Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಿವರಾತ್ರಿಯಲ್ಲಿ ಬುಧ-ಶುಕ್ರ ಸಂಯೋಗ: ಅಪರೂಪದ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ!
ಫೆಬ್ರವರಿಯಲ್ಲಿ ಹಲವು ಗ್ರಹಗತಿಗಳಲ್ಲಿ ಬದಲಾವಣೆಯಾಗುವುದು ನಾವು ನೋಡಬಹುದಾಗಿದೆ. ಅದರಲ್ಲೂ ಶಿವರಾತ್ರಿಯ ಸಮೀಪದಲ್ಲಿ ಹಲವು ಬಗೆಯ ಗ್ರಹಗಳ ಬದಲಾವಣೆಯು ಮತ್ತಷ್ಟು ರಾಶಿಗಳಲ್ಲಿ ಲಾಭದಾಯಕ ಪರಿಣಾಮ ನೋಡಬಹುದು. ಅದರಲ್ಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಶುಕ್ರ ಐಶ್ವರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯ ಪ್ರತೀಕವಾಗಿದೆ.
ಈಗ ಶುಕ್ರನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದ್ರೆ ಈಗ ಬುಧ ಗ್ರಹವು ಮೀನ ರಾಶಿಗೆ ಸಂಚರಿಸುತ್ತಿದೆ. ಇದು ಅಪರೂಪದ ಯೋಗಕ್ಕೆ ಕಾರಣವಾಗುತ್ತಿದೆ. ಮೀನ ರಾಶಿಯಲ್ಲಿ ಬುಧ ಹಾಗೂ ಶುಕ್ರನ ಸಂಯೋಗದಿಂದಾಗಿ ಲಕ್ಷ್ಮಿ ನಾರಾಯಣ ರಾಜಯೋಗಕ್ಕೆ ಕಾರಣವಾಗುತ್ತಿದೆ. ಇದೇ ಫೆಬ್ರವರಿಯಲ್ಲಿ ಶಿವರಾತ್ರಿಯ ಮಾರನೆ ದಿನದಂದು ಅಂದರೆ ಫೆ.27ರಂದು ಈ ಯೋಗ ರೂಪುಗೊಳ್ಳುತ್ತದೆ.

ಬುಧ ಗ್ರಹವನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಈ ಬುಧನು ವೇಗವಾಗಿ ಚಲಿಸುವ ಗ್ರಹವಾಗಿದೆ. ಇದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ 27 ರಂದು ಬುಧ ಗ್ರಹವು ಮೀನ ರಾಶಿಗೆ ಚಲಿಸುತ್ತದೆ. ಈ ಮೀನ ರಾಶಿಯಲ್ಲಿ ಬುಧನು ದುರ್ಬಲನಾಗುತ್ತಾನೆ. ಹಾಗೆ ಮೀನ ರಾಶಿಯಲ್ಲಿ ಶುಕ್ರನು ಪ್ರಬಲನಾಗುವುದರಿಂದ ಇಲ್ಲಿ ನೀಚಪಂಗ ರಾಜಯೋಗ ರೂಪುಗೊಳ್ಳುತ್ತದೆ. ಒಂದೇ ರಾಶಿಯಲ್ಲಿ ಎರಡು ಅಪರೂಪದ ಯೋಗ ಉಂಟಾಗುತ್ತಿರುವುದು ಹಲವು ರಾಶಿಗಳಿಗೆ ಲಾಭದಾಯಕವಾಗುತ್ತಿದೆ.
ಮೀನ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗದಿಂದ ಉಂಟಾಗುತ್ತಿರುವ ಈ ಎರಡು ಯೋಗದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ನೀಚಪಂಗ ರಾಜಯೋಗ ಹಾಗೂ ಲಕ್ಷ್ಮೀ ನಾರಾಯಣ ರಾಜಯೋಗದಿಂದಾಗಿ ವೃಷಭ ರಾಶಿಯವರಲ್ಲಿ ಆರ್ಥಿಕ ಪ್ರಗತಿಗೆ ಕಾರಣವಾಗುತ್ತಿದೆ. ಬಹಳ ದಿನಗಳಿಂದ ಬಾಕಿ ಉಳಿದ ಕೆಲಸಗಳು ಈ ಸಮಯದಲ್ಲಿ ಮುಗಿಯಲಿದೆ. ನಿಮ್ಮ ಹಲವು ಹಣಕಾಸು ವ್ಯವಹಾರದಲ್ಲಿ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಎಲ್ಲಾ ಸಮಯದಲ್ಲೂ ನಿಮಗೆ ಯಶಸ್ಸಿನ ದಿಕ್ಕು ಕಾಣಿಸಲಿದೆ. ಕುಟುಂಬದಲ್ಲಿ ನಿಮ್ಮ ಮಾತುಗಳಿಗೆ, ಅಭಿಪ್ರಾಯಗಳಿಗೆ ತಕ್ಕ ಬೆಲೆ ಸಿಗಲಿದೆ. ವೈವಾಹಿಕ ಜೀವನ ಆನಂದಮಯವಾಗಿರಲಿದೆ. ನಿಮ್ಮ ಆರೋಗ್ಯದಲ್ಲೂ ಸುಧಾರಣೆ ನೋಡಬಹುದು.
ಕರ್ಕ ರಾಶಿ
ಮೀನ ರಾಶಿಯಲ್ಲಿ ಬುಧ ಹಾಗೂ ಶುಕ್ರನ ಸಂಯೋಗವು ಕರ್ಕ ರಾಶಿಯವರಲ್ಲಿ ಲಾಭ ನೋಡಬಹುದು. ನೀವು ಈ ಹಿಂದೆ ನೀಡಿದ್ದ ಸಾಲ ಮರುಪಾವತಿ ಆಗಬಹುದು, ಹಾಗೆ ಒಂದಿಷ್ಟು ಹಣ ಬರುವಂತಹ ಕೆಲಸ ಮಾಡಲಿದ್ದೀರಿ. ವ್ಯಾಪಾರ ಹಾಗೂ ವ್ಯವಹಾರಿಕಾ ಕ್ಷೇತ್ರದಲ್ಲಿದ್ದರೆ ನಿಮಗೆ ಅಧಿಕ ಲಾಭ ಆಗಲಿದೆ. ದಾಂಪತ್ಯ ಜೀವನದಲ್ಲಿ ಶುಭ ಸುದ್ದಿಗಳ ಕೇಳಲಿದ್ದೀರಿ. ಈ ಸಮಯದಲ್ಲಿ ಮನೆಗೆ ಐಷಾರಾಮಿ ವಸ್ತುವೊಂದನ್ನು ಖರೀದಿಸಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು.
ಮೀನ ರಾಶಿ
ಬುಧ ಹಾಗೂ ಶುಕ್ರನು ಮೀನ ರಾಶಿಯಲ್ಲಿ ಸಂಯೋಗವಾಗುತ್ತಿರುವುದು ಈ ರಾಶಿಯವರಿಗೆ ಶುಭವಾಗುತ್ತಿದೆ. ನಿಮ್ಮಲ್ಲಿ ದಿಢೀರ್ ಆರ್ಥಿಕ ಲಾಭ ನೋಡಬಹುದು. ಶುಭ ಕಾರ್ಯಕ್ಕಾಗಿ ದೂರ ಪ್ರಯಾಣ ಮಾಡಬಹುದು. ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ. ಮಕ್ಕಳ ಭವಿಷ್ಯಕ್ಕಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ಯಶಸ್ಸು ಆಗಲಿದೆ. ಸರ್ಕಾರಿ ನೌಕರರಿಗೆ ಶುಭ ಕಾಲ. ಹೊಸ ಉದ್ಯಮ, ಕೆಲಸ, ವ್ಯವಹಾರ ಆರಂಭಿಸುತ್ತಿರುವವರಿಗೆ ಈ ಸಮಯದಲ್ಲಿ ಲಾಭ ಹೆಚ್ಚಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications