Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧನ ನಕ್ಷತ್ರ ಬದಲಾವಣೆ: ಏಪ್ರಿಲ್‌ನಿಂದ ಈ ರಾಶಿಗಳ ಅದೃಷ್ಟವೇ ಬದಲಾಗಲಿದೆ
ಗ್ರಹಗಳ ರಾಜಕುಮಾರ ಬುಧಗ್ರಹ ಪ್ರತಿ ಬಾರಿ ರಾಶಿ ಅಥವಾ ನಕ್ಷತ್ರ ಬದಲಾವಣೆ ಮಾಡಿದಾಗೆಲ್ಲಾ ಅದರ ಪ್ರಭಾವ 12 ರಾಶಿಗಳ ಮೇಲೆ ಬೀರಲಿದೆ. ಇದಿಗ ಏಪ್ರಿಲ್ 27ಕ್ಕೆ ಬುಧ ಗ್ರಹ ನಕ್ಷತ್ರ ಬದಲಾವಣೆ ಮಾಡಲಿದೆ. ಬುಧನು ಗುರು ಅಧಿಪತಿಯಾಗಿರುವ ರೇವತಿ ನಕ್ಷತ್ರಕ್ಕೆ ಸಂಚಾರ ಮಾಡಲಿದೆ. ಬುಧನು ನಕ್ಷತ್ರ ಬದಲಾವಣೆ ಮಾಡಿದಾಗ ಕೆಲ ರಾಶಿಯವರಿಗೆ ತುಂಬಾನೇ ಅದ್ಭುತವಾಗಿರಲಿದೆ. ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಬದಲಾವಣೆ ಕಂಡು ಬರಲಿದೆ.

ವೃಷಭ ರಾಶಿ
ಬುಧನ ನಕ್ಷತ್ರ ಬದಲಾವಣೆ ವೃಷಭ ರಾಶಿಯವರ ಬದುಕಿನಲ್ಲಿ ತುಂಬಾನೇ ಧನಾತ್ಮಕ ಬದಲಾವಣೆ ಕಂಡು ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಲಿದೆ, ಈ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ
ನೀವು ಆರ್ಥಿಕವಾಗಿ ತುಂಬಾನೇ ಲಾಭ ಪಡೆಯುತ್ತೀರಿ, ಆ ಹಿಂದೆ ಏನಾದರು ನಷ್ಟ ಉಂಟಾಗಿದ್ದರೆ ಈ ಅವಧಿಯಲ್ಲಿ ಸರಿಪಡಿಸಲು ಸಾಧ್ಯವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ. ಮನೆಯ ಸೌಕರ್ಯ ಹೆಚ್ಚಾಗಲಿದೆ, ನೀವು ವಾಹನ ಅಥವಾ ಮನೆ ಖರೀದಿ ಮಾಡಬೇಕೆಂದಿದ್ದರೆ ಬುಧ ಗ್ರಹದ ಅನುಗ್ರಹದಿಂದ ಸಾಧ್ಯವಾಗಲಿದೆ.
ಧನು ರಾಶಿ
ರೇವತಿ ನಕ್ಷತ್ರದಲ್ಲಿ ಬುಧ ಸಂಚಾರ ಮಾಡಿದ ಬಳಿಕ ನಿಮ್ಮ ಬದುಕಿನಲ್ಲಿ ನೀವು ಅನೇಕ ಧನಾತ್ಮಕ ಬದಲಾವಣೆ ಕಾಣುತ್ತೀರಿ, ಏಕೆಂದರೆ ಅದೃಷ್ಟದ ಬೆಂಬಲ ನಿಮಗಿರಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ, ಬಡ್ತಿ ನಿರೀಕ್ಷೆಯಲ್ಲಿರುವವರಿಗೆ ಬಡ್ತಿ ಸಿಗಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬ ಬೆಂಬಲ ಸಿಗಲಿದೆ, ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಬುಧ ಅನುಕೂಲಕರ ಸ್ಥಾನದಲ್ಲಿರುವಾಗ ಈ ಪ್ರಯೋಜನ ಪಡೆಯುತ್ತೀರಿ:
ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು: ಬುಧ ಅನುಕೂಲಕರ ಸ್ಥಾನದಲ್ಲಿದ್ದರೆ ನಿಮ್ಮ ಸಂವಹನ ಶೈಲಿಯಿಂದ ಇತರರನ್ನು ಆಕರ್ಷಿಸುತ್ತೀರಿ. ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ.
ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ
ಬುಧನು ಅನುಕೂಲಕರ ಸ್ಥಾನದಲ್ಲಿದ್ದರೆ ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ. ಹೂಡಿಕೆಯಿಂದ ಉತ್ತಮ ಲಾಭ ಪಡೆಯುತ್ತೀರಿ.
ಸೌಕರ್ಯ ಹೆಚ್ಚಾಗಲಿದೆ
ಬುಧನು ಅನುಕೂಲಕರ ಸ್ಥಾನದಲ್ಲಿದ್ದರೆ ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ವಾಹನ ಅಥವಾ ಮನೆ ಖರೀದಿ ಮಾಡಬೇಕೆಂದು ಬಯಸಿದ್ದರೆ ಬುಧನ ಅನುಗ್ರಹದಿಂದ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications