Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ನವೆಂಬರ್ 11ರ ದಿನ ಪಂಚಾಂಗ: ಶುಭ ಮುಹೂರ್ತ, ರಾಹುಕಾಲ, ತಿಥಿಯ ಮಾಹಿತಿ ಇಲ್ಲಿದೆ..!!
ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ಬಹಳ ಮಹತ್ವ ಇದೆ. ನಮ್ಮ ದಿನಚರಿ ಆರಂಭಿಸುವುದಕ್ಕೆ ಮುನ್ನ ಈ ದಿನದ ಶುಭ ಕಾಲ, ಕೆಟ್ಟಕಾಲ, ಮುಹೂರ್ತ, ಸೂರ್ಯೋದಯ, ಚಂದ್ರೋದಯ, ಸೂರ್ಯಾಸ್ತ, ರಾಹುಕಾಲದಂತಹ ವಿಚಾರಗಳನ್ನು ನಾವು ಮೊದಲೇ ನೋಡಿಕೊಳ್ಳಬೇಕು. ಹೀಗಿದ್ದಾಗ ಮಾತ್ರ ಆ ದಿನ ಸಂಪೂರ್ಣ ನಮ್ಮದಾಗುತ್ತದೆ. ಯಾವುದೇ ಕೆಡುಕ್ಕಿಲ್ಲದೆ ದಿನ ಕಳೆಯಬಹುದು. ಹೀಗಾಗಿ ನಿತ್ಯ ಪಂಚಾಂಗ ನೋಡಿ ದಿನ ಆರಂಭಿಸುವುದು ಉತ್ತಮ ಅಭ್ಯಾಸ ಆಗಿರಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ನಿತ್ಯ ಗಳಿಗೆ, ಕಾಲ, ಶುಭ ಸಮಯ ಬದಲಾಗುತ್ತದೆ. ಹಾಗೆ ರಾಹುಕಾಲ, ಯಮಗಂಡಕಾಲ, ಗುಳಿಕಾ ಕಾಲ, ಪಕ್ಷ, ಮುಹೂರ್ತ ಕೂಡ ಬದಲಾಗುತ್ತದೆ. ಕೆಲವೊಂದು ಕಾಲದಲ್ಲಿ ನಾವು ಯಾವ ಕಾರ್ಯ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದು ಕೂಡ ಮೊದಲೇ ಹೇಳಲಾಗಿದೆ. ಹೀಗಾಗಿ ನಾವು ನಾಳೆಯ ಪಂಚಾಂಗ ಹೇಗಿದೆ ಎಂಬುದನ್ನು ನೋಡೋಣ.

ಪಂಚಾಂಗದ ಐದು ಅಗತ್ಯ ಅಂಶಗಳು ನಾವು ಯಾವಾಗಲು ಗಮನದಲ್ಲಿ ಇಡಬೇಕು. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಮುಖ್ಯವಾಗಿ ನೋಡಬೇಕಾಗುತ್ತದೆ. ನಿಮ್ಮ ಇಡೀ ದಿನದ ಯೋಗ ಇದರಲ್ಲಿ ಅಡಗಿರುತ್ತದೆ. ನಿಮ್ಮ ದಿನದ ಯಶಸ್ಸು ಈ ಕಾಲದಲ್ಲಿ ಅಡಗಿರುತ್ತದೆ.
11 ನವೆಂಬರ್ 2024 ರ ದೈನಂದಿನ ಪಂಚಾಂಗವನ್ನು ನಾವು ನೋಡುವುದಾದರೆ ಕಾರ್ತಿಕ ಮಾಸದ ಶುಕ್ಲ ಪಕ್ಷದ 10ನೇ ದಿನವಾಗಿದೆ. ಈ ದಿನಾಂಕದಂದು ಶತಭಿಷಾ ನಕ್ಷತ್ರ ಮತ್ತು ವ್ಯಾಘಟ ಯೋಗದ ಸಂಯೋಜನೆ ಇರುತ್ತದೆ. ಸೋಮವಾರ 11:44 ರಿಂದ 12:26 ರವರೆಗೆ ಅಭಿಜಿತ್ ಮುಹೂರ್ತ ಇರುತ್ತದೆ. ಈ ಮೂಹೂರ್ತ ವಿವಾಹ ಸಮಾರಂಭಗಳಿಗೆ ಹೇಳಿ ಮಾಡಿಸಿದ ಮುಹೂರ್ತ.
ರಾಹುಕಾಲವು ಸಂಜೆ 08:05ರಿಂದ 09:25ರ ವರೆಗೆ ಇರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು, ಹೊಸ ಆರಂಭ ಮಾಡಬೇಡಿ. ಹಾಗೆ ನಾಳೆ ಚಂದ್ರ ಕುಂಭ ರಾಶಿಯಲ್ಲಿರಲಿದ್ದಾನೆ.
- ತಿಥಿ: ದಶಮಿ-18:42ರ ವರೆಗೆ
- ನಕ್ಷತ್ರ: ಶತಭಿಷ- 09:30ರ ವರೆಗೆ
- ಪಕ್ಷ: ಶುಕ್ಲ
- ಸೂರ್ಯೋದಯ- 06:45
- ಸೂರ್ಯಾಸ್ತ- 17:265
- ರಾಹುಕಾಲ- 08:05 ರಿಂದ 09:25
- ಶುಭ ಸಮಯ- ಅಭಿಜೀತ್ 11:44 ರಿಂದ 12:26
ಹಿಂದೂ ಕ್ಯಾಲೆಂಡರ್ ಪ್ರಕಾರ ತಿಥಿಗಳ ಹೆಸರು
ಪ್ರತಿಪದ, ದ್ವಿತೀಯ, ತೃತೀಯಾ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಅಮವಾಸ್ಯೆ/ಹುಣ್ಣಿಮೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications