Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಮೇ 19ಕ್ಕೆ ಮೋಹಿನಿ ಏಕಾದಶಿ: ಪಾರಣ ಸಮಯ ಯಾವಾಗ? ಮೋಹಿನಿ ಏಕಾದಶಿಗೂ ಅಯ್ಯಪ್ಪಸ್ವಾಮಿಗೂ ಇದೆ ಸಂಬಂಧ
ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ. ಈ ಮೇ ತಿಂಗಳ 19ರಂದು ಮೋಹಿನಿ ಏಕಾದಶಿ. ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಲಾಗುವುದು.

24 ಏಕಾದಶಿಗಳಲ್ಲಿ ಮೋಹಿನಿ ಏಕಾದಶಿ ತುಂಬಾನೇ ವಿಶೇಷವಾಗಿದೆ. ಈ ವರ್ಷ ಭಾನುವಾರದಂದು ಬಂದಿದೆ. ಯಾರು ಮೋಹಿನಿ ಏಕಾದಶಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೋ ಅವರ ಎಲ್ಲಾ ಕಷ್ಟಗಳು ದೂರಾಗುವುದು, ಅವರಿಗೆ ಮೋಕ್ಷ ಸಿಗುವುದು. ಈ ದಿನ ವ್ರತ ಕತೆ ಕೇಳುವುದರಿಂದ ಸಾವಿರ ಗೋವನ್ನು ದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುವುದು ಎಂಬ ನಂಬಿಕೆ.
ಮೋಹಿನಿ ಏಕಾದಶಿಯಂದು ಉಪವಾಸ ನಿಯಮ
ಏಕಾದಶಿಯಂದು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು, ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು. ನಂತರ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು, ಬಳಿಕ ವಿಷ್ಣುವಿಗೆ ಹೊಸ ವಸ್ತ್ರ ತೊಡಿಸಿ, ಹಳದಿ ಬಣ್ಣದ ಹೂವುಗಳಿಂದ ಅಲಂಕರಿಸಿ, ಇತರ ಹೂವುಗಳನ್ನು ಬಳಸಬಹುದು, ಆದರೆ ಹಳದಿ ತುಂಬಾ ಪ್ರಿಯವಾದ ಬಣ್ಣ.
ನಂತರ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ, ಪೂಜೆಗೆ ಹಳದಿ ಬಣ್ಣದ ಹಣ್ಣುಗಳು ಅಂದರೆ ಬಾಳೆಹಣ್ಣು , ಮತ್ತಿತರ ಹಣ್ಣುಗಳನ್ನು ಇರಿಸಿ. ನೀವು ಶ್ರೀ ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗ ಕಡ್ಡಾಯವಾಗಿ ತುಳಸಿ ಹಾಕಿ ಅರ್ಪಿಸಬೇಕು. ತುಳಸಿ ಬಳಸದಿದ್ದರೆ ನೀವು ಅರ್ಪಿಸಿದ ಪ್ರಸಾದ ದೇವರಿಗೆ ತಲುಪುವುದಿಲ್ಲ. ಶ್ರೀ ವುಷ್ಣು ಜೊತೆಗೆ ಲಕ್ಷ್ಮಿಯನ್ನೂ ಪೂಇಸಬೇಕು.
ವ್ರತ ಕತೆ
ಸಮುದ್ರ ಮಂಥನ ಸಮಯದಲ್ಲಿ ಅಮೃತ ಉಕ್ಕುತ್ತದೆ, ಆದರೆ ಅದನ್ನು ಕುಡಿಯಲು ದೇವತೆಗಳು ಹಾಗೂ ರಾಕ್ಷಸರು ಸಮರ ಮಾಡುತ್ತಾರೆ. ಆವಾಗ ದೇವತೆಗಳು ಶ್ರೀವಿಷ್ಣುವಿನ ಮೊರೆ ಹೋಗುತ್ತಾರೆ, ಶ್ರೀ ವಿಷ್ಣು ಮೋಹಿನಿಯ ರೂಪ ತಾಳಿ, ರಾಕ್ಷಸರನ್ನು ಮೋಹಗೊಳಿಸುತ್ತಾನೆ, ಇದರಿಂದ ದೇವತೆಗಳಿಗೆ ಅಮೃತ ಸಿಗುತ್ತದೆ. ಶ್ರೀ ವಿಷ್ಣು ಮೋಹಿನಿ ರೂಪದಿಂದ ಜನಿಸಿದ ಮಗುವೇ ಅಯ್ಯಪ್ಪಸ್ವಾಮಿ.
ಮೋಹಿನಿ ಏಕಾದಶಿ ಪೂಜೆ ಸಮಯ
ಏಕಾದಶಿ ಪ್ರಾರಂಭ ಮೇ 18, ಬೆಳಗ್ಗೆ 11:12ರಿಂದ
ಏಕಾದಶಿ ತಿಥಿ ಮುಕ್ತಾಯ: ಮೇ 18 ಮಧ್ಯಾಹ್ನ 1:5
ಇದರೊಳಗಡೆ ಪೂಜೆ ಸಲ್ಲಿಸಿ, ದಿನವಿಡಿ ಉಪವಾಸ ನಿಯಮ ಪಾಲಿಸಿ
ಪಾರಣ ಸಮಯ
ಮೇ 20 ಬೆಳಗ್ಗೆ 05:28ರಿಂದ 08:12ರವರೆಗೆ
ಈ ಮಂತ್ರಗಳನ್ನು ಪಠಿಸಿ
ಓಂ ನಮೋ ನಾರಾಯಣಾಯ
ಉಪವಾಸ ಮಾಡಿದವರು ಈ ಸಮಯದಲ್ಲಿ ಉಪವಾಸ ಮುರಿಯಬಹುದು ನೋಡಿ.
ಈ ಮಂತ್ರವನ್ನು ದಿನವಿಡೀ ಪಠಿಸಿ;
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಈ ಮಂತ್ರ ಪಠಣೆ ಮಾಡುವುದು ದೈರ್ಯ ಹೆಚ್ಚಾಗುವುದು, ಆತ್ಮವಿಶ್ವಾಸಬರುವುದು.
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ ಈ ಮಂತ್ರ ಪಠಣೆ ಮಾಡುವುದರಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ ಚ ಸಖಾ ತ್ವಮೇವ ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ
ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ | ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||
ಈ ಮಂತ್ರಗಳನ್ನು ನೀವು ನಿತ್ಯ ಪಠಣೆ ಮಾಡುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಶ್ರೀ ವಿಷ್ಣುವಿನ ಕೃಪೆಯಿಂದಾಗಿ ನಿಮ್ಮ ಕಷ್ಟಗಳು ದೂರಾಗಲಿದೆ, ಬದುಕಿನಲ್ಲಿ ಖುಷಿ, ನೆಮ್ಮದಿ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
