Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಂಗಳನ ದಿಕ್ಕು ಬದಲಾವಣೆ: ಈ ರಾಶಿಯವರ ಹಣಕಾಸು ಸ್ಥಿತಿ ಉತ್ತುಂಗಕ್ಕೆ..!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳಲ್ಲಿ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗಿರುವುದು ಮಂಗಳ ಗ್ರಹವನ್ನು. ಮಂಗಳ ಗ್ರಹದ ಸಂಚಾರದ ಮೇಲೆ ಹತ್ತು ಹಲವು ಯೋಗಗಳು ರೂಪುಗೊಳ್ಳುತ್ತವೆ. ಹೀಗಾಗಿ ಗ್ರಹಗಳ ಅಧಿಪತಿ ಎಂದು ಮಂಗಳನ ಕರೆಯಲಾಗಿದೆ. ಮಂಗಳ ಶೌರ್ಯ, ಶಕ್ತಿ, ಶುಭದ ಸಂಕೇತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಮಂಗಳನ ಸಂಚಾರ ಹೇಗಿರಲಿದೆ ಎಂಬುದರ ಮೇಲೆ 12 ರಾಶಿಗಳ ಶುಭ ಹಾಗೂ ಅಶುಭವನ್ನು ಹೇಳಲಾಗುತ್ತದೆ.
ಅದರಲ್ಲೂ ಮಂಗಳನನ್ನು ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿ ಎಂದು ಕರೆಯಲಾಗಿದೆ. ಈಗ ಮಂಗಳನು ತನ್ನ ದಿಕ್ಕು ಬದಲಿಸುತ್ತಿದ್ದಾನೆ. ಮಂಗಳ ಪ್ರಸ್ತುತ ತನ್ನ ಹಿಮ್ಮುಖ ಚಲನೆಯಲ್ಲಿದ್ದಾನೆ. ಇದು ಹಲವು ರೀತಿಯ ಅಡ್ಡ ಪರಿಣಾಮದಿಂದ ಹಿಡಿದು ಒಂದಿಷ್ಟು ಅಶುಭಕ್ಕೂ ಕಾರಣವಾಗುತ್ತಿದೆ. ಇನ್ನು ಇದೇ ಫೆಬ್ರವರಿಯ 24ರಂದು ಮಂಗಳನು ನೇರವಾಗಿ ಚಲಿಸಲಿದ್ದಾನೆ.

ಮಂಗಳನ ಈ ನೇರ ಸಂಚಾರವು ಹಲವು ರಾಶಿಗಳಲ್ಲಿ ಹಲವು ರೀತಿಯ ಪ್ರಭಾವ ಹಾಗೆ ಲಾಭ ನಷ್ಟಕ್ಕೆ ಕಾರಣವಾಗುತ್ತಿದೆ. ಕೆಲವೊಂದು ರಾಶಿಗಳು ಈ ಸಮಯದಲ್ಲಿ ಮಂಗಳನ ಬೆಂಬಲ ಪಡೆಯಲಿವೆ. ಇದು ಅವರ ಅದೃಷ್ಟ ಬದಲಿಸಬಹುದು. ಹಾಗಾದ್ರೆ ಮಂಗಳನ ಈ ನೇರ ಚಲನೆಯು ಯಾವ ರೀತಿ ಲಾಭಕ್ಕೆ ಕಾರಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಲಾ ರಾಶಿ
ಮಂಗಳನ ನೇರ ಸಂಚಾರವು ತುಲಾ ರಾಶಿಯ 10ನೇ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದ ಈ ರಾಶಿ ಜನರಲ್ಲಿ ಲಾಭದಾಯಕ ಪರಿಣಾಮವನ್ನು ನಾವು ನೋಡಬಹುದು. ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದು ದೂರಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಶುಭವಾಗುತ್ತದೆ. ಕೆಲಸ ಕಾರ್ಯಗಳಿಗಾಗಿ ನೀವು ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ಕೆಲಸ ವಿಚಾರವಾಗಿ ಇದ್ದ ಸಮಸ್ಯೆಯನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳುತ್ತೀರಿ. ಹಣಕಾಸಿನ ವಿಚಾರದಲ್ಲಿ ಸ್ಥಿತಿ ಸುಧಾರಿಸಲಿದೆ. ಅವಿವಾಹಿತರು ಮಂಗಳಕರ ಸುದ್ದಿ ಕೇಳುವಿರಿ.
ಸಿಂಹ ರಾಶಿ
ಮಂಗಳ ಚಲನೆಯು ಸಿಂಹ ರಾಶಿಯ 11ನೇ ಮನೆಯಲ್ಲಿ ನಡೆಯಲಿದೆ, ಇದರಿಂದ ಸಿಂಹರಾಶಿಯವರಲ್ಲಿ ಹಣಕಾಸಿನ ವಿಚಾರವಾಗಿ ಅಂದುಕೊಂಡಿದ್ದ ಕೆಲಸ ಕಾರ್ಯಗಳು ಸುಗಮವಾಗುತ್ತವೆ. ಹೊಸ ಅದಾಯ ನಿಮ್ಮ ಕೈಸೇರಲಿದೆ. ನಿಮ್ಮ ಖರ್ಚುಗಳ ಮೇಲೆಯೂ ನಿಗಾ ಇಡಬೇಕಾಗುತ್ತದೆ. ಸಣ್ಣ ವ್ಯಾಪಾರಿಗಳಲ್ಲಿ ತಮ್ಮ ವ್ಯವಹಾರ ವೃದ್ಧಿಸಿಕೊಳ್ಳುವ ಭಾಗ್ಯ ಇರಲಿದೆ. ಭವಿಷ್ಯದ ದೃಷ್ಟಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಮುಂದೆ ಉಳಿತಾಗಲಿದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಸಕಾಲದಲ್ಲಿ ಬಡ್ತಿ ಸಿಗಬಹುದು. ಮಾಡಿದ ತಪ್ಪುಗಳನ್ನು ಮತ್ತೆ ಮಾಡಬೇಡಿ. ನೀಡಿದ್ದ ಸಾಲ ವಾಪಾಸು ಬರಬಹುದು, ಹೊಸ ಖರ್ಚುಗಳು ನಿಮ್ಮಲ್ಲಿ ಕಾಣಸಿಗುತ್ತವೆ.
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಮಂಗಳ ಗ್ರಹದ ಚಲನೆ ಇರಲಿದೆ. ಹೀಗಾಗಿ ನೀವು ಮಾಡುತ್ತಿರುವ ಕೆಲಸದಲ್ಲಿ ಶ್ರಮ ಹಾಕಿದರೆ ಪ್ರತಿಫಲ ಖಂಡಿತ ಸಿಗಲಿದೆ. ನಿಮ್ಮ ಮುಂದಿನ ದಿನಗಳಲ್ಲಿ ಹೂಡಿಕೆ, ಉಳಿತಾದ ಹಣ ಕೈ ಸೇರುತ್ತದೆ. ಆಸ್ತಿ ವ್ಯವಹಾರದಲ್ಲಿ ನಿಮಗೆ ಯಶಸ್ಸು ಇದೆ. ಆರ್ಥಿಕ ಪ್ರಗತಿಗೆ ಕಾರಣವಾಗುತ್ತಿದೆ. ವಾಹನ ಲಾಭದ ನಿರೀಕ್ಷೆ ಇಡಬಹುದು. ಹೂವು, ತರಕಾರಿ, ಹಣ್ಣಿನ ವ್ಯಾಪಾರಿಗಳಿಗೆ ಇದು ಲಾಭದಾಯಕವಾಗಲಿದೆ. ಆಪ್ತರೊಬ್ಬರ ಆಗಮನದಿಂದಾಗಿ ನಿಮ್ಮ ಕೆಲಸ ಜವಾಬ್ದಾರಿ ಬದಲಾಗಬಹುದು. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ಉಂಟಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
