Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
19 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಬಂದಿದೆ ಪುಷ್ಯಾ ನಕ್ಷತ್ರ: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಸೂರ್ಯ ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ, ಮಕರ ಸಂಕ್ರಾಂತಿ ದಿನ ಸನಾತನ ಧರ್ಮದಲ್ಲಿ ತುಂಬಾನೇ ವಿಶೇಷವಾದ ದಿನ. ಈ ದಿನ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲಾಗುವುದು, ವೈದಿಕ ದೃಷ್ಟಿಯಿಂದಲೂ ಈ ದಿನ ಶುಭವಾಗಿದೆ. ಈ ದಿನ ಅತ್ಯಂತ ಶುಭ ಯೋಗಗಳು ಸಂಭವಿಸಲಿದೆ, ಇದರಿಂದಾಗಿ ಈ ಮಕರ ಸಂಕ್ರಾಂತಿ ಈ ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ:
ಮಕರ ಸಂಕ್ರಾಂತಿಯಂದು ಬಂದಿದೆ ಪುಷ್ಯಾ ನಕ್ಷತ್ರ, ಇದರಿಂದಾಗಿ ಈ ದಿನ ಮತ್ತಷ್ಟು ಶುಭವಾಗಿದೆ:

ಕರ್ಕ ರಾಶಿ
ಮಕರ ಸಂಕ್ರಾಂತಿಯಂದು ಪುಷ್ಯಾ ನಕ್ಷತ್ರ ಬಂದಿದ್ದು ಈ ಯೋಗವು ಕರ್ಕ ರಾಶಿಯವರಿಗೆ ಅದ್ಭುತ ಪ್ರಯೋಜನ ತಂದಿದೆ. ಈ ಮಕರ ಸಂಕ್ರಾಂತಿಯ ಬಳಿಕ ಕರ್ಕ ರಾಶಿಯವರ ಬದುಕಿನಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತೀರಿ. ಹೊಸ ವ್ಯಾಪಾರ- ವ್ಯವಹಾರ ಪ್ರಾರಂಭಿಸಲು ಈ ದಿನ ತುಂಬಾ ಉತ್ತಮವಾಗಿದೆ. ಕುಟುಂಬ ಬದುಕು ತುಂಬಾ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಏನಾದರು ಬದಲಾವಣೆ ಮಾಡಲು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಕೆಲಸ ಹುಡುಕುತ್ತಿದ್ದರೆ ಬಯಸಿದ ಕೆಲಸ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಮಕರ ಸಂಕ್ರಾಂತಿಯ ಅವಧಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮನೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆರ್ಥಿಕವಾಗಿ ಉತ್ತಮವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು. ಹೂಡಿಕೆ ಮಾಡಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಪ್ರಯೊಜನ ಪಡೆಯುತ್ತೀರಿ. ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳುವುದರಿಂದ ಲಾಭ ದೊರೆಯಲಿದೆ.
ಮೀನ ರಾಶಿ
ಮಿನ ರಾಶಿಯವರಿಗೆ ಈ ಮಕರ ಸಂಕ್ರಾಂತಿ ಸಂಪತ್ತಿನ ಭಾಗ್ಯ ಹೊತ್ತು ಬಂದಿದೆ. ಮಕರ ಸಂಕ್ರಾಂತಿ ಬಳಿಕ ನಿಮ್ಮ ಆರ್ಥಿಕ ಬದುಕಿನಲ್ಲಿ ಉತ್ತಮ ಪ್ರಯೊಜನ ಪಡೆಯುತ್ತೀರಿ. ವ್ಯಾಪಾರಸ್ಥರು ಉತ್ತಮ ಪ್ರಯೊಜನ ಪಡೆಯುತ್ತೀರಿ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆವಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡ ಬರಲಿದೆ.
ಮಕರ ಸಂಕ್ರಾಂತಿಯಂದು ಶಿವ ಯೋಗ ಕೂಡ ಬಂದಿದೆ
ಮಕರ ಸಂಕ್ರಾಂತಿಯ ದಿನ ಶಿವ ಯೋಗವೂ ಇದೆ, ಈ ದಿನದಂದು ಬೆಳಗ್ಗೆ 09:03ರಿಂದ ಸಂಜೆ 5:46ರವರೆಗೆ ಇದೆ, ಈ ಅವಧಿಯಲ್ಲಿ ಪೂಜೆಯನ್ನು ಸಲ್ಲಿಸಲಾಗುವುದು. ಇನ್ನು ಈ ದಿನದಂದು ಮಹಾಪುಣ್ಯ ಅವಧಿ ಬೆಳಗ್ಗೆ 09:03ರಿಂದ 10:48ರವರೆಗೆ ಇದೆ.
ಮಕರ ಸಂಕ್ರಾಂತಿ ಪ್ರಾಮುಖ್ಯತೆ:
ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ, ದೇಶದೆಲ್ಲಡೆ ಈ ಹಬ್ಬವನ್ನು ಆಚರಿಸಲಾಗುವುದು, ಈ ಹಬ್ಬವನ್ನು ಸೌರಮಾನ ಕ್ಯಾಲೆಂಡರ್ ಪ್ರಕಾರ ಆಚರಣೆ ಮಾಡಲಾಗುವುದು. ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಸವಿದು ಹಬ್ಬದ ಸಂಭ್ರಮ ಪಡುತ್ತಾರೆ, ಧಾರ್ಮಿಕವಾಗಿ ನೋಡುವುದಾದರೆ ಈ ದಿನ ಮಹತ್ವದ್ದಾಗಿದೆ. ಏಕೆಂದರೆ ಈ ದಿನದಿಂದ ಉತ್ತಾರಾಯಣ ಪ್ರಾರಂಭ.
ಮಕರ ಸಂಕ್ರಾಂತಿಯಿಂದ 6 ತಿಂಗಳು ಉತ್ತರಾಯಣ, ಉತ್ತರಾಯಣನ್ನು ಮೋಕ್ಷ ಪಡೆಯಲು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ, ಮಹಾಭಾರತದಲ್ಲಿ ಭೂಷ್ಮ ಉತ್ತಾರಾಯಣ ಕಾಲದವರೆಗೆ ಕಾದು ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದೆ.
ಈ ಹಬ್ಬವನ್ನು ಕರ್ನಾಟ, ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯೆಂದು, ತಮಿಳುನಾಡಿನಲ್ಲಿ ಪೊಂಗಲ್ ಎಂದು, ಕೇರಳದಲ್ಲಿ ಮಕರ ವಿಳಕ್ಕು ಎಂದು ಆಚರಿಸಲಾಗುವುದು. ಈ ದಿನ ಗಾಳಿಪಟ ಹಾರಿಸುವ ಸ್ಪರ್ಧೆ ಹಲವು ಕಡೆ ನಡೆಯಲಿದೆ. ಸುಗ್ಗಿಯ ಈ ಹಬ್ಬ ಬದುಕಿನಲ್ಲಿ ಸಕಲ ಐಶ್ವರ್ಯ ತರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.........
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications