Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನವೆಂಬರ್ ಮಾಸದಲ್ಲಿ ಈ 10 ದಿನಗಳು ಹಿಂದೂ ಧರ್ಮದ ಪ್ರಕಾರ ತುಂಬಾನೇ ಮಹತ್ವದ್ದಾಗಿದೆ
ನವೆಂಬರ್ ಮಾಸದ ಮೊದಲ ದಿನವೇ ದೀಪಾವಳಿ ಹಬ್ಬದ ಸಡಗರದಿಂದ ಶುರುವಾಗಲಿದೆ, ಅದಾದ ಬಳಿಕಕಾರ್ತಿಕ ಮಾಸ ಶುರು, ಕಾರ್ತಿಕ ಮಾಸದ ಅಷ್ಟೂ ದಿನಗಳು ವಿಶೇಷವಾದದ್ದೇ ಅದರಲ್ಲಿಯೂ ಪ್ರತಿ ಕಾರ್ತಿಕ ಸೋಮವಾರ ಶಿವ ಭಕ್ತ ಪಾಲಿಗೆ ತುಂಬಾ ವಿಶೇಷವಾದ ದಿನ.
ನವೆಂಬರ್ ಮಾಸದ ಬಹುತೇಕ ದಿನಗಳು ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ನೋಡೋಣ:

ನವೆಂಬರ್ 1 ದೀಪಾವಳಿ
ದೀಪಾವಳಿಯಂದು ಹಣತೆಗಳನ್ನು ಹಚ್ಚಿ ಸಂಭ್ರಮಿಸಲಾಗುವುದು, ಶ್ರೀ ಕೃಷ್ಣನು ಈ ದಿನ ನನಗೆ ಅತ್ಯಂತ ಇಷ್ಟವಾದ ದಿನ, ಈ ದಿನದಂದು ಜನರುದೀಪಗಳನ್ನು ಹಚ್ಚಿ ಸಂತೋಷದಿಂದ ಕಳೆಯುತ್ತಾರೆ ಎಂದು ಹೇಳಿರುವುದಾಗಿ ಹೇಳಲಾಗಿದೆ. ಈ ದಿನ ಶ್ರೀಗಣೇಶ ಹಾಗೂ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ ಎಂದು ನಂಬಲಾಗಿದೆ.
ಗೋರ್ವಧನ ಪೂಜೆ: ನವೆಂಬರ್ 2
ದೀಪಾವಳಿ ಬಳಿಕ ಗೋರ್ವಧನ ಪೂಜೆ ಮಾಡಲಾಗುವುದು8, ಈ ದಿನ ಶ್ರೀಕೃಷ್ಣನ ಆರಾಧನೆ ಮಾಡಲಾಗುವುದು. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧದದ ಸಂಕೇತವಾಗಿ ಈ ದಿನ ಆಚರಿಸಲಾಗುವುದು. ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರತಿಪಾದದಲ್ಲಿ ಗೋವರ್ಧನ ಪೂಜೆ ಮಾಡಲಾಗುವುದು. ಗೋವರ್ಧನ ಬೆಟ್ಟ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡಿ ಗೋವರ್ಧನ ಬೆಟ್ಟಕ್ಕೆ ಅರ್ಪಿಸಿ ಗೋವರ್ಧನ ಪೂಜೆ ನೆರವೇರಿಸಲಾಗುವುದು.
ಸೂರ್ಯ ಷಷ್ಠಿ: ನವೆಂಬರ್ 7
ಈ ದಿನ ಕೂಡ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನವಾಗಿದೆ. ದೀಪಾವಳಿ ಆಗಿ 6ನೇ ದಿನಕ್ಕೆ ಷಷ್ಠಿ ಪೂಜೆ ಅಥವಾ ಸೂರ್ಯ ಷಷ್ಠಿ ಪೂಜೆ ಮಾಡಲಾಗುವುದು. ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಸೂfಯ ಮಂತ್ರಗಳನ್ನು ಪಠಿಸಲಾಗುವುದು.
ದೇವೋತ್ಥಾನಿ ಏಕಾದಶಿ: ನವೆಂಬರ್ 12
ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ ಇದಾಗಿದೆ. ಇದು ಧಾರ್ಮಿಕ ದೃಷ್ಟಿಯಿಂದಮುಖ್ಯವಾಗಿದೆ. ಚಾರ್ತುಮಾಸದಲ್ಲಿ ನಿದ್ದೆಗೆ ಜಾರಿದ ಶ್ರೀ ವಿಷ್ಣು ದೇವೋತ್ಥಾನಿ ಏಕಾದಶಿಗೆ ಎಚ್ಚರವಾಗುತ್ತಾನೆ ಎಂದು ಹೇಳಲಾಗುವುದು, ಹೀಗಾಗಿ ಈ ದಿನ ತುಂಬಾನೇ ವಿಶೇಷವಾಗಿದೆ.
ಪ್ರದೋಷ ವ್ರತ: ನವೆಂಬರ್ 13
ಕಾರ್ತಿಕ ಮಾಸ ಶಿವನಿಗೆ ಮೀಸಲಾದ ತಿಂಗಳು, ಕಾರ್ತಿಕ ಮಾಸದಲ್ಲಿ ಬರುವ ಪ್ರದೋಷ ವ್ರತ ಇನ್ನು ಹೆಚ್ಚಿನ ಫಲಕಾರಿಯಾಗಿದೆ. ಈ ದಿನ ಉಪವಾಸವಿದ್ದು ಪ್ರದೋಷ ವ್ರತ ಮಾಡುತ್ತಾರೆ.
ಕಾರ್ತಿಕ ಪೂರ್ಣಿಮಾ: ನವೆಂಬರ್ 15
ಕಾರ್ತಿಕ ಪೂರ್ಣಿಮಾ ಕೂಡ ಧಾರ್ಮಿಕ ದಷ್ಟಿಯಿಂದ ಪ್ರಮುಖವಾದ ದಿನವಾಗಿದೆ. ಕಾರ್ತಿಕ ಪೂರ್ಣಿಮೆಯಂದು ಕೃತಿಕಾ ನಕ್ಷತ್ರ ಬಂದರೆ ಮಹಾಕಾರ್ತಿಕಿ ಎಂದು ಕರೆಯಲಾಗುವುದು. ಈ ದಿನ ಶ್ರೀವಿಷ್ಣುಗೆ ವಿಶೇಷ ಆರಾಧನೆ ಮಾಡಲಾಗುವುದು.
ವೃಶ್ಚಿಕ ಸಂಕ್ರಾಂತಿ : ನವೆಂಬರ್ 16
ನವೆಂಬರ್ 16ಕ್ಕೆ ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಬರುತ್ತದೆ. ಈಸೂರ್ಯ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೂ ಇರುತ್ತದೆ.
ಸಂಕಷ್ಠಿ ಚತುರ್ಥಿ: ನವೆಂಬರ್ 18
ಕಾರ್ತಿಕ ಮಾಸದಲ್ಲಿ ಈ ದಿನದಂದು ವಿಘ್ನ ನಿವಾರಕನಾದ ಶ್ರೀ ಕೃಷ್ಣನನ್ನು ಆರಾಧನೆ ಮಾಡಲಾಗುವುದು. ಈ ದಿನ ಶ್ರೀ ಗಣೇಶನ ಮಂತ್ರಗಳನ್ನು ಪಠಿಸಿ.
ಉತ್ಪನ್ನ ಏಕಾದಶಿ: ನವೆಂಬರ್ 26
ಈ ಏಕಾದಶಿ ಆಚರಣೆ ಮಾಡುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ ಎಂದು ಹೇಳಲಾಗುವುದು, ಆರ್ಥಿಕ ಸಮಸ್ಯೆವಿದ್ದರೆ ದೂರಾಗಲಿದೆ.
ಮಾಸಿಕ ಶಿವರಾತ್ರಿ: ನವೆಂಬರ್ 29
ಕಾರ್ತಿಕ ಮಾಸ ಪೂರ್ತಿ ಶಿವನ ಆರಾಧನೆ ಆಚರಣೆ ಮಾಡಲಾಗುವುದು, ಪ್ರತಿ ಮಾಸ ಮಾಸಿಕ ಶಿವರಾತ್ರಿಯಂದು ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು. ಹೀಗೆ ಇಡೀ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
