Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ವಿಜಯದಶಮಿಯಂದೇ ಬುಧ-ಮಂಗಳ ಸಂಯೋಗ: 50 ವರ್ಷದ ಬಳಿಕ ವಿಶೇಷ ಯೋಗ!
ಜ್ಯೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳ ಚಲನೆಯು ಒಂದೊಂದು ರೀತಿಯಲ್ಲಿ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲು ಕೆಲವೊಂದು ಗ್ರಹಗಳ ಚಲನೆ ನೇರವಾಗಿವಾಗಿಯೂ ಹಾಗೆ ಮತ್ತೆ ಕೆಲವು ಪರೋಕ್ಷವಾಗಿಯೂ ಪರಿಣಾಮ ಉಂಟು ಮಾಡಲಿದೆ. ಗ್ರಹಗಳ ಸಂಚಾರದಿಂದ ಎಲ್ಲಾ 9 ಗ್ರಹಗಳ ಮೇಲೆಯೂ ಅದರ ಪ್ರಭಾವ ಇರಲಿದೆ.
ಹಾಗೆ ಗ್ರಹಗಳ ಸಂಯೋಗಗಳು ಶುಭ ಹಾಗೂ ಅಶುಭ ಪ್ರಯೋಜನಗಳ ತರುವುದು ಸಹ ನಾವು ನೋಡಬಹುದು. ಇನ್ನು ಒಂದು ಗ್ರಹ ಒಂದು ರಾಶಿಯಲ್ಲಿ ನಿರ್ದಿಷ್ಟ ಸಮಯದಲ್ಲಿ ಚಲಿಸುವಾಗ ಆ ರಾಶಿಯಲ್ಲಿನ ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳವು ಧೈರ್ಯ, ಶೌರ್ಯ, ಶಕ್ತಿ ಮತ್ತು ಧೈರ್ಯದ ಅಂಶವಾಗಿದೆ.

ಪ್ರಸ್ತುತ, ಮಂಗಳವು ತುಲಾ ರಾಶಿಯಲ್ಲಿ ಪ್ರಯಾಣಿಸುತ್ತಿದೆ. ಮತ್ತೊಂದೆಡೆ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದ್ದು, ಬುಧನು ಈಗ ತುಲಾ ರಾಶಿ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2ರ ವಿಜಯದಶಮಿಯಂದು ಬುಧನು ತುಲಾ ರಾಶಿಗೆ ಚಲಿಸುತ್ತಾನೆ. ಇದು ಮಂಗಳ ಹಾಗೂ ಬುಧನ ಸಂಯೋಗಕ್ಕೆ ಕಾರಣವಾಗುತ್ತಿದೆ.
ಅದ್ರಲ್ಲೂ ವಿಜಯದಶಮಿಯಂದು ಈ ಎರಡೂ ಗ್ರಹಗಳ ಸಂಯೋಗವು ವಿಶೇಷವಾಗಿರಲಿದೆ. ಈ ವಿಜಯದಶಮಿಯಂದು ಮಂಗಳ ಮತ್ತು ಬುಧನ ಸಂಯೋಗವು ತುಲಾ ರಾಶಿಯಲ್ಲಿ ಸಂಭವಿಸುತ್ತದೆ. ಈ ಸಂಯೋಗವು ಸುಮಾರು 50 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಗ್ರಹಗಳ ಅಪರೂಪದ ಸಂಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಪ್ರಭಾವ ಉಂಟುಮಾಡಲಿದೆ.
ವಿಶೇಷ ದಿನದಲ್ಲಿ ವಿಶೇಷ ಗ್ರಹಗಳ ಸಂಯೋಗವು ಹಲವು ರಾಶಿಗಳಿಗೆ ಶುಭವಾಗುತ್ತಿವೆ. ಹಲವು ರೀತಿಯ ಅದೃಷ್ಟಗಳಿಗೆ ಇದು ಕಾರಣವಾಗಲಿದೆ. ವ್ಯವಹಾರಗಳು, ಸಂತೋಷಗಳು, ಭೌತಿಕ ವಿಚಾರಗಳು, ಹಣಕಾಸು ಪರಿಸ್ಥಿತಿಗಳ ವಿಚಾರದಲ್ಲಿ ನಿಮಗೆ ಹಲವು ರೀತಿ ಅನುಕೂಲವಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಇದು ಶುಭಕರ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ಬುಧ ಮತ್ತು ಮಂಗಳ ಗ್ರಹಗಳು ಧನು ರಾಶಿಯ 11 ನೇ ಮನೆಯಲ್ಲಿ ಸಂಯೋಗವಾಗಲಿದೆ. ಇದು ನಿಮಗೆ ಹಲವು ರೀತಿ ಅನುಕೂಲಗಳಿಗೆ ಕಾರಣವಾದರೂ ಮುಖ್ಯವಾಗಿ ನಿಮ್ಮ ಆದಾಯ ಹೆಚ್ಚಳಕ್ಕೆ ನೇರ ಕಾರಣ ಆಗಲಿದೆ. ಹೊಸ ಆದಾಯ ಮೂಲಗಳನ್ನು ನೀವು ಹುಡುಕಬಹುದು, ವ್ಯಾಪಾರಿಗಳು ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಹಣಗಳಿಸುವ ಅವಕಾಶವಿದೆ. ಹೂಡಿಕೆಗಳು ಅದೃಷ್ಟದ ಕಾರಣಕ್ಕೆ ಲಾಭ ಮಾಡಲಿವೆ. ನಿಮ್ಮ ಹಳೆಯ ಸಾಲಗಳು ಮರುಪಾವತಿಯಾಗಲಿದೆ.
ಮೇಷ ರಾಶಿ
ಬುಧ ಮತ್ತು ಮಂಗಳ ಮೇಷ ರಾಶಿಯ 7ನೇ ಮನೆಯಲ್ಲಿ ಸಂಯೋಗವಾಗುತ್ತಾನೆ. ವಿವಾಹಿತರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದೇಶ ಪ್ರವಾಸ, ಕುಟುಂಬಸ್ಥರೊಂದಿಗೆ ಪುಣ್ಯಕ್ಷೇತ್ರಗಳ ಭೇಟಿ ನೀಡುವ ಕುರಿತು ಆಲೋಚಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯ 4ನೇ ಮನೆಯಲ್ಲಿ ಬುಧ ಮತ್ತು ಮಂಗಳ ಸಂಯೋಗವಾಗಲಿದ್ದಾರೆ. ಇದರಿಂದಾಗಿ ಉತ್ತಮ ಭೌತಿಕ ಸುಖಗಳನ್ನು ಪಡೆಯಲಿದ್ದಾರೆ. ಹೊಸ ಮನೆ ನಿರ್ಮಾಣ ಮತ್ತು ವಾಹನ ಖರೀದಿಸುವ ಅವಕಾಶಗಳು ಇರುತ್ತವೆ. ಉತ್ತಮ ಆರ್ಥಿಕ ಲಾಭಗಳೂ ಇರುತ್ತವೆ. ಬಹಳಷ್ಟು ಹಣವನ್ನು ಗಳಿಸುವ ಅವಕಾಶಗಳಿವೆ. ಮುಖ್ಯವಾಗಿ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಪ್ರೇಮ ಸಂಬಂಧಗಳು ಮಧುರವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications