯ ನೀವು ಕೆಲಸದ ಸ್ಥಳದಲ್ಲಿ ಅಥವಾ ಉದ್ಯೋಗ ಸಂಬಂಧವಾಗಿ ಎದುರಿಸಿದ್ದ ಅಡೆತಡೆಗಳು, ಕಷ್ಟಗಳು ನಿವಾರಣೆಯಾಗಲಿದೆ. ಹೂಡಿಕೆ ಲಾಭ, ಆರ್ಥಿಕ ಪರಿಸ್ಥಿತಿಯ ಲಾಭ ನೀವು ನೋಡಬಹುದು. ನಿಮ್ಮ ಜೀವನದ ಪ್ರಮುಖ ಘಟ್ಟದ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾದಾಗ ನಿಮ್ಮ ಗುರಿಯ ಕಡೆಗೆ ಹೆಚ್ಚು ಗಮನವಿಡಿ. ವಿವಾಹಿತರಲ್ಲಿ ಶುಭ ಸುದ್ದಿ ಕೇಳಿಬರಲಿದೆ. ವಿದೇಶ ಪ್ರಯಾಣ, ಪ್ರವಾಸದಂತಹ ಕನಸು ಕಂಡವರಿಗೆ ಈ ದಿನಗಳಲ್ಲಿ ಶುಭವಾಗುತ್ತಿದೆ. ನೀವು ಹಲವು ಶುಭ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನ ಸುಖವಾಗಿರಲಿದೆ, ನಿಮ್ಮ ಪತ್ನಿಯ ಬಯಕೆಯೊಂದನ್ನು ನೀವು ಈಡೇರಿಸಲಿದ್ದೀರಿ, ಇದರಿಂದ ಸಂತೋಷ ಇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ರಾಹು ಮತ್ತು ಕೇತುವಿನ ಸಂಚಾರವು ಅನೇಕ ಪ್ರಯೋಜನಗಳನ್ನು ತರುತ್ತದೆ. ಅವರು ಅನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು. ಜೀವನದಲ್ಲಿ ಬೆಳವಣಿಗೆಗೆ ಅನೇಕ ಅವಕಾಶಗಳು ಹುಡುಕಿ ಬರಲಿವೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಮಾಡುವ ದಿನಗಳು ನಿಮ್ಮ ಮುಂದಿರಲಿವೆ. ಮಕ್ಕಳಿಗೆ ಈ ಸಮಯದಲ್ಲಿ ಭವಿಷ್ಯದ ಮಾರ್ಗ ಗುರುತಿಸುತ್ತೀರಿ. ಉದ್ಯೋಗ ಹುಡುಕುತ್ತಿದ್ದವರಿಗೆ ಸೂಕ್ತವಾದ ಉದ್ಯೋಗ ಸಿಗುವಂತಹ ಲಾಭವಿದೆ. ಹಾಗೆ ನಿಮ್ಮ ಮನೆಗಾಗಿ ಅಥವಾ ವೈಯಕ್ತಿಕ ವಿಚಾರಕ್ಕಾಗಿ ಅಮೂಲ್ಯ ವಸ್ತುವನ್ನು ಖರೀದಿಸಬಹುದಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ನಿಮ್ಮ ಹಳೆಯ ವಿಚಾರಗಳು ನೆರವಾಗಲಿವೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಅಭ್ಯಾಸದ ಕಡೆಗೆ ಗಮನ ನೀಡುವುದು ಅವರ ಭವಿಷ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರಲಿದೆ.
ಮಕರ ರಾಶಿ
ರಾಹು-ಕೇತು ಸಂಚಾರವು ಮಕರ ರಾಶಿಯವರಿಗೆ ಅನಿರೀಕ್ಷಿತ ಲಾಭಗಳ ತರಲಿದೆ. ನೀವು ಇಷ್ಟು ಸಮಯಗಳ ಕಾಲ ಎದುರಿಸಿದ್ದ ವ್ಯವಹಾರಿಕ ಸಮಸ್ಯೆ, ಆಸ್ತಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಮನೆಯಲ್ಲಿ ನಿಮ್ಮಿಂದಾಗಿ ಶುಭ ಕಾರ್ಯವೊಂದು ನಡೆಯಬಹುದು. ಕೌಟುಂಬಿಕ ಸಮಸ್ಯೆಗಳಿದ್ದರೆ ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಉದ್ಯೋಗ ಬದಲಾವಣೆಯ ಆಸೆಗೆ ಈ ಸಮಯ ಉತ್ತಮ ದಾರಿ ತೋರಲಿದೆ. ಅನಿರೀಕ್ಷಿತ ಮೂಲದಿಂದ ಧನಲಾಭದ ನಿರೀಕ್ಷೆ ಇಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











