Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1954ರ ಬಳಿಕ ವಿಶೇಷ ದೀಪಾವಳಿ: ಹಲವು ಯೋಗದಿಂದ ಬದಲಾಗಲಿದೆ ಈ ರಾಶಿಯವರ ಬದುಕು!
ದೀಪಾವಳಿಯ ಸಂದರ್ಭದಲ್ಲಿ ಹಲವು ರೀತಿಯ ಗ್ರಹಗಳ ಸಂಚಾರ ಹಾಗೆ ಬದಲಾವಣೆಗಳ ನೋಡಬಹುದು. 70 ವರ್ಷದ ಬಳಿಕ ಇದು ವಿಶೇಷ ದೀಪಾವಳಿ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಹಲವು ಗ್ರಹಗಳಲ್ಲಿನ ಸ್ಥಾನಪಲ್ಲಟವು ಶುಭ ಹಾಗೂ ಅಶುಭ ಲಾಭಗಳ ತರುವುದು ನೋಡಬಹುದು. ಹಾಗೆ ಹಲವು ರಾಶಿಗಳಿಗೆ ಈ ದೀಪಾವಳಿಯು ವಿಶೇಷ ರೀತಿಯ ಶುಭಗಳಿಗೆ ಕಾರಣವಾಗುತ್ತಿದೆ. ಈ ದೀಪಾವಳಿಯಲ್ಲಿ ಹಂಸರಾಜ ಮತ್ತು ಬುಧಾದಿತ್ಯ ರಾಜಯೋಗದಂತಹ ಅಪರೂಪದ ಯೋಗ ಉಂಟಾಗುತ್ತಿದೆ.
ಈ ಮೊದಲು ಈ ಹಂಸರಾಜ ಹಾಗೂ ಬುಧಾದಿತ್ಯ ರಾಜಯೋಗವು 1954ರ ದೀಪಾವಳಿಯಲ್ಲಿ ರೂಪುಗೊಂಡಿತ್ತು, ಇದಾದ ಬಳಿಕ ಈಗ ಮತ್ತೆ ಅಪರೂಪದ ದಿನದಲ್ಲಿ ರೂಪುಗೊಳ್ಳುತ್ತಿದೆ. ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಯಲ್ಲಿ ಸಾಗುತ್ತದೆ. ಸೂರ್ಯ ಮತ್ತು ಬುಧರ ಸಂಯೋಗವು ತುಲಾ ರಾಶಿಯಲ್ಲಿದ್ದು, ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸಲಿದೆ.

ಹಾಗೆ ಸೂರ್ಯನು ತುಲಾ ರಾಶಿಯಲ್ಲಿ ಚಲಿಸಲಿದ್ದು, ತುಲಾ ರಾಶಿಯಲ್ಲಿ ಮಂಗಳ ಮತ್ತು ಸೂರ್ಯನ ಸಂಯೋಗವು ಆದಿತ್ಯ ಮಂಗಳ ಯೋಗವನ್ನು ಸೃಷ್ಟಿಸುತ್ತದೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗವು ಕಲಾನಿಧಿ ಯೋಗವನ್ನು ಸೃಷ್ಟಿಸುತ್ತದೆ. ಹಾಗೆ ದೀಪಾವಳಿಯ ಸಮಯದಲ್ಲಿಯೇ ಸರ್ವಾರ್ಥ ಸಿದ್ದಿ ಯೋಗ ಕೂಡ ರೂಪುಗೊಳ್ಳುತ್ತಿದೆ.
ಮೇಷ ಮತ್ತು ಮಿಥುನ ಸೇರಿದಂತೆ ಐದು ರಾಶಿ ಜನರಿಗೆ ಈ ದೀಪಾವಳಿ ಶುಭ ತರಲಿದೆ. ಹಾಗಾದ್ರೆ ಈ ದೀಪಾವಳಿಯ ಬಳಿಕ ಯಾರ ಬದುಕು ಸಮೃದ್ಧಿಯಾಗಲಿದೆ. ಹಾಗಾದ್ರೆ ಈ ದೀಪಾವಳಿಯ ಬಳಿಕ ಯಾರಿಗೆ ಶುಭ ಅನ್ನೋದನ್ನು ನೋಡೋಣ.
ಮೇಷ ರಾಶಿ
ದೀಪಾವಳಿಯಂದು ಮೇಷ ರಾಶಿಯವರು ಬಹಳಷ್ಟು ಸಂತೋಷದಿಂದ ಆಶೀರ್ವದಿಸಲ್ಪಡುತ್ತಾರೆ. ಈ ದೀಪಾವಳಿಯಲ್ಲಿ ಆದಿತ್ಯ ಮಂಗಳ ಯೋಗ ಹಾಗೆ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. 7ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕ ರೀತಿಯಾಗಿ ಬದಲಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿದೆ. ಹಾಗೆ ಇಲ್ಲಿಯವರೆಗೆ ಪರಿಹರಿಸಲಾಗದೆ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡಹುದು. ನಿರುದ್ಯೋಗಿ ಯುವಕ ಯುವತಿಯರಿಗೆ ಈ ದೀಪಾವಳಿಯ ಬಳಿಕ ಅವಕಾಶಗಳು ಹುಡುಕಿ ಬರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ದೀಪಾವಳಿ ಹಬ್ಬವು ನಿಮಗೆ ಸಮೃದ್ಧಿಯನ್ನು ತರಲಿದೆ. ದೀಪಾವಳಿಯ ಬಳಿಕ ನಿಮ್ಮ ಅದೃಷ್ಟ ಬದಲಾಗಲಿದೆ. ನೀವು ಆಸ್ತಿ, ನಿವೇಶನ, ಜಮೀನು ಖರೀದಿ, ಹೊಸ ಉದ್ಯಮದಂತಹ ವಿಚಾರದಲ್ಲಿ ತೊಡಗಿದ್ದರೆ ಶುಭವಾಗಲಿದೆ. ಅನೇಕರಿಗೆ ಈ ಸಮಯವು ಲಾಭಗಳ ತರುವ ಆದಾಯ ಹೊಂದಲು ಕಾರಣವಾಗಲಿದೆ. ಬಹಳ ವರ್ಷಗಳಿಂದ ಬಯಸಿದಂತಹ ವಿಚಾರವೊಂದು ಕೈಗೂಡಲಿದೆ. ವಾಹನ ಲಾಭವಿದೆ. ನಿಮ್ಮ ಮನೆಗೆ ಅಗತ್ಯವಾಗಿ ಬೇಕಿದ್ದ ವಸ್ತು ದೀಪಾವಳಿಯ ಬಳಿಕ ಬಂದು ಸೇರಲಿದೆ.
ಕರ್ಕ ರಾಶಿ
ದೀಪಾವಳಿಯ ಸಂದರ್ಭದಲ್ಲಿ ಕರ್ಕ ರಾಶಿ ಜನರು ಹಂಸ ರಾಜ್ಯಯೋಗದಿಂದ ಪ್ರಯೋಜನ ಪಡೆಯುತ್ತಾರೆ. ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಯಲ್ಲಿ ಸಾಗುತ್ತಾನೆ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಕಾರಣವಾಗಲಿದೆ. ಅದ್ರಲ್ಲೂ ನಿಮ್ಮ ಹಲವು ಹಣಕಾಸಿನ ವಿಚಾರಗಳು, ಆರ್ಥಿಕ ಸ್ಥಿತಿಗಳಲ್ಲಿ ಸುಧಾರಣೆ ತರಲು ಕಾರಣವಾಗಲಿದೆ.
ಕನ್ಯಾ ರಾಶಿ
ದೀಪಾವಳಿಯ ಸಂದರ್ಭದಲ್ಲಿ ಕನ್ಯಾ ರಾಶಿ ಜನರು ಕಲಾನಿಧಿ ಯೋಗದ ಶುಭ ಸಂಯೋಜನೆಯನ್ನು ಅನುಭವಿಸುತ್ತಾರೆ. ವೃತ್ತಿ ಕ್ಷೇತ್ರ ಹಾಗೆ ನಿಮ್ಮ ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ ನೋಡಬಹುದು. ಅವಿವಾಹಿತರಲ್ಲಿ ವಿವಾಹ ಯೋಗ ಕಾಣಿಸಲಿದೆ. ಹಾಗೆ ಹೊಸ ಮನೆ ಖರೀದಿ ಅಥವಾ ನಿರ್ಮಾಣ ಸಂಬಂಧವಾಗಿ ನಿಮ್ಮ ಪರವಾದ ವಿಚಾರಗಳು ನಡೆಯಲಿದೆ.
ಮಕರ ರಾಶಿ
ದೀಪಾವಳಿಯ ನಂತರ ಮಕರ ರಾಶಿಯವರು ಸಂಪತ್ತು ಮತ್ತು ಸಮೃದ್ಧಿಯನ್ನು ಅನುಭವಿಸಬಹುದು. ಪೂರ್ಣ ಪ್ರಮಾಣದಲ್ಲಿ ನಿಮ್ಮ ಆದಾಯವು ಉಳಿತಾಯ ಕಾಣಬಹುದು. ಅವಿವಾಹಿತರಲ್ಲಿ ವಿವಾಹ ಭಾಗ್ಯ ಇರಲಿದೆ. ನೀವು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುತ್ತೀರಿ. ನೀವು ಬಹಳಷ್ಟು ಜ್ಞಾನವನ್ನು ಪಡೆಯುತ್ತೀರಿ. ನಿಮ್ಮ ಮಾತು ಕೂಡ ಸಿಹಿಯಾಗಿರುತ್ತದೆ.



Click it and Unblock the Notifications