Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು ಮಹಾದಶವಿರುವವರು ಈ ಪರಿಹಾರ ಮಾಡಿದರೆ ಬದುಕಿನಲ್ಲಿನ ಸಮಸ್ಯೆ ದೂರಾಗಲಿದೆ
ನಮ್ಮ ಜಾತಕದಲ್ಲಿ ರಾಹು ದೋಷವಿದ್ದರೆ ಜೀವನದಲ್ಲಿ ಏರಳಿತ ಉಂಟಾಗುವುದು, ರಾಹು ಅನುಕೂಲಕರ ಸ್ಥಾನದಲ್ಲಿ ಇರದಿದ್ದಾಗ ಆರ್ಥಿಕ ಸಮಸ್ಯೆ, ಕುಟುಂಬದಲ್ಲಿ ಕಲಹ, ವೃತ್ತಿ ಜೀವನದಲ್ಲಿ ತೊಂದರೆ ಈ ಬಗೆಯ ಸಮಸ್ಯೆ ಉಂಟಾಗುವುದು.
ರಾಹು ದೋಷದಿಂದ ಮನುಷ್ಯನಿಗೆ ಮಾನಸಿಕ ಒತ್ತಡ, ಖಿನ್ನತೆ ಕೂಡ ಉಂಟಾಗುವುದು, ಯಾರಿಗೆಲ್ಲಾ ರಾಹು ದೋಷವಿದೆಯೋ ಅವರು ಈ ಪರಿಹಾರ ಮಾಡಿದರೆ ಬದುಕಿನಲ್ಲಿ ಧನಾತ್ಮಕ ಪ್ರಭಾವ ಬೀರುವುದು ಎಂದು ವೈದಿಕಶಾಸ್ತ್ರ ಹೇಳುತ್ತದೆ:

ಕಪ್ಪು ನಾಯಿಗೆ ಆಹಾರ ನೀಡಿ
ರಾಹು ದುರ್ಬಲ ಸ್ಥಾನದಲ್ಲಿದ್ದರೆ ಕಪ್ಪು ನಾಯಿಗೆ ಆಹಾರ ನೀಡುವುದು ಅತ್ಯುತ್ತಮವಾದ ಪರಿಹಾರವೆಂದು ಹೇಳಲಾಗುವುದು. ಹೀಗೆ ಕಪ್ಪು ನಾಯಿಗೆ ಆಹಾರ ನೀಡುವುದರಿಂದ ನಕರಾತ್ಮಕ ಪ್ರಭಾವ ಕಡಿಮೆಯಾಗಲಿದೆ, ವೃತ್ತಿ ಬದುಕಿನಲ್ಲಿ ಸಮಸ್ಯೆ ಕಡಿಮೆಯಾಗಲಿದೆ. ಕಪ್ಪು ಬೀದಿ ನಾಯಿಗೆ ಆಹಾರ ನೀಡುವುದರಿಂದ ಸಂಪತ್ತು ಸಮೃದ್ಧಿ ಹೆಚ್ಚಾಗಲಿದೆ.
ಶನಿವಾರದ ಈ ದಿನ ಈ ಪರಿಹಾರ ಮಾಡಿದರೆ ಒಳ್ಳೆಯದು
ಶನಿವಾರದಂದು ಸ್ವಲ್ಪ ಬಾರ್ಲಿ ತೆಗೆದುಕೊಂಡು ಅದನ್ನು 18 ಸಮಭಾಗಗಳನ್ನಾಗಿ ಮಾಡಬೇಕು, ನಂತರ ಪ್ರತಿಯೊಂದು ಭಾಗವfನು ಕಪ್ಪು ಪಟ್ಟೆಯಲ್ಲಿಸುತ್ತಿಡಬೇಕು, ನಂತರ ಪ್ರತಿ ಬುಧವಾರ ಒಂದೊಂದು ಗಂಟನ್ನು ತಲೆಯ ಮೂರು ಸುತ್ತು ಸುತ್ತಿ ಹರಿಯುವ ನದಿಯಲ್ಲಿ ಬಿಡಬೇಕು, ಹೀಗೆ ಮಾಡುವುದರಿಂದ ರಾಹುದೋಷ ಕಡಿಮೆಯಾಗುವುದು ಎಂದು ಹೇಳಲಾಗುವುದು. ಇದರಿಂದ ವೃತ್ತಿ ಬದುಕಿನಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಿಸಲಿದೆ.
ಶನಿವಾರದಂದು ಈ ವಸ್ತುಗಳನ್ನು ಖರೀದಿ ಮಾಡುವುದು ಕೂಡ ಒಳ್ಳೆಯದು
ರಾಹು ದೋಷವಿರುವವರು ಶನವಾರದಂದು ಬಾರ್ಲಿ, ಸಾಸಿವೆ, ಎಳ್ಳೆಣ್ಣೆ, ಕನ್ನಡಿ, ಕಲ್ಲಿದ್ದಲು ಈ ಬಗೆಯ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ರಾಹುದೋಷ ಕಡಿಮೆಯಾಗಿ ಬದುಕಿನಲ್ಲಿ ಸ್ವಲ್ಪ ನೆಮ್ಮದಿ ಕಾಣುವಂತಾಗುವುದು.
ಈ ಪರಿಹಾರ ಕೂಡ ಒಳ್ಳೆಯದು:
ಕಪ್ಪು ಎಳ್ಳು
ನೀವು ಶನಿವಾರ ಕಪ್ಪು ಎಳ್ಳು ನೀರಿನಲ್ಲಿ ಬಿಡಬೇಕು.
ದಾನಗಳನ್ನು ಮಾಡಿ: ಶನಿವಾರದ ದಿನ ನಿರ್ಗತಿಕರಿಗೆ ದಾನ ಮಾಡಿ, ದಾನ ಮಾಡುವಾಗ ಕಪ್ಪು ಎಳ್ಳು, ಕಪ್ಪು ಬಟ್ಟೆ ಇವುಗಳನ್ನು ಇಟ್ಟು ದಾನ ಮಾಡಿ.
ರಾಹು ಪೂಜೆ ಮಾಡಿಸಿ
ರಾಹು ಪೂಜೆ ಮಾಡುವುದರಿಂದ ರಾಹುವಿನ ನೆಗೆಟಿವ್ ಪರಿಣಾಮ ಬೀರುವುದು.
ಧ್ಯಾನ
ದೇವರ ಧ್ಯಾನ ಮಾಡುವುದರಿಂದ ರಾಹುವಿನ ನೆಗೆಟಿವ್ ಪರಿಣಾಮ ಬೀರುವುದು.
ರಾಹುಕಾಲದ ಸಮಯದಲ್ಲಿ ಏನೂ ಮಾಡಬೇಡಿ:
ರಾಹುಮಹಾದಶವಿದ್ದರೆ ರಾಹುಕಾಲದ ಸಮಯದಲ್ಲಿ ಹೆಚ್ಚು ಜಾಗ್ರತೆವಹಿಸಿ, ಈ ಸಮಯದಲ್ಲಿ ಪ್ರಯಾಣ ಮಾಡುವುದೆಲ್ಲಾ ಮಾಡಬಾರದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸರಸ್ವತಿ ಪೂಜೆ ಮಾಡಿ
ರಾಹು ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ನೀಡುತ್ತದೆ, ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ, ಪ್ರತಿದಿನ ಸರಸ್ವತಿ ಪೂಜೆ ಮಾಡಬೇಕು, ಇದರಿಂದ ವೃತ್ತಿ ಬದುಕಿನಲ್ಲಿನ ಸಮಸ್ಯೆ ಕಡಿಮೆಯಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


