Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ನವರಾತ್ರಿಯಲ್ಲಿ ಇಷ್ಟಾರ್ಥ ನೆರವೇರಲು ನಿಮ್ಮ ರಾಶಿ ಪ್ರಕಾರ ಹೇಗೆ ಪೂಜಿಸಬೇಕು?
ನವರಾತ್ರಿ ಸಂಭ್ರಮ ಅಕ್ಟೋಬರ್ 3ರಿಂದ 11ರವರೆಗೆ ಇರಲಿದೆ. ಈ ಒಂಭತ್ತು ದಿನದಲ್ಲಿ ನವದುರ್ಗೆಯರನ್ನು ಆರಾಧಿಸಲಾಗುವುದು.
ದುರ್ಗೆಯನ್ನು ಆರಾಧಿಸಿದರೆ ಅದರಲ್ಲಿಯೂ ನಮ್ಮ ರಾಶಿ ಪ್ರಕಾರ ಆರಾಧನೆ ಮಾಡಿದರೆ ವೃತ್ತಿ ಬದುಕಿನಲ್ಲಿನ ಸವಾಲುಗಳು, ಮದುವೆ ಕುರಿತ ಸಮಸ್ಯೆಗಳು ಇವೆಲ್ಲಾ ಬಗೆಹರಿಯುವುದು.
ಈ ನವರಾತ್ರಿಗೆ ನಿಮ್ಮ ರಾಶಿ ಪ್ರಕಾರ ದುರ್ಗೆಯನ್ನು ಹೇಗೆ ಆರಾಧಿಸಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಸ್ಕಂದಾ ದೇವಿಯನ್ನು ಆರಾಧಿಸಬೇಕು. ಈ ದಿನ ದುರ್ಗಾ ಚಾಲೀಸ ಪಠಿಸಿ. ಸ್ಕಂದಾ ಅಮ್ಮಳನ್ನು ಭಕ್ತಿಯಿಂದ ಆರಾಧಿಸಿ, ನಿಮ್ಮೆಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಧಾರ್ಮಿಕ ನಂಬಿಕೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ಮಹಾಗೌರಿಯನ್ನು ಆರಾಧಿಸುವುದರಿಂದ ನಿಮ್ಮ ಬದುಕಿನಲ್ಲಿರುವ ಅಡೆತಡೆಗಳು ದೂರಾಗುವುದು. ಮದುವೆ ವಿಳಂಬವಾಗುತ್ತಿದ್ದರೆ ಲಲಿತ ಸಹಸ್ರನಾಮ ಪಠಿಸಿ.
ಮಿಥುನ ರಾಶಿ
ಮಿಥುನ ರಾಶಿಯವರು ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಿದರೆ ಒಳ್ಳೆಯದು. ಈ ದಿನ ದೇವಿಯ ಕವಚ ಮಂತ್ರ ಪಠಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ನವರಾತ್ರಿಯ ಸಮಯದಲ್ಲಿ ಪ್ರತಿದಿನ ಲಲಿತ ಸಹಸ್ರನಾಮ ಪಠಿಸಬೇಕು, ಅಲ್ಲದೆ ನೀವು ಶೈಲಪುತ್ರಿಯನ್ನು ಆರಾಧಿಸುವುದರಿಂದ ನಿಮ್ಮ ಇಷ್ಟಾರ್ಥಗಳು ದುರ್ಗೆ ಕೃಪೆಯಿಂದ ಬಗೆಹರಿಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ದುರ್ಗೆಯ ಮಂತ್ರಗಳನ್ನು ಪ್ರತಿದಿನ ಪಠಿಸಿ ಅಲ್ಲದೆ ಕೂಷ್ಮಾಂಡ ದೇವಿಯನ್ನು ಆರಾಧಿಸಿ. ಈ ದೇವಿ ಸ್ವರೂಪ ಆರಾಧನೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿ ದೇವಿ ಕೃಪೆಯಿಂದ ನೆಮ್ಮದಿ, ಸಂತೋಷ ಹೆಚ್ಚಾಗಲಿದೆ.
ಕನ್ಯಾ ರಾಶಿ
ದುರ್ಗೆ ಪೂಜೆಯ ಸಮಯದಲ್ಲಿ ನೀವು ಲಕ್ಷ್ಮಿ ಮಂತ್ರ ಪ್ರತಿದಿನ ಪಠಣೆ ಮಾಡುವುದರಿಂದ ಆರ್ಥಿಕ ತೊಂದರೆಗಳು ದೂರಾಗಲಿದೆ. ನೀವು ಬ್ರಹ್ಮಚಾರಿಣಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ.
ತುಲಾ ರಾಶಿ
ಮದುವೆ ಕೂಡಿ ಬರುತ್ತಿಲ್ಲ, ಯಾವುದೋ ಒಂದು ಕಾರಣಕ್ಕೆ ಮದುವೆ ವಿಳಂಬವಾಗುತ್ತಿದ್ದರೆ ತುಲಾ ರಾಶಿಯವರು ಮಹಾಗೌರಿಯನ್ನು ಆರಾಧಿಸಿ. ಇದರಿಂದ ಶೀಘ್ರವೇ ಶುಭ ಕಾರ್ಯ ನಡೆಯಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ಬದುಕಿನಲ್ಲಿ ಪ್ರಗತಿಯನ್ನು ಪಡೆಯಲು ಸ್ಕಂದಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ.
ಧನು ರಾಶಿ
ಧನು ರಾಶಿಯವರು ತಮ್ಮ ರಾಶಿಗೆ ಅನುಸಾರ ಚಂದ್ರಘಂಟಾ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಒಳ್ಳೆಯದು. ಯಾವುದೋ ಸಮಸ್ಯೆಯಿಂದ ಬಳಲುತ್ತಿದ್ದರೆ ದುರ್ಗೆಯ ಆರಾಧನೆ ಮಾಡಿದರೆ ಆ ಸಮಸ್ಯೆ ದೂರಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ಉಗ್ರಸ್ವರೂಪಿ ಕಾಳರಾತ್ರಿ ದೇವಿಯ ಆರಾಧನೆ ಮಾಡಬೇಕು, ಅಲ್ಲದೆ ನಿವಾರಣ ಮಂತ್ರ ಪಠಣೆ ಮಾಡುವುದರಿಂದ ಋಣಾತ್ಮಕ ಶಕ್ತಿ ದೂರಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ದೇವಿ ಕವಚ ಮಂತ್ರ ಪಠಣೆ ಮಾಡಿದರೆ ಒಳ್ಳೆಯದು, ಕುಂಭ ರಾಶಿಯವರು ಕಾಳರಾತ್ರಿ ದೇವಿಯ ಆರಾಧನೆ ಮಾಡುವುದರಿಂದ ನಿಮ್ಮ ಇಷ್ಟಾರ್ಥ ನೆರವೇರಲಿದೆ.
ಮೀನ ರಾಶಿ
ಮೀನ ರಾಶಿಯವರು ಚಂದ್ರಘಂಟ ದೇವಿಯ ಆರಾಧನೆ ಮಾಡಿ. ದುರ್ಗಾ ಮಂತ್ರವನ್ನು ಪಠಿಸಿ.
ನವ ರಾತ್ರಿಯ ಯಾವ ದಿನ ಯಾವ ದೇವರನ್ನು ಆರಾಧಿಸಲಾಗುವುದು
ನವರಾತ್ರಿಯ ಮೊದಲನೇದಿನ ಅಂದರೆ ಅಕ್ಟೋಬರ್ 3ರಂದು ಶೈಲಪುತ್ರಿಯನ್ನು ಅಲಂಕರಿಸಿ ಆರಾಧಿಸಲಾಗುವುದು.
ನವರಾತ್ರಿ 2ನೇ ದಿನ, ಅಕ್ಟೋಬರ್ 4ರಂದು ಬ್ರಹ್ಮಚಾರಿಣಿಯನ್ನು ಆರಾಧನೆ ಮಾಡಲಾಗುವುದು.
ನವರಾತ್ರಿಯ 3ನೇ ದಿನ ಅಕ್ಟೋಬರ್ 5ರಂದು ಚಂದ್ರಘಂಟ ದೇವಿಯ ಆರಾಧನೆ ಮಾಡಲಾಗುವುದು.
ನವರಾತ್ರಿ 4ನೇ ದಿನ ಅಕ್ಟೋಬರ್ 6ರಂದು ಕೂಷ್ಮಾಂಡ ದೇವಿಯ ಆರಾಧನೆ ಮಾಡಲಾಗುವುದು
ನವರಾತ್ರಿ 5ನೇ ದಿನ ಅಕ್ಟೋಬರ್ 7ರಂದು ಸ್ಕಂದ ಮಾತೆಯ ಆರಾಧಾನೆ ಮಾಡಲಾಗುವುದು
ನವರಾತ್ರಿ 6ನೇ ದಿನ ಕಾತ್ಯಾಯನಿ ದೇವಿಯನ್ನು ಆರಾಧಿಸಲಾಗುವುದು
ನವರಾತ್ರಿಯ 7ನೇ ದಿನ ಅಕ್ಟೋಬರ್ 9ರಂದು ಕಾಳರಾತ್ರಿ ದೇವಿಯ ಆರಾಧನೆ ಮಾಡಲಾಗುವುದು.
ನವರಾತ್ರಿ 8ನೇ ದಿನ ಅಕ್ಟೋಬರ್ 10ಕ್ಕೆ ಮಹಾಗೌರಿಯನ್ನು ಆರಾಧಿಸಲಾಗುವುದು.
ನವರಾತ್ರಿ 9ನೇ ದಿನ ಅಕ್ಟೋಬರ್ 11ರಂದು ಸಿದ್ಧಿದಾತ್ರಿ ದೇವಿಯನ್ನು ಆಾಧನೆ ಮಾಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications