Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮೇಷ ಸಂಕ್ರಾಂತಿ: ಸೂರ್ಯ ಸಂಚಾರದಂದು ಈ ಮಂತ್ರ ಪಠಣೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು
ಸೂರ್ಯ ರಾಶಿ ಬದಲಾವಣೆ ಮಾಡಿದ ದಿನ, ಭಾನುವಾರದ ದಿನ ಸೂರ್ಯ ಮಂತ್ರ ಪಠಣೆ ಮಾಡಿದರೆ ತುಂಬಾನೇ ಒಳ್ಳೆಯದು, ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಮಂತ್ರ ಪಠಣೆ ಮಾಡುವುದರಿಂದ ಆರೋಗ್ಯ, ಸಂಪತ್ತು ವೃದ್ಧಿಸುವುದು. ಇದೀಗ ಸೂರ್ಯ ಮೊದಲ ರಾಶಿಯಾದ ಮೇಷ ರಾಶಿಗೆ ಸಂಚರಿಸಲಿದೆ. ಏಪ್ರಿಲ್ 13 ಕ್ಕೆ ಸೂರ್ಯ ಮೇಷ ರಾಶಿಗೆ ಸಂಚರಿಸಿದಾಗ ಈ ಮಂತ್ರ ಪಠಿಸಿ:

ಸೂರ್ಯ ಸಂಚಾರದಂದು ಈ ರೀತಿ ಮಾಡಿ
ಸೂರ್ಯ ಸಂಚಾರದಂದು ಸೂರ್ಯೋದಯಕ್ಕೆ ಮುನ್ನ ಎದ್ದೇಳಿ
ನಂತರ ಸ್ನಾನ ಮಾಡಿ ಕೆಂಪು ವಸ್ತ್ರ ಧರಿಸಿ
ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು
ತಾಮ್ರದ ಪಾತ್ರೆಗೆ ಕೆಂಪು ಹೂವು, ಕುಂಕುಮ ಹಾಕಿ ಆರ್ಘ್ಯ ಅರ್ಪಿಸಿ
ಈ ಮಂತ್ರಗಳನ್ನು ಪಠಿಸಿ:
ಸೂರ್ಯ ಮಂತ್ರ :
ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ,
ಆಯುರಾರೋಗ್ಯ ಮೈಶ್ವೈರ್ಯಂ ದೇಹಿ ದೇವಃ ಜಗತ್ಪತೇ
ಸೂರ್ಯ ನಮಸ್ಕಾರ ಮಂತ್ರ :
ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ನೀವು ಸೂರ್ಯ ನಮಸ್ಕಾರ ಮಾಡುವಾಗ ಈ ಮಂತ್ರ ಪಠಿಸಿ, ಪ್ರತಿಯೊಂದು ಮಂತ್ರವೂ ಸೂರ್ಯ ಶಕ್ತಿಯಿಂದ ನಿಮ್ಮ ಆರೋಗ್ಯ ಹೆಚ್ಚಾಗುವಂತೆ ಮಾಡುತ್ತದೆ.
ಸೂರ್ಯ ಬೀಜ ಮಂತ್ರ : ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್
ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್
ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಸೂರ್ಯ ಮಂತ್ರ ಪಠಣೆಯಿಂದ ದೊರೆಯುವ ಪ್ರಯೋಜನಗಳು
ಸೂರ್ಯ ಮಂತ್ರ ಪಠಣೆ ಮಾಡುವುದರಿಮದ ದೈವಿಕ ಭಾವನೆ ಉಂಟಾಗುವುದು, ಸೂರ್ಯ ನಮಗೆ ಶಕ್ತಿ ತುಂಬುತ್ತಾನೆ.
ಋಣಾತ್ಮಕ ಶಕ್ತಿ ಕಡಿಮೆಯಾಗುವುದು.
ಕಾಯಿಲೆ ಗುಣಪಡಿಸಲು ಸಹಕಾರಿ
ಈ ಮಂತ್ರ ಪಠಣೆ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದು
ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ದೇಹದಲ್ಲಿ ಚೈತನ್ಯ ಹೆಚ್ಚಾಗುವುದು, ದಿನವಿಡೀ ಲವಲವಿಕೆಯಿಂದ ಕೆಲಸ ಕಾರ್ಯ ಮಾಡಲು ಸಾಧ್ಯವಾಗುವುದು.
ಮನಸ್ಸಿನಲ್ಲಿ ಧೈರ್ಯ ಹೆಚ್ಚಾಗುವುದು, ನಿಮ್ಮ ಕೆಲಸ ಕಾರ್ಯದಲ್ಲಿ ಗಮನಹರಿಸಲು ಸಾಧ್ಯವಾಗುವುದು. ಅಲ್ಲದೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು.
ರಿಗ್ವೇದ ಏನು ಹೇಳುತ್ತದೆ?
ರಿಗ್ವೇದವೂ ಯಾರು ಸೂರ್ಯ ಹುಟ್ಟುವ ಮೊದಲು ಎದ್ದು ಸೂರ್ಯೋದಯವನ್ನು ನೋಡುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗಲು ಸೂರ್ಯನ ಶಕ್ತಿ ಮಾಡುತ್ತದೆ ಎಂದು ಹೇಳಲಾಗುವುದು. ಸೂರ್ಯ ದೈಹಿಕ, ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೂರ್ಯ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುವುದು, ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗುವುದು. ದೇಹದಲ್ಲಿನ ಕಾಯಿಲೆ ಗುಣಪಡಿಸಲು ಸೂರ್ಯದೇವ ಸಹಾಯ ಮಾಡುತ್ತಾನೆ ಎಂದು ಹೇಳಲಾಗುವುದು.
ಆರ್ಘ್ಯ ಹೇಗೆ ಅರ್ಪಿಸಬೇಕು?
ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ, ಅದಕ್ಕೆ ರಕ್ತ ಚಂದನ, ಕುಂಕುಮ, ಕೆಂಪು ಹೂವು ಹಾಕಿ ಸೂರ್ಯೋದಯದ ಸಮಯದಲ್ಲಿ ಪೂರ್ವ ದಿಕ್ಕಿಗೆ ಆರ್ಘ್ಯ ಅರ್ಪಿಸಬೇಕು. ಆರ್ಘ್ಯವನ್ನು ಗಿಡದ ಬಳಿ ನಿಂತು ಅರ್ಪಿಸುವುದರಿಂದ ಆ ನೀರು ಗಿಡಕ್ಕೆ ದೊರೆಯುವುದು. ಆರ್ಘ್ಯ ಅರ್ಪಿಸುವಾಗ ಸೂರ್ಯ ಮಂತ್ರ 11 ಬಾರಿ ಪಠಿಸಿ. ನೀವು ಸೂರ್ಯ ಮಂತ್ರವನ್ನು ಪ್ರತಿದಿನ ಪಠಣೆ ಮಾಡಿದರೆ ಇಷ್ಟಾರ್ಥಗಳು ನೆರವೇರುವುದು, ಆರೋಗ್ಯ ತುಂಬಾನೇ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
