Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಗುರು-ಶುಕ್ರನಿಂದ ಇಂದು ನವಪಂಚಮ ಯೋಗ: ಹಣಕಾಸು ವಿಚಾರದಲ್ಲಿದೆ ಅದೃಷ್ಟ!
ವೈದಿಕ ಜ್ಯೋತಿಷ್ಯದ ಪ್ರಕಾರ, ಒಂಬತ್ತು ಗ್ರಹಗಳ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಅದ್ರಲ್ಲೂ ಗುರು ಗ್ರಹದ ಚಲನೆಯು ಬಹಳ ಪ್ರಮುಖ ಬದಲಾವಣೆಗಳು ಹಾಗೆ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದನ್ನು ನೋಡಬಹುದು. ಸಾಮಾನ್ಯವಾಗಿ ಎಲ್ಲಾ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದಲ್ಲೂ ಈ ಬದಲಾವಣೆಗಳು ಬಹಳ ಮುಖ್ಯವಾಗಿರಲಿದೆ.
ಗುರುವಿನ ಚಲನೆಯನ್ನು ದೊಡ್ಡ ಲಾಭದ ಗ್ರಹವಾಗಿಯೂ ನೋಡಲಾಗುತ್ತದೆ. ಅದ್ರಲ್ಲೂ ಗುರುವು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ. ಪ್ರಸ್ತುತ ಗುರು ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಹೀಗಾಗಿ ಗುರು ಈ ರಾಶಿಯಲ್ಲಿರುವ ಸಮಯದಲ್ಲಿ ಹಲವು ರಾಶಿಗಳ ಮೇಲೆ ಅದರ ಪ್ರಭಾವ ಉಂಟುಮಾಡುತ್ತಾನೆ. ಇದೇ ಸಮಯದಲ್ಲಿ ಶುಕ್ರನೊಂದಿಗೆ ಸಂಯೋಗವಾಗುತ್ತಾನೆ.

ಗುರು ಹಾಗೂ ಶುಕ್ರನು ಮಿಥುನ ರಾಶಿಯ ಚಲನೆಯ ನಡುವೆ ಇಂದು ಸಂಯೋಗವಾಗುತ್ತಾನೆ. ಇದು ಅಪರೂಪದ ನವಪಂಚಮ ಯೋಗಕ್ಕೆ ಕಾರಣವಾಗಲಿದೆ. ಈ ಯೋಗದ ಸಮಯದಲ್ಲಿ, ಗುರು ಮತ್ತು ಶುಕ್ರ ಪರಸ್ಪರ 120 ಡಿಗ್ರಿಗಳಲ್ಲಿರುತ್ತಾರೆ. ಈ ರಾಜಯೋಗದಿಂದಾಗಿ, ಕೆಲವು ರಾಶಿ ಜನರಿಗೆ ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮ ಲಾಭವನ್ನು ಪಡೆಯುತ್ತವೆ.
ಗುರು ಹಾಗೂ ಶುಕ್ರನ ಈ ರೀತಿಯ ಚಲನೆಯು ಹಲವು ರಾಶಿಯವರಿಗೆ ಶುಭದಾಯಕವಾಗಲಿದೆ. ನಾವಿಲ್ಲಿ ಯಾವ ರಾಶಿಯವರಿಗೆ ಅನುಕೂಲಕರ ವಾತಾವರಣ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೀನ ರಾಶಿ
ಗುರು ಮತ್ತು ಶುಕ್ರನಿಂದ ಉಂಟಾಗುವ ಈ ಅಪರೂಪದ ನವಪಂಚಮ ರಾಜಯೋಗದಿಂದಾಗಿ ಮೀನ ರಾಶಿಯ ಜನರು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸವು ಯಶಸ್ವಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿಮಗೆ ಉತ್ತಮ ಭೌತಿಕ ಸುಖಗಳು ಸಿಗಲಿವೆ. ಉದ್ಯೋಗದಲ್ಲಿನ ಅಡ್ಡಿಗಳು ಅಥವಾ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಲಿದೆ. ಹೊಸ ಆಲೋಚನೆಗಳು ಹಾಗೆ ಹೊಸ ಕೆಲಸಗಳ ಕೈಗೊಳ್ಳಲು ಇದು ಬಹಳ ಸೂಕ್ತ ಸಮಯ ಆಗಿರಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.
ಕರ್ಕಾಟಕ ರಾಶಿ
ಗುರು ಮತ್ತು ಶುಕ್ರರಿಂದ ರೂಪುಗೊಂಡ ನವಪಂಚಮ ಯೋಗವು ಕರ್ಕಾಟಕ ರಾಶಿಯವರ ಅದೃಷ್ಟ ತರಲಿದೆ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ವಿಚಾರದಲ್ಲಿನ ದೊಡ್ಡ ಸಂಕಷ್ಟವೊಂದು ದೂರಾಗಲಿದೆ. ಅನೇಕರಲ್ಲಿ ಹಳೆಯ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ಉದ್ಯೋಗ ಸಂಬಂಧಿತ ವಿಚಾರ ಅಥವಾ ವಿವಾಹ ಸಂಬಂಧಿ ಅಡ್ಡಿಗಳು ಕೂಡ ದೂರಾಗಲಿದೆ.
ಕುಂಭ ರಾಶಿ
ಗುರು ಮತ್ತು ಶುಕ್ರರಿಂದ ರೂಪುಗೊಂಡ ನವಪಂಚಮ ರಾಜಯೋಗವು ಕುಂಭ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಅದೃಷ್ಟವು ಈ ಸಮಯದಲ್ಲಿ ಹೊಳೆಯಲಿದೆ. ಕೆಲಸದಲ್ಲಿ ಉತ್ತಮ ಯಶಸ್ಸು ಮತ್ತು ಲಾಭ ಸಿಗುತ್ತದೆ. ವ್ಯವಹಾರ ಆರಂಭಿಸಲು ನೀವು ದೊಡ್ಡ ಒಪ್ಪಂದಗಳ ಮಾಡಿಕೊಳ್ಳುವಿರಿ. ಉನ್ನತ ಅಧಿಕಾರಿಗಳಿಂದ ನಿಮಗೆ ಪ್ರಶಂಸೆಗಳಿವೆ. ಉತ್ತಮ ಆದಾಯ ಪಡೆಯುವ ಸಮಯವಿದು, ಸ್ವಂತ ಉದ್ಯೋಗದಲ್ಲಿ ನಿಮಗೆ ಲಾಭವಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ಅವಧಿಯು ಅದಕ್ಕೆ ಅನುಕೂಲಕರವಾಗಿರುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications











