Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ: ಇವರಲ್ಲಿ ರಾಜಯೋಗ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆ ಹಾಗೂ ಅವುಗಳ ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಸಾಮಾನ್ಯವಾಗಿ ಪ್ರತಿಯೊಂದು ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರಲಿದೆ. ಹಾಗೆ ಕೆಲವು ಗ್ರಹಗಳು ಒಂದೇ ರಾಶಿಗೆ ಚಲಿಸಿದಾಗ ಅಲ್ಲಿ ವಿಶೇಷ ಯೋಗಗಳು ರೂಪುಗೊಳ್ಳುತ್ತದೆ. ಅದರಲ್ಲೂ ಶುಕ್ರ ಹಾಗೂ ಬುಧ ಗ್ರಹಗಳು ಒಟ್ಟಿಗೆ ಸೇರಿದಾಗ ಅಪರೂಪದ ಯೋಗಕ್ಕೆ ಕಾರಣವಾಗಲಿದೆ.
ಈಗ ಮೇ ತಿಂಗಳಲ್ಲಿ ಶುಕ್ರ ಮತ್ತು ಬುಧ ಒಟ್ಟಾಗಿ ಸೇರಿ ಲಕ್ಷ್ಮಿ ನಾರಾಯಣ ರಾಜ ಯೋಗವನ್ನು ರೂಪಿಸುತ್ತಾರೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಲಕ್ಷ್ಮಿ ಅನುಗ್ರಹ ಇರುವುದು ನೋಡುಬಹುದು. ಲಕ್ಷ್ಮಿ ನಾರಾಯಣ ರಾಜಯೋಗವು ಕೆಲವು ರಾಶಿ ಜನರ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗದಿಂದ ಉಂಟಾಗುತ್ತದೆ.

ಮೇ ತಿಂಗಳಲ್ಲಿ ಬುದ್ಧಿಶಕ್ತಿಯನ್ನು ನೀಡುವ ಬುಧ ಮತ್ತು ಸಂಪತ್ತನ್ನು ನೀಡುವ ಶುಕ್ರ, ಮೇಷ ರಾಶಿಯಲ್ಲಿ ಸಂಯೋಗವಾಗುತ್ತವೆ. ಇದರಿಂದ ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿಗೆ ಕಾರಣವಾಗಲಿದೆ. ಹಾಗಾದ್ರೆ ಈ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಧನಾತ್ಮಕ ಫಲಿತಾಂಶಗಳನ್ನು ತರಲಿದೆ. ಈ ರಾಜಯೋಗವು ಅನಿರೀಕ್ಷಿತ ಮೂಲದಿಂದ ಸಂಪತ್ತು ವೃದ್ಧಿಗೆ ಕಾರಣವಾಗಲಿದೆ. ವ್ಯವಹಾರ ಹಾಗೂ ಕೆಲಸದಲ್ಲಿ ಉತ್ತಮ ಯಶಸ್ಸು ಹಾಗೆ ವ್ಯಾಪಾರಿಗಳಲ್ಲಿ ಲಾಭದಾಯಕ ದಿನಗಳ ನೋಡಲಿದ್ದೀರಿ. ಇದು ಹಲವರಲ್ಲಿ ಶಾಂತಿ ಹಾಗೂ ನೆಮ್ಮದಿಯ ದಿನಗಳಿಗೆ ಕಾರಣವಾಗಲಿದೆ. ನಿಮ್ಮಲ್ಲಿದ್ದ ವೈಯಕ್ತಿಕ ಸಮಸ್ಯೆಯೊಂದು ಶೀಘ್ರ ಬಗೆಹರಿಯಲಿದೆ. ಹೊಸದಾಗಿ ಆರಂಭಿಸಿದ್ದ ಉದ್ಯಮ ಅಥವಾ ಆದಾಯಕ್ಕಾಗಿ ನೀವು ಹುಡುಕಿರುವ ಹೊಸದಾದ ಮಾರ್ಗವು ನಿಮಗೆ ಮೌಲ್ಯಯುತ ಮಾರ್ಗವಾಗಬಹುದು. ಅದರಿಂದ ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ಆರೋಗ್ಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸುಧಾರಣೆ ನೋಡಬಹುದು. ಹಾಗೆ ಎಲ್ಲಾ ವಿಚಾರವಾಗಿ ನಿಮ್ಮ ಅಡೆತಡೆಗಳು ನಿವಾರಣೆಯಾಗಲಿದೆ.
ಮಕರ ರಾಶಿ
ಮಕರ ರಾಶಿ ಲಕ್ಷ್ಮಿ ನಾರಾಯಣ ರಾಜಯೋಗವು ಅದ್ಭುತ ಬದಲಾವಣೆಗಳ ತರಲಿದೆ. ಮಕರ ರಾಶಿಯ 4ನೇ ಮನೆಯಲ್ಲಿ ಈ ಅಪರೂಪದ ಯೋಗ ಉಂಟಾಗುವುದು ನೋಡಬಹುದು. ಹೀಗಾಗಿ ಮಕರ ರಾಶಿಯವರ ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ನಿಮ್ಮ ಬಹಳ ಸಮಯದ ಕನಸೊಂದು ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯವಾಗಲಿದೆ. ಹಾಗೆ ಈ ಸಮಯದಲ್ಲಿ ಬಹಳ ಖರ್ಚು ಮಾಡುವ ಬದಲಾಗಿ ಉಳಿತಾಯ ಮಾಡುತ್ತೀರಿ. ಇದರಿಂದ ಭವಿಷ್ಯದ ವಿಚಾರಗಳು ಸುಲಭವಾಗಿ ಮುಂದುವರೆಯಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಅದ್ಭುತ ಕಾಲಕ್ಕೆ ಕಾರಣವಾಗಲಿದೆ. ನೀವು ಯಾವುದಾದರು ಆಸ್ತಿ ಸಂಬಂಧಿ ಸಮಸ್ಯೆ ಅಥವಾ ಹಣಕಾಸು ವ್ಯವಹಾರ ಕುರಿತ ಸಮಸ್ಯೆಯಲ್ಲಿ ಸಿಲುಕಿದ್ದರೆ ಈ ವೇಳೆಯಲ್ಲಿ ನಿವಾರಣೆಯಾಗುವುದು ನೋಡಬಹುದು. ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಬಾಕಿ ಇರುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಇದು ಅವರ ಜೀವನದ ಸುವರ್ಣಯುಗವಾಗಿರುತ್ತದೆ. ಹೊಸ ಮನೆ ಖರೀದಿ, ನಿರ್ಮಾಣ, ನಿವೇಶ ಖರೀದಿ, ಹೂಡಿಕೆಯಂತ ಕೆಲಸಕ್ಕೆ ಮುಂದಾಗುವುದು ಲಾಭದಾಯಕವಾಗಲಿದೆ. ಬಹಳ ಸಮಯದ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications