ನವರಾತ್ರಿಯಲ್ಲಿ ದೇವಿಯ ಕೃಪೆ ಪಡೆಯೋ ರಾಶಿಗಳಿವು! ನಿಮ್ಮ ರಾಶಿಯೂ ಇರಬಹುದಾ ನೋಡಿ!

ಹಿಂದೂ ಧರ್ಮದಲ್ಲಿ ನವರಾತ್ರಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದು. ಕೊನೆಯ ದಿನದಂದು ನಡೆಯುವ ವಿಶೇಷ ಪೂಜೆಗಳು ಎಲ್ಲರಲ್ಲೂ ಭಕ್ತಿ ಹರಡಲಿದೆ. 9 ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ನಿನ್ನೆಯಿಂದ ನವರಾತ್ರಿಯ ಉಪವಾಸ ಆರಂಭಗೊಂಡಿದೆ. ಅಕ್ಟೋಬರ್ 2ರಂದು ವಿಜಯದಶಮಿ ಆಚರಣೆಯ ಬಳಿಕ ಮುಕ್ತಾಯವಾಗಲಿದೆ.

ನವರಾತ್ರಿಯನ್ನು ಕೆಲವು ಕಡೆ 11 ದಿನಗಳ ಕಾಲ ಆಚರಿಸುವುದು ಸಹ ನಾವು ನೋಡಬಹುದು. ಈ 11 ದಿನಗಳ ಸಮಯದಲ್ಲಿ ಹಲವು ರಾಶಿಗಳ ಮೇಲೆ ದೇವಿಯ ವಿಶೇಷ ಆಶೀರ್ವಾದ ಇರಲಿದೆ. ತಮ್ಮ ಜೀವನದಲ್ಲಿ ಎದುರಿಸುವ ಯಾವುದೇ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಪಡೆಯಲಿದ್ದಾರೆ. ಹಾಗೆ ದೇವಿಯ ಆಶೀರ್ವಾದದಿಂದಾಗಿ ಅವರಲ್ಲಿ ಹೊರ ಜೀವನ ಆರಂಭವಾಗುತ್ತದೆ.

These Zodiac Signs Will Get Pure Blessings For Maa Durga

ಕೆಲವು ರಾಶಿಗಳಲ್ಲಿನ ಗ್ರಹಗತಿಗಳ ಚಲನೆಯು ದೇವಿಯ ಕೃಪೆಗೆ ಪೂರಕವಾಗಿರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರ ಮೇಲೆ ದೇವಿಯ ಕೃಪೆ ಇರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ವೃಷಭ ರಾಶಿ

ವೃಷಭ ರಾಶಿಯನ್ನು ಶೈಲಪುತ್ರಿ ಮತ್ತು ಮಹಾಗೌರಿಯ ವಾಹನ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ರಾಶಿ ಜನರಿಗೆ ದೇವಿಯ ಆಶಿರ್ವಾದ ಸಿಗಲಿದೆ. ಈ ರಾಶಿ ಜನರು ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಮತ್ತು ಕಷ್ಟಕರ ಸಂದರ್ಭಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರ ಚಿಹ್ನೆಗಳು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪುತ್ತವೆ. ದೇವಿಯ ಆಶೀರ್ವಾದವು ನಿಮ್ಮ ಹಣಕಾಸಿನ ವ್ಯವಹಾರವನ್ನು ಸುಲವಾಗಿಸುವ ಜೊತೆಗೆ ಸಂಪೂರ್ಣವಾಗಿ ಬೆಂಬಲ ಸಿಗಲಿದೆ. ಹೊಸ ವ್ಯವಹಾರಗಳಲ್ಲಿ ನಿಮಗೆ ಲಾಭದಾಯಕ. ಹಲವರಲ್ಲಿ ಈ ವಾರ ದಾಂಪತ್ಯ ಸಂಬಂಧ ಧನಾತ್ಮಕವಾಗಿರಲಿದೆ.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಚಂದ್ರನು ಅಧಿಪತಿ, ಹೀಗಾಗಿ ಅವರಿಗೆ ದೇವಿಯ ಮೂರನೇ ಅವತಾರವಾದ ಚಂದ್ರಕಾಂತನ ಆಶೀರ್ವಾದ ಇರಲಿದೆ. ಕರ್ಕ ರಾಶೀಯವರಿಗೆ ದೇವಿಯ ಕೃಪೆಯು ಹಲವು ರೀತಿ ಲಾಭ ತರಬಹುದು. ನಿಮ್ ಪ್ರಯಾಣಗಳ ಸಂಬಂಧವಾಗಿ ಲಾಭವಿದೆ. ನೀವು ಬುದ್ದಿವಂತರು ಹಾಗೆ ಬಹಳ ಶ್ರಮ ಜೀವಿಗಳು ಹೀಗಾಗಿ ಅದರ ಫಲಿತಾಂಶಗಳು ನಿಮಗೆ ಶುಭಕರವಾಗಲಿದೆ. ಯಾವುದೇ ಕಠಿಣ ಸಮಯದಲ್ಲೂ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮ ದಾನ ಧರ್ಮಗಳು, ಇತರರಿಗೆ ಮಾಡಿದ ಸಹಾಯಗಳು ನಿಮ್ಮನ್ನು ಕಾಪಾಡಲಿವೆ.

ಸಿಂಹ ರಾಶಿ

ದುರ್ಗಾದೇವಿಯ ವಾಹನ ಸಿಂಹ. ಈ ಸಿಂಹ ರಾಶಿಯವರಲ್ಲಿ ದೇವಿಯ ವಿಶೇಷ ಕೃಪೆ ಇರಲಿದೆ. ನಿಮ್ಮ ಹಣಕಾಸು ವಿಚಾರಗಳಲ್ಲಿ ಲಾಭದಾಯಕ ದಿನಗಳ ನೋಡುವಿರಿ. ಮುಂದಿನ ಹಲವು ದಿನಗಳ ಕಾಲ ನಿಮ್ಮ ಕೈ ಬರಿದಾಗುವುದಿಲ್ಲ. ಹಾಗೆ ದೇವಿಯ ಕೃಪೆಯಿಂದಾಗಿ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆಯೊಂದು ದೂರಾಗಲಿದೆ. ಬಿಕ್ಕಟ್ಟಿನ ಸಮಯದಲ್ಲೂ ನಿಮಗೆ ಹಣದ ಕೊರತೆ ಆಗುವುದಿಲ್ಲ. ಮೂಲ ಆದಾಯವು ದುಪ್ಪಟ್ಟಾಗಬಹುದು. ಆರೋಗ್ಯಕರ ವಾತಾವರಣದಲ್ಲಿ ದಿನಗಳ ಕಳೆಯುವಿರಿ.

ಕನ್ಯಾ ರಾಶಿ

ದುರ್ಗಾದೇವಿಯ ಮೆಚ್ಚಿನ ರಾಶಿ ಎಂದು ಕನ್ಯಾ ರಾಶಿಯನ್ನು ಕರೆಯಲಾಗಿದೆ. ಕನ್ಯಾ ರಾಶಿಗೆ ಸೇರಿದ ಜನರು ಪ್ರತಿಭಾನ್ವಿತರು ಮತ್ತು ಇತರರಿಗೆ ಸಹಾಯ ಮಾಡಲು ಸಂತೋಷಪಡುತ್ತಾರೆ. ಅವರು ತಮ್ಮ ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ಎದುರಿಸಿದರೂ, ಅದನ್ನು ಮುರಿದು ಯಶಸ್ಸನ್ನು ಪಡೆಯುತ್ತಾರೆ. ಸಂತೋಷದ ದಿನಗಳನ್ನು ನೀವು ನೋಡುತ್ತೀರಿ. ಕೆಲಸದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಬಹುದು.

ಧನು ರಾಶಿ

ಧನುರಾಶಿಯ ಅಧಿಪತಿ ಗುರು, ಗುರುವಿನ ಆಶೀರ್ವಾದ ಪಡೆದ ರಾಶಿಯು ದೇವಿಯ ಇಷ್ಟದ ರಾಶಿಯಾಗುತ್ತದೆ ಎಂದು ಹೇಳಲಾಗಿದೆ. ವ್ಯವಹಾರದಲ್ಲಿರುವವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಇದರಿಂದಾಗಿ ಅವರು ಕಾಲಕಾಲಕ್ಕೆ ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ನಿಮಗೆ ಹಣದ ಹರಿವು ಇರಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Navratri Horoscope: These Zodiac Signs Will Get Pure Blessings For Maa Durga

We can also see that Navratri is celebrated for 11 days in some places. During these 11 days, the Goddess will have special blessings on many zodiac signs.
Story first published: Wednesday, September 24, 2025, 10:15 [IST]
X
Desktop Bottom Promotion