Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
ಏಪ್ರಿಲ್‌ನಲ್ಲಿ ಮಂಗಳ ಗ್ರಹ ರಾಶಿ ಬದಲಾವಣೆ ಮಾಡಲಿದೆ. ಏಪ್ರಿಲ್ 23, 2024 ರಂದು ಬೆಳಗ್ಗೆ 08:19 ಮಂಗಳ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಲಿದೆ. ಮಂಗಳ ಶುಭ ಸ್ಥಾನದಲ್ಲಿದ್ದರೆ ತುಂಬಾನೇ ಮಂಗಳಕರ ಪ್ರಯೋಜನ ಪಡೆಯಬಹುದು. ಅದೇ ದುರ್ಬಲ ಸ್ಥಾನದಲ್ಲಿದ್ದರೆ ಕೆಲ ತೊಂದರೆಗಳನ್ನು ಉಂಟು ಮಾಡುತ್ತದೆ. ಈ ಸಂಚಾರ ಈ ಕೆಳಗಿನ ರಾಶಿಗಳಿಗೆ ವೃತ್ತಿ ಜೀವನದಲ್ಲಿ ಕೆಲ ಸಮಸ್ಯೆಯನ್ನು ಉಂಟು ಮಾಡಬಹುದು.
ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು:

ಮೇಷ ರಾಶಿ
ಮೇಷ ರಾಶಿಯವರು ವೃತ್ತಿಜೀವನದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಕೆಲಸ ಪೂರ್ಣಗೊಳಿಸಲು ಅಡೆತಡೆ ಉಂಟಾಗುವುದು, ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಕೆಲಸದಲ್ಲಿ ನೀವು ಬಯಸಿದ ಪ್ರಯೋಜನ ಸಿಗದೆ ನಿಮಗೆ ನಿರಾಸೆ ಉಂಟಾಗುವುದು. ನೀವು ಕೆಲಸ ಬದಲಾಯಿಸಲು ಯೋಚಿಸಬಹುದು, ಆದರೆ ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಒಂದು ಕೆಲಸ ಸಿಕ್ಕ ಬಳಿಕವಷ್ಟೇ ಮತ್ತೊಂದು ಕೆಲಸಕ್ಕೆ ಪ್ರಯತ್ನಿಸಿ.
ಸಿಂಹ ರಾಶಿ
ಮಂಗಳನ ಸ್ಥಾನ ನಿಮಗೆ ಅನುಕೂಲಕರವಲ್ಲ, ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ನೀವು ನಿರೀಕ್ಷೆ ಮಾಡಿದ ಫಲ ಸಿಗದೇ ಹೋಗಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಾಗುವುದು, ಮಾನಸಿಕ ಕಿರಿಕಿರಿ ಉಂಟಾಗುವುದು. ಅಲ್ಲದೆ ಈ ಸಮಯದಲ್ಲಿ ಸಹೋದ್ಯೋಗಿಗಳ ಬೆಂಬಲವು ಸಿಗುವುದಿಲ್ಲ. ಈ ಸಮಯದಲ್ಲಿ ಕಣ್ಮುಚ್ಚಿ ಯಾರನ್ನೂ ನಂಬಬೇಡಿ, ನಿಮ್ಮ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳದೆ ತಾಳ್ಮೆಯಿಂದ ತೆಗೆದುಕೊಳ್ಳಿ.
ತುಲಾ ರಾಶಿ
ತುಲಾ ರಾಶಿಯವರೂ ಈ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸಬಹುದು. ವೃತ್ತಿ ಜೀವನದಲ್ಲಿ ನೀವು ಬಯಸಿದ ಯಶಸ್ಸು ಸಿಗುವುದು ಕಷ್ಟವಾಗುವುದು. ನಿಮಗೆ ಕೆಲಸದ ಒತ್ತಡ ಹೆಚ್ಚಿರಲಿದೆ, ಮೇಲಾಧಿಕಾರಿಗಳ ಬೆಂಬಲವೂ ಸಿಗುವುದಿಲ್ಲ. ಈ ಸಮಯದಲ್ಲಿ ಬೇರೆಯವರ ಮಾತು ಕೇಳುವ ಬದಲಿಗೆ ನಿಮ್ಮ ಕೆಲಸದತ್ತ ಗಮನಹರಿಸಿ.
ಮಕರ ರಾಶಿ
ಮಕರ ರಾಶಿಯವರಿಗೂ ಈ ಮಂಗಳ ಸಂಚಾರ ಅನುಕೂಲಕರವಲ್ಲ. ನೀವು ಹೆಚ್ಚು ಶ್ರಮ ಹಾಕುತ್ತೀರಿ, ಆದರೆ ಕಡಿಮೆ ಫಲಿತಾಂಶ ದೊರೆಯಲಿದೆ. ನೀವು ಮಾಡಿದ ಕೆಲಸವನ್ನು ಗುರುತಿಸದೇ ಹೋಗಬಹುದು, ಇದರಿಂದ ಮನಸ್ಸಿಗೆ ತುಂಬಾನೇ ನೋವುಂಟಾಗುವುದು. ಆದರೆ ನುರಾಸೆ ಪಡಬೇಡಿ, ಎಲ್ಲವೂ ಸರಿಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಮಂಗಳವ ಮೀನ ರಾಶಿಯನ್ನು ಪ್ರವೇಶಿಸಿದಾಗ ನೀವು ಜಾಗರೂಕರಾಗಿರಬೇಕು. ವೃತ್ತಿ ಬದುಕಿನಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ನೀವು ಕೆಲವು ಕಷ್ಟಕರ ಸಂದರ್ಭಗಳು ಕೆಲ ಸಮಸ್ಯೆ ಹೆಚ್ಚಾಗುವುದು. ನೀವು ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ನಿಮ್ಮ ಕೈಯಿಂದ ತಪ್ಪಾಗದಂತೆ ಜಾಗ್ರತೆವಹಿಸಿ.
ಮಂಗಳನ ಕೆಟ್ಟ ಪ್ರಭಾವ ತಗ್ಗಿಸಲು ಪರಿಹಾರಗಳು
- ಮಂಗಳವಾರದಂದು ಹನುಮಾನ್ ಚಾಲೀಸ ಪಠಿಸುವುದು ಒಳ್ಳೆಯದು, ಸಾಧ್ಯವಾದರೆ ಪ್ರತಿನಿತ್ಯ ಪಠಿಸಿ.
- ಮನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಿರಲು ನಿಮ್ಮ ಕೋಪವನ್ನು ನಿಯಂತ್ರಿಸಿ
- ರಕ್ತದಾನ ಮಾಡುವುದು ಒಳ್ಳೆಯದು
- ಕೆಂಪು ಬಣ್ಣದ ಹಣ್ಣುಗಳನ್ನು ದಾನ ಮಾಡಿ
- ಮಂಗಳವಾರ ಮಂಗಗಳಿಗೆ ಆಹಾರ ನೀಡಿ
- ಓಂ ಭೋ ಭೋಮಾಯಾ ಮಂತ್ರ ಪಠಿಸಿ
- ಕೆಂಪು ಹರಳಿನ ಉಂಗುರ ಧರಿಸುವುದು ಒಳ್ಳೆಯದು
- ಈ ಸಮಯದಲ್ಲಿ ಕೆಂಪು ವಸ್ತ್ರ ಧರಿಸಬೇಡಿ
- ಅತ್ಯಧಿಕ ಊಟ ಮಾಡಬೇಡಿ
- ಈ ಅವಧಿಯಲ್ಲಿ ಪೂರ್ವಜರ ಆಸ್ತಿ ಮಾರಾಟ ಮಾಡಬೇಡಿ.
- ಗಾಯತ್ರಿ ಮಂತ್ರ ಪಠಿಸಿ
- ನೆಂಟರಿಗೆ ಅಥವಾ ಸ್ನೇಹಿತರಿಗೆ ತಾಮ್ರದ ಪಾತ್ರೆ ನೀಡಿ, ಗಾಯತ್ರಿ ಮಂತ್ರ ಪಠಿಸಿ
ಮಂಗಳ ಅಂಶಗಳು
ಬಣ್ಣ: ಕೆಂಪು
ಅಂಶ: ಬೆಂಕಿ
ವಾರ: ಮಂಗಳವಾರ
ಲೋಹ: ತಾಮ್ರ
ಹರಳು: ಕೆಂಪುಹರಳು
ಮೇಷ, ವೃಶ್ಚಿಕ ರಾಶಿಯ ಅಧಿಪತಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications