Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Naga Panchami: ಶುಕ್ಲ ಪಕ್ಷದಲ್ಲಿ ಅಪರೂಪದ ಪಂಚಯೋಗ: ಈ ರಾಶಿಯವರ ಜೀವನ ಬದಲಾಗೋ ನಿರೀಕ್ಷೆ!
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಸರ್ಪದೇವತೆಯನ್ನು ಈ ಸಮಯದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸ ಮಾಡುವುದು ಹಾಗೆ ನಾಗರ ಹಾವಿನ ಪೂಜೆ ಮಾಡುವುದರಿಂದ ನಾಗರ ದೋಷ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಹಿಂದೂಗಳಿಗೆ ಇದು ಅತ್ಯಂತ ಪವಿತ್ರ ಹಾಗೆ ಪ್ರಮುಖ ಹಬ್ಬವಾಗಿದೆ.
ಇನ್ನು ಈ ಶುಕ್ಲ ಪಕ್ಷದಲ್ಲಿ ಹಲವು ಗ್ರಹಗಳ ಚಲನೆ ಹಾಗೂ ಅಪರೂಪದ ಯೋಗಗಳು ಉಂಟಾಗುವುದು ನಾವು ನೋಡಬಹುದು. ಈ ಬಾರಿ ನಾಗಪಂಚಮಿಯಂದು 5 ರೀತಿಯ ಅಪರೂಪದ ಯೋಗಗಳು ರೂಪುಗೊಳ್ಳಲಿವೆ. ನಾಗರ ಪಂಚಮಿಯ ದಿನದಂದು ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಶುಕ್ರ ಮತ್ತು ಬುಧ ಗ್ರಹಗಳು ಒಟ್ಟಾಗಿ ಲಕ್ಷ್ಮಿ ನಾರಾಯಣ ಯೋಗವನ್ನು ರೂಪಿಸುತ್ತವೆ.

ಹಾಗೆ ಈ ದಿನ ಶನಿದೇವನು ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿದ್ದಾಗ ಶಶ್ ರಾಜಯೋಗಕ್ಕೆ ಕಾರಣವಾಗುತ್ತಾನೆ. ಚಂದ್ರದೇವನು ಕನ್ಯಾರಾಶಿಯಲ್ಲಿರುತ್ತಾನೆ ಮತ್ತು ರಾಹುವಿನೊಂದಿಗೆ ಸಮಸಪ್ತಕ ಯೋಗ ರೂಪಿಸುತ್ತಾನೆ. ಈ ರೀತಿ ಶುಭ ಹಾಗೂ ಸಿದ್ದ ಯೋಗಗಳು ಈ ನಾಗರ ಪಂಚಮಿ ಎಂದು ರೂಪುಗೊಳ್ಳುತ್ತವೆ. ಹೀಗಾಗಿ ಈ ರೀತಿಯ ಯೋಗವು ಹಲವು ರಾಶಿಗಳಲ್ಲಿ ಲಾಭಕ್ಕೆ ಕಾರಣವಾಗುತ್ತವೆ. ಹಾಗೆ ಅಪರೂಪಕ್ಕೆ ಈ ಯೋಗ ಸಂಭವಿಸುವುದು ಹಲವು ರಾಶಿಯವರಿಗೆ ಅನುಕೂಲವಾಗುತ್ತಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ನಾಗಪಂಚಮಿಯ ದಿನದಂದು 5 ರೀತಿಯ ರಾಜ್ಯಯೋಗದ ಕಾರಣದಿಂದಾಗಿ ಬಹಳ ಶುಭಕರವಾಗುತ್ತಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಯಾವುದಾದರು ಬಹಳ ಮುಖ್ಯವಾದ ಕೆಲಸಗಳು ಅರ್ಧದಲ್ಲೇ ಬಿಟ್ಟಿದ್ದರೆ ಈ ಸಮಯದಲ್ಲಿ ಪೂರ್ಣವಾಗುತ್ತವೆ. ವೃತ್ತೀಪರರು ಹಲವು ಲಾಭ ಪಡೆಯುತ್ತಾರೆ, ವೇತನ, ಬಡ್ತಿ, ವರ್ಗಾವಣೆಯ ವಿಚಾರವಾಗಿಯೂ ನಿಮಗೆ ಅತ್ಯಂತ ಶುಭಕರ ದಿನಗಳಾಗಲಿದೆ. ನಿಮ್ಮ ಹೊಸ ಆದಾಯದ ಮೂಲವು ಪ್ರಗತಿಯಾಗಲಿದೆ. ಹಣಕಾಸಿನ ವಿಚಾರದಲ್ಲೂ ಯಾವಾಗಲು ಶುಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ನಾಗರ ಪಂಚಮಿಯಂದು ರೂಪುಗೊಂಡ ರಾಜ್ಯಯೋಗಗಳು ಲಾಭ ತರಲಿವೆ. ಆದಾಯ ಹೆಚ್ಚಳದಿಂದ ಹಿಡಿದು ಆರೋಗ್ಯ ಲಾಭದ ನಿರೀಕ್ಷೆ ಕೂಡ ಇಡಬಹುದು. ಹಣಕಾಸಿನ ಲಾಭದಿಂದ ನಿಮ್ಮಲ್ಲಿ ಸಂತಸ ಇರಲಿದೆ, ದೇವಾಲಯ ದರ್ಶನ, ಪ್ರವಾಸದಂತಹ ಕೆಲಸದಲ್ಲಿ ಶುಭವಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನಗಳು ಆರಂಭವಾಗುತ್ತಿವೆ. ಅವಿವಾಹಿರಿಗೆ ವಿವಾಹ ಯೋಗದಂತಹ ಲಾಭವಿದೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಉದ್ಯೋಗ ಲಾಭವಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಲಾಭದಾಯಕ ದಿನ. ನಿಮ್ಮ ಉಳಿತಾಯ, ಹೂಡಿಕೆ ಹೆಚ್ಚಾಗುವ ಸಮಯ.
ಸಿಂಹ ರಾಶಿ
ನಾಗ ಪಂಚಮಿಯಂದು ರೂಪುಗೊಳ್ಳುವ ಶುಭ ಯೋಗವು ಸಿಂಹ ರಾಶಿ ಜನರಿಗೆ ಬಹಳ ಫಲಪ್ರದವಾಗಬಹುದು. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಹೊಸದಾಗಿ ನೀವು ಯಾವುದೇ ಕೆಲಸ ಕಾರ್ಯ ಆರಂಭಿಸಿದರೂ ಅದರಿಂದ ಲಾಭ ಪಡೆಯಬಹುದು. ಈ ಸಮಯದಲ್ಲಿ ವಾಹನ ಲಾಭ, ಹಣಲಾಭ, ದುಬಾರಿ ವಸ್ತು ಲಾಭದ ನಿರೀಕ್ಷೆ ಇಡಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕಠಿಣ ಪರಿಶ್ರಮದ ಫಲ ಸಿಗುತ್ತದೆ ಮತ್ತು ಆದಾಯ ಎರಡು ಪಟ್ಟು ಹೆಚ್ಚಳವನ್ನು ನೋಡಬಹುದು. ಆಸ್ತಿ, ಮನೆ ವಿಚಾರದಲ್ಲಿ ಶುಭದಾಯಕ ದಿನಗಳಿವೆ. ಚಿನ್ನ ಬೆಳ್ಳಿ ಖರೀದಿಗೆ ಶುಭ ಕಾಲ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



