Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಬುಧ ಮೇಷದಲ್ಲಿ ಹಿಮ್ಮುಖ ಚಲನೆ ಶುರು ಮಾಡಿದಾಗ ಈ 6 ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆ
ಯಾವುದೇ ಗ್ರಹವು ಹಿಮ್ಮುಖ ಚಲನೆ ಮಾಡುವಾಗ ಅದರ ಪ್ರಭಾವ ಉತ್ತಮವಾಗಿರಲ್ಲ ಎಂದು ಹೇಳಲಾಗುವುದು. ಬುಧವು ನಮ್ಮ ಬುದ್ಧಿ, ಯೋಚನಾಶಕ್ತಿ ಇವುಗಳ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ.
ಬುಧವು ಏಪ್ರಿಲ್ 2ಕ್ಕೆ ಹಿಮ್ಮುಖ ಚಲನೆ ಮಾಡಲಿದೆ. ಬುಧವು ಹಿಮ್ಮುಖ ಚಲನೆ ಮಾಡುವಾಗ ಕೆಲವೊಂದು ರಾಶಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರುವುದು. ಈ ಅವಧಯಲ್ಲಿ ಯಾವ ರಾಶಿಯವರು ಜಾಗ್ರತೆವಹಿಸಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಬುಧನ ಹಿಮ್ಮುಖ ಚಕನೆಯ ವೇಳೆ ಮೇಷ ರಾಶಿಯವರು ಕೆಲವೊಂದು ಆರೋಗ್ಯ ಸಮಸ್ಯೆ ಎದುರಿಸಬಹುದು. ಈ ಸಮಯದಲ್ಲಿ ನೀವು ಯಾವುದೇ ಆರೋಗ್ಯ ಸಮಸ್ಯೆ ಎದುರಿಸಬೇಡಿ. ಈ ಅವಧಿಯಲ್ಲಿ ನೀವು ಒತ್ತಡ ಮತ್ತು ನಿರಾಶೆಯನ್ನು ಅನುಭವಿಸಬಹುದು. ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ನೀವು ಧ್ಯಾನದ ಕಡೆಗೆ ಹೆಚ್ಚು ಗಮನಹರಿಸಿ, ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಿ.
ವೃಷಭ ರಾಶಿ
ಈ ಅವಧಿಯಲ್ಲಿ ನೀವು ವೃತ್ತಿ ಬದುಕಿನಲ್ಲಿ ಸಮಸ್ಯೆ ಎದುರಿಸುತ್ತೀರಿ, ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುವುದು. ಈ ಅವಧಿಯಲ್ಲಿ ಆರೋಗ್ಯವೂ ದುರ್ಬಲವಾಗಿರುತ್ತದೆ. ಈ ಅವಧಿಯಲ್ಲಿ ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ವೃತ್ತಿ ಬದುಕಿನಲಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.
ಕರ್ಕ ರಾಶಿ
ಮೇಷ ರಾಶಿಯಲ್ಲಿ ಬುಧ ಹಿಮ್ಮೆಟ್ಟುವಿಕೆಯು ಕರ್ಕ ರಾಶಿಯವರ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು.
ಕನ್ಯಾರಾಶಿ
ಏಪ್ರಿಲ್ 02, 2024 ರಂದು ಮೇಷ ರಾಶಿಯಲ್ಲಿ ಬುಧವು ಹಿಮ್ಮುಖವಾಗಿ ಚಲಿಸಲಾರಂಭಿಸಿದಾಗ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಿ. ಚಿಕ್ಕ ಆರೋಗ್ಯ ಸಮಸ್ಯೆ ಕಾಡಿದರೂ ನಿರ್ಲಕ್ಷ್ಯ ಮಾಡಬೇಡಿ.
ತುಲಾ ರಾಶಿ
ತುಲಾ ರಾಶಿಯವರು ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನೀವು ಮಾನಸಿಕವಾಗಿ ಅಸ್ವಸ್ಥರಾಗಬಹುದು. ನಿಮ್ಮ ಒತ್ತಡವು ತುಂಬಾ ಹೆಚ್ಚಾಗುತ್ತದೆ, ಈ ಅವಧಿಯಲ್ಲಿ ನಿದ್ರಾಹೀನತೆ ಕಾಡಬಹುದು. ಧ್ಯಾನದ ಕಡೆ ಗಮನಹರಿಸಿ.
ಧನು ರಾಶಿ
ಧನು ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಚಿಕಿತ್ಸೆಗಾಗಿ ಹೆಚ್ಚು ಹಣ ಖರ್ಚಾಗುವುದು. ಯಾವುದೇ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಬೇಡಿ.
ಬುಧನ ಕೆಟ್ಟ ಪರಿಣಾಮ ಕಡಿಮೆಯಾಗಲು ಪರಿಹಾರ
ಬುಧವಾರ ಗಣೇಶನಿಗೆ ಪೂಜೆ ಮಾಡಿ ಗರಿಕೆ ಹಾಗೂ ಮೋದಕ ಅರ್ಪಿಸಿ.
ನೀವು ಕಿರು ಬೆರಳಿನಲ್ಲಿ ಪಚ್ಚೆರತ್ನದ ಹರಳು ಧರಿಸಿದರೆ ಒಳ್ಳೆಯದು.
ಪ್ರತಿದಿನ ಬೆಳಗ್ಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಿಸಿ. ಇದರಿಂದ ನಿಮಗೆ ಯಾವ ದೋಷವೂ ಉಂಟಾಗುವುದಿಲ್ಲ.
ಬುಧ ಮಹಾದಶ ಹೊಂದಿದ್ದರೆ ಬುಧ ಯಂತ್ರ ಸ್ಥಾಪಿಸಿ.
ಬುಧವಾರ ಹೆಣ್ಮಕ್ಕಳಿಗೆ ಹಸಿರು ಬಳೆ ಅಥವಾ ವಸ್ತ್ರ ಉಡುಗೊರೆಯಾಗಿ ನೀಡಿ.
ಈ ಮಂತ್ರ ಪಠಿಸಿ
"ಓಂ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ". ನಿರ್ವಿಘ್ನಂ ಕುರು ಮೇ ದೇವ್, ಸರ್ವ ಕಾರ್ಯೇಷು ಸರ್ವದಾ.
'ಓಂ ಏಕದಂತಾಯ ವಿಹೇ ವಕ್ರತುಂಡಯ ಧೀಮಹಿ ತನ್ನೋ ದಾಂತಿ: ಪ್ರಚೋದಯಾತ್
'ಓಂ ನಮೋ ಗಣಪತಯೇ ಕುಬೇರ ಯೇಕಾದ್ರಿಕೋ ಫಟ್ ಸ್ವಾಹಾ.'
ಅಲ್ಲದೆ ಪ್ರತಿದಿನ 'ಓಂ ಬಂ ಬುಧಾಯ ನಮಃ' ಮತ್ತು 'ಓಂ ಐಂ ಶ್ರೀ ಶ್ರೀ ಬುಧಾಯ ನಮಃ!' ಜಪ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುವುದು, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಎಲ್ಲವೂ ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications